Hasirukranti
ಆರೋಗ್ಯ ಬೆಳಗಾವಿ

ಕೋವಿಡ್-19 ಲಸಿಕೆ ಎಲ್ಲರಿಗೂ ತಲುಪಿಸಲು ಸಿದ್ಧತೆ: ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ

ಬೆಳಗಾವಿ, ನ.6: ಕೋವಿಡ್-19 ಲಸಿಕೆ ಬಂದ ನಂತರ ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಸಮರ್ಪಕವಾಗಿ ವಿತರಿಸಲು ಆರೋಗ್ಯಾಧಿಕಾರಿಗಳು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ನ.6)ರಂದು ಜರುಗಿದ ಜಿಲ್ಲಾ ಮಟ್ಟದ ಕಾರ್ಯಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಸಿಕೆಯನ್ನು ತಲುಪಿಸಲು ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳುವುದರ ಜತೆಗೆ ಸಮರ್ಪಕ ದತ್ತಾಂಶವನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು.

ಬೆಳಗಾವಿ ಜಿಲ್ಲೆಯು ಜನರಿಗೆ ಆರೋಗ್ಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಉತ್ತಮ ಸ್ಥಾನವನ್ನು ಹೊಂದಿದೆ. ಇದೇ ರೀತಿ ಪ್ರಾಮಾಣಿಕವಾದ ಪ್ರಯತ್ನವು ಸತತವಾಗಿ ನಿರ್ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಪ್ರತಿ ತಾಲೂಕಿನ ಆರೋಗ್ಯಧಿಕಾರಿಗಳು, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಶುಶ್ರೂಷಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಪ್ರಾಮಾಣಿಕವಾದ ಕಾರ್ಯವನ್ನು ನಿರ್ವಹಿಸಬೇಕು ಎಂದು ತಿಳಿಸಿದರು.

ಕೋವಿಡ್ -19 ಹಿನ್ನೆಲೆಯಲ್ಲಿ ಬಾಣಂತಿಯರು ಆಸ್ಪತ್ರೆಗಳಿಗೆ ತೆರಳಲು ಹಿಂದೇಟು ಹಾಕುತ್ತಿರುವುದರಿಂದ ಬಾಣಂತಿಯರು ಹಾಗೂ ಮಗುವಿನ ಆರೋಗ್ಯದ ದೃಷ್ಟಿಕೋನದಿಂದ ಬಿ.ಸಿ.ಜಿ ಹಾಗೂ ಪೋಲಿಯೋ ಲಸಿಕೆಯನ್ನು ಆಶಾ ಕಾರ್ಯಕರ್ತೆ ಮೂಲಕ ಅವರ ಮನೆಗೆ ತಲುಪಿಸುವ ಕಾರ್ಯ ಮಾಡಬೇಕು.

ಜಿಲ್ಲೆಯಲ್ಲಿ 23.7% ಕೋವಿಡ್-19 ನಿಂದ ಗುಣಮುಖರಾದ ಜನರ ದೇಹದಲ್ಲಿ ಈಗಾಗಲೇ ರೋಗ ನಿರೋಧಕ ಶಕ್ತಿ ಬೆಳವಣಿಗೆಯಾಗಿದ್ದು, ಇದು ಸಂತೋಷದ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಲಸಿಕೆ ಸಂಗ್ರಹಕ್ಕೆ ಅತ್ಯಾಧುನಿಕ ಸಂಗ್ರಹಣಾ ಘಟಕ:

ಜಿಲ್ಲಾ ಕುಟುಂಬ ಮತ್ತು ಆರೋಗ್ಯಾಧಿಕಾರಿ ಡಾ. ಐ.ಪಿ. ಗಡಾದ ಮಾತನಾಡಿ, ಕೋವಿಡ್-19 ವ್ಯಾಕ್ಸಿನ್ ಸಂಗ್ರಹಿಸಿಡಲು ಈಗಾಗಲೇ ನಗರದ ವ್ಯಾಕ್ಸಿನ್ ಡೀಪೋನಲ್ಲಿ ಸಂಗ್ರಹಣೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಸ್ಟೋರೇಜ್ ಸಿದ್ದವಿದ್ದು, ಮಾರ್ಚ್ ಅಂತ್ಯದೊಳಗೆ ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ಸಂಗ್ರಹಣೆಗೆ ಘಟಕವನ್ನು ಸಿದ್ದತೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಯು.ಎನ್.ಡಿ.ಪಿ ಅಧಿಕಾರಿ ಪ್ರವೀಣ ಸ್ವಾಮಿ ಮಾತನಾಡಿ , ಸರ್ಕಾರದ ಮಾರ್ಗಸೂಚಿ ಪ್ರಕಾರ ವ್ಯಾಕ್ಸಿನ್ ತಲುಪಿಸಲು ಪೂರ್ವಸಿದ್ದತೆ ಮಾಡಿಕೊಳ್ಳಲಾಗಿದ್ದು, ಪ್ರಥಮ ಹಂತದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ಎಸ್.ಎಂ.ಓ. ಡಾ.ಸಿದ್ದಲಿಂಗಯ್ಯ ಅವರು ಮಾತನಾಡಿ, ಶಾಲಾ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಕ್ಕಳಿಗೆ ಕೂಡ ಲಸಿಕೆ ತಲುಪಿಸುವ ಯೋಜನೆ ರೂಪಿಸಿದ್ದು, ಪ್ರತಿಯೊಂದು ಶಾಲಾ ಮಕ್ಕಳಿಗೆ ತಲುಪಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

ನಮ್ಮ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಅಪಘಾನಿಸ್ತಾನದಲ್ಲಿ ಜನರು ಪೋಲಿಯೊ ಸಮಸ್ಯೆಯಿಂದ ಈಗಲು ಬಳಲುತ್ತಿದ್ದು,ಭಾರತ ದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಕಡೆಗೆ ಸರ್ವೇಕ್ಷಣ ಕಾರ್ಯಕ್ರಮಗಳು ಜಾರಿಯಲ್ಲಿವೆ.

ಪೋಲಿಯೋ ಮುಕ್ತ ದೇಶವನ್ನಾಗಿಸಲು ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಜಾರಿಯಲ್ಲಿದ್ದು, ಅದರಂತೆ ಅವುಗಳು ಕಾರ್ಯ ರೂಪದಲ್ಲಿದಲ್ಲಿವೆ. ಭಾರತ ದೇಶವು ಶೀಘ್ರದಲ್ಲಿ ಪೋಲಿಯೋ ಮುಕ್ತವಾಗಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯಧಿಕಾರಿ ಡಾ. ಎಸ್.ವಿ. ಮುನ್ಯಾಳ, ಜಿಲ್ಲಾ ಸರ್ಜನ್ ಡಾ. ಎಸ್.ಎಂ.ಖಾಜಿ ಹಾಗೂ ತಾಲೂಕು ಆರೋಗ್ಯಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಸಭೆಯಲ್ಲಿ ಉಪಸ್ಥಿತರಿದ್ದರು.

Related posts

ಬೆಳಗಾವಿ ಸುವರ್ಣಸೌಧಕ್ಕೆ ಒಟ್ಟು 24 ಕಚೇರಿಗಳ ಸ್ಥಳಾಂತರಕ್ಕೆ ಸರ್ಕಾರದ ಆದೇಶ

Siddu Naduvinmani

ಪಕ್ಷದ ವರ್ಚಸ್ಸಿಗೆ ತಕ್ಕಂತೆ ಕೆಲಸ ಮಾಡಲು ನಾವು ಸನ್ನದ್ದ: ಶಾಸಕ ಮಹಾಂತೇಶ

Siddu Naduvinmani

ಮನೆಗಳು ಸಂಸ್ಕಾರ ಕೇಂದ್ರಗಳಾಗಬೇಕು: ನಿಜಗುಣಾನಂದ ಸ್ವಾಮಿ ಅವರಿಂದ ನೂತನ ಮೂಕಬಸವ ನಗರ ಉದ್ಘಾಟನೆ

Siddu Naduvinmani

Leave a Comment