Hasirukranti
leadingnews ಉದ್ಯೋಗ ರಾಜ್ಯ ರಾಷ್ಟ್ರೀಯ ವಾಣಿಜ್ಯ

ಭಾರತದಲ್ಲಿ ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಸಬ್ಸಿಡಿ ಆಫರ್

 

ರಸಗೊಬ್ಬರ ಸಹಾಯಧನಕ್ಕೆ 65,000 ಕೋಟಿ : ಕೊವಿಡ್-19 ಲಸಿಕೆ ಅಭಿವೃದ್ಧಿಗೆ 900 ಕೋಟಿ : ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ 10,000 ಕೋಟಿ : ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ 28 ರಾಜ್ಯಗಳಲ್ಲೂ ಜಾರಿ : 10 ಕ್ಷೇತ್ರಗಳಿಗೆ ಪಿಎಲ್‍ಐಎಸ್ ಯೋಜನೆ ಘೋಷಿಣೆ

ನವದೆಹಲಿ, ನ.12: ಮಹಾಮಾರಿ ಕೋರೋನಾ ವೈರಸ್‍ಗೆ ತತ್ತರಿಸಿದ್ದ ಭಾರತದ ಆರ್ಥಿಕ ಸುಧಾರಣೆಯಾಗುತ್ತಿದೆ. ಈ ಕುರಿತ್ತು ಇನ್ನುಷ್ಟು ಆರ್ಥಿಕ ಪ್ರಚೋದಿಸುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಆತ್ಮನಿರ್ಭರ ಭಾರತ್ 3.0’ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಭಾರತದಲ್ಲಿ ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಸಬ್ಸಿಡಿ ಆಫರ್ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಅದೇ ರೀತಿ ರಸಗೊಬ್ಬರ ಸಹಾಯಧನಕ್ಕೆ, ಕೊವಿಡ್-19 ಲಸಿಕೆ ಅಭಿವೃದ್ಧಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಪ್ರತ್ಯೇಕ ಅನುದಾನವನ್ನು ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ಹೇಳಿದ್ದಾರೆ. ಆ ಮೂಲಕ ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರವು ಉತ್ತೇಜನ ನೀಡಿದೆ.

ನವದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ. ಎರಡು ವರ್ಷಗಳ ಕಾಲ ಉದ್ಯೋಗಿಗಳು ಮತ್ತು ಉದ್ಯೋಗದಾತರ ನಿವೃತ್ತಿ ನಿಧಿಯ ಕೊಡುಗೆಯನ್ನು ಈ ಸಬ್ಸಿಡಿ ಮೂಲಕ ನೀಡಲಾಗುತ್ತದೆ. ಉದ್ಯೋಗಿಗಳ ವೇತನದಲ್ಲಿ ಶೇಕಡಾ 12ರಷ್ಟು, ಉದ್ಯೋಗದಾತ ಸಂಸ್ಥೆಯಿಂದ ಶೇಕಡಾ.12ರಷ್ಟು ಸೇರಿ ಒಟ್ಟು ಶೇಕಡಾ. 24 ಶೇಕಡಾ ವೇತನವನ್ನು ಸಂಸ್ಥೆಗಳಿಗೆ ಎರಡು ವರ್ಷಗಳವರೆಗೆ ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಆತ್ಮನಿರ್ಭರ್ ಭಾರತ್ ಯೋಜನೆ ಅಡಿ ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ನೋಂದಾಯಿತ ಪ್ರತಿಯೊಬ್ಬ ಉದ್ಯೋಗಿಯು ಈ ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಇಪಿಎಫ್‍ಒ-ನೋಂದಾಯಿತ ಸಂಸ್ಥೆಯಲ್ಲಿ ಮಾಸಿಕ 15,000 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗೆ ಈ ಯೋಜನೆ ಅನ್ವಯವಾಗುತ್ತದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಉದ್ಯೋಗದಿಂದ ನಿರ್ಗಮಿಸಿದ ಹಾಗೂ ಹೊಸದಾಗಿ ಉದ್ಯೋಗಕ್ಕೆ ಸೇರಿದ್ದು, 15000ಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಈ ಯೋಜನೆ ಫಲಾನುಭವಿಗಳು ಆಗುತ್ತಾರೆ. ಕಳೆದ ಮಾರ್ಚ್.1, 2020ರ ನಂತರ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿದ್ದರೆ, ಅಥವಾ ಸಪ್ಟೆಂಬರ್ ಬಳಿಕ ಹೊಸ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದಲ್ಲಿ ಈ ಯೋಜನೆಯ ಅನುಕೂಲ ಪಡೆದುಕೊಳ್ಳಬಹುದು.

ಕೊರೊನಾವೈರಸ್ ಸಂದಿಗ್ಧ ಪರಿಸ್ಥಿತಿಯಲ್ಲಿ 50 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಕನಿಷ್ಠ ಎರಡು ಹೊಸ ಉದ್ಯೋಗಿಗಳನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಆ ಸಂಸ್ಥೆಗಳು ಕನಿಷ್ಠ ಐದು ಹೊಸ ಉದ್ಯೋಗಿಗಳನ್ನು ಸೇರಿಸಿಕೊಳ್ಳಲು ಅನುಮತಿಸಲಾಗಿದೆ. ಜೂನ್.31, 2021ರವರೆಗೂ ಈ ಯೋಜನೆಯು ಚಾಲ್ತಿಯಲ್ಲಿರುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ರಸಗೊಬ್ಬರ ಸಹಾಯಧನಕ್ಕೆ 65,000 ಕೋಟಿ

ಲಾಕ್ಡೌನ್ ಕಾರಣಕ್ಕೆ ಸಂಕಷ್ಟಕ್ಕೀಡಾಗಿರುವ ದೇಶದ ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶದಿಂದ ಬರೋಬ್ಬರಿ 29.89 ಲಕ್ಷ ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ಪ್ಯಾಕೇಜ್ ಘೋಷಿಸಿದ್ದು, ಈ ಪ್ಯಾಕೇಜ್‍ನಡಿ ಕೃಷಿ ವಲಯಕ್ಕೆ
ರಸಗೊಬ್ಬರ ಸಹಾಯಧನಕ್ಕಾಗಿ 65,000 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದು, ಇದಕ್ಕೆ ಹೊರತಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್ಗಾರ್ ಯೋಜನೆ ಪ್ರಕಾರ 10,000 ಕೋಟಿ ರೂಪಾಯಿಯನ್ನು ಈ ಹಣಕಾಸು ವರ್ಷದ ಅವಧಿಯಲ್ಲೇ ಪೂರೈಸಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಕೊವಿಡ್-19 ಲಸಿಕೆ ಅಭಿವೃದ್ಧಿಗೆ 900 ಕೋಟಿ

ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗೆ 900 ಕೋಟಿ ರೂಪಾಯಿ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಕೊರೊನಾವೈರಸ್ ಲಸಿಕೆ ಲಭ್ಯವಾದ ನಂತರದಲ್ಲಿ ಪ್ರತ್ಯೇಕ ಅನುದಾನವನ್ನು ನೀಡಲಾಗುತ್ತದೆ. ಇಂದು ಘೋಷಿಸಿದ ಅನುದಾನವು ಕೇವಲ ಲಸಿಕೆ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಸೀಮಿತವಾಗಿರುತ್ತದೆ. ಲಸಿಕೆಯ ಮೂಲವೆಚ್ಚ ಮತ್ತು ವಿತರಣೆ ವೆಚ್ಚವೂ ಪ್ರತ್ಯೇಕವಾಗಿರಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ 10,000 ಕೋಟಿ

ಭಾರತದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜಗಾರ್ ಯೋಜನೆಗೆ 10,000 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇನ್ನು ಮೊಬೈಲ್ ಉತ್ಪಾದನೆ, ಔಷಧ ಉತ್ಪಾದನೆ ಮತ್ತಿತರ 10 ಕ್ಷೇತ್ರಗಳಿಗೆ ಪಿಎಲ್‍ಐಎಸ್ ಯೋಜನೆಯನ್ನು ಕೂಡ ಘೋಷಿಸಿದ್ದಾರೆ.

ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ 28 ರಾಜ್ಯಗಳಲ್ಲೂ ಜಾರಿ

ನವ ದೆಹಲಿ, ನ.12; ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್” ಯೋಜನೆಯ ಕುರಿತು ಮಾಹಿತಿ ನೀಡಿರುವ ನಿರ್ಮಲಾ ಸೀತಾರಾಮನ್, “ಈ ವರ್ಷ ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ 28 ರಾಜ್ಯಗಳ 68.8 ಕೋಟಿ ಫಲಾನುಭವಿಗಳನ್ನು ಒಳಗೊಂಡ ಕೇಂದ್ರ ಪ್ರದೇಶಗಳನ್ನು ಈ ರಾಷ್ಟ್ರೀಯ ಯೋಜನೆಯ ಅಡಿಯಲ್ಲಿ ತರಲಾಗುತ್ತದೆ” ಈ ವ್ಯವಸ್ಥೆ ಬದಲಾಗಲಿದ್ದು, ಎಲ್ಲರಿಗೂ ಅನುಕೂಲವಾಗಲಿದೆ ಎನ್ನಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ರೈತರಿಗೆ ನೀಡಿದ ಸಹಾಯದ ಬಗ್ಗೆ ಮಾತನಾಡಿದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು, “NABARD” ಮೂಲಕ ಹೆಚ್ಚುವರಿ ತುರ್ತು ಕೆಲಸಕ್ಕೆ ಬಂಡವಾಳ ನಿಧಿಯಿಂದ ರೈತರಿಗೆ 25,000 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಕೆಳ ಹಂತದಲ್ಲಿ ರೈತರಿಗೆ ಹಣ ಸಿಗುವಂತೆ ಮಾಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‍ಗಳ ಮೂಲಕ 2.5 ಕೋಟಿ ರೈತರಿಗೆ ರೈತರಿಗೆ 1.4 ಲಕ್ಷ ಕೋಟಿ ರೂ. ವಿತರಿಸಲಾಗಿದೆ ಎಂದಿದ್ದಾರೆ.

Related posts

ಬೆಂಗಳೂರು: 27 ಕೋಟಿ ರೂ. ವಂಚಿಸಿದ್ದ ನಕಲಿ ಸ್ವಾಮಿ ಬಂಧನ

admins

ರಾಜ್ಯದಲ್ಲಿಂದು ಕೊರೋನಾ ಪಾಸಿಟಿವ್‍ಗಿಂತ ಹೆಚ್ಚು ಗುಣಮುಖ : 114 ಸೋಂಕಿತರು ಬಲಿ

Siddu Naduvinmani

ಭೋನಿಗೆ ಬಿದ್ದ ಚಿರತೆ – ಭಯದ ನೇರಳಿನಿಂದ ಹೊರ ಬಂದ ಜನತೆ

Siddu Naduvinmani

Leave a Comment