Hasirukranti
leadingnews ಅಂತಾರಾಷ್ಟ್ರೀಯ

ತಲೆನೋವು, ಮೈಕೈ ನೋವು ಸಹ ಕೊರೊನಾ ಲಕ್ಷಣಗಳು

ನ್ಯೂಯಾರ್ಕ ಏ., 27- ಚೀನಾದಿಂದ ವಿಶ್ವಾದ್ಯಂತ ಹರಡಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿರುವ ಕೋವಿಡ್-19 ಎಂಬ ಕೊರೊನಾ ವೈರಸ ತನ್ನ ರೋಗದ ಲಕ್ಷಣಗಳನ್ನು ಬದಲಿಸಿಕೊಳ್ಳುತ್ತಾ ಸಾಗಿದೆ ಎಂದು ಅಮೆರಿಕದ ಸೆಂಟರ್ಸ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಸಂಸ್ಥೆ ಇಂತಹದೊಂದು ಆಘಾತಕಾರಿ ವಿಷಯ ಹೊರಹಾಕಿದೆ.
ಇಲ್ಲಿಯವರೆಗೆ ಜ್ವರ, ನೆಗಡಿ, ಕೆಮ್ಮುಗಳು ಕೊರೊನಾ ರೋಗದ ಲಕ್ಷಣಗಳು ಎಂದು ಹೇಳಲಾಗುತ್ತಿತ್ತು. ಮತ್ತು ಅದರ ಪ್ರಕಾರವೇ ವಿಶ್ವದಲ್ಲೆಲ್ಲ ಈ ರೋಗದ ಲಕ್ಷಣಗಳು ಕಂಡುಬಂದವರಿಗೆ ಕೊರೊನಾ ಟೆಸ್ಟಗೆ ಒಳ ಪಡಿಸಲಾಗುತ್ತಿತ್ತು. ಈ ರೋಗದ ಸೋಂಕು ತಗುಲಿದ ವ್ಯಕ್ತಿಯಲ್ಲಿ 2ರಿಂದ 14 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಕೆಲ ಘಟನೆಗಳಲ್ಲಿ ಈ ರೋಗದ ಲಕ್ಷಣಗಳು ಕಾಣಿಸಲು ಹೆಚ್ಚಿನ ಸಮಯ ತೆಗೆದುಕೊಂಡಿದೆ.
ಅಮೆರಿಕದ ಸೆಂಟರ್ಸ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಸಂಸ್ಥೆ ತೆಲೆನೋವು, ಮೈಕೈ ನೋವು ಸೇರಿದಂತೆ ಒಟ್ಟು ಆರು ಹೊಸ ಲಕ್ಷಣಗಳನ್ನು ಗುರುತಿಸಿದೆ. ಮೈಕೈ ನೋವು, ರುಚಿ, ವಾಸನೆ ಹತ್ತದೆ ಇರುವುದು, ನಡುಕ ತೆಲೆನೋವು, ಗಂಟಲು ನೋವುಗಳೂ ಕೂಡ ಕೊರೊನಾ ಲಕ್ಷಣಗಳು ಎಂದು ಹೇಳಿದೆ.

Related posts

ರಾಜ್ಯದಲ್ಲಿಂದು ಒಂದೇ ದಿನಕ್ಕೆ 179 ಮಂದಿ ಕೊರೋನಾಗೆ ಬಲಿ : 8626 ಪಾಸಿಟಿವ್ – 10949 ಡಿಸ್ಚಾರ್ಜ್

Siddu Naduvinmani

ಸಮರ್ಪಕ ಸೇವೆ ನೀಡುವಲ್ಲಿ ವಿಫಲ – ಬಿಎಸ್.ಎನ್.ಎಲ್. ಅವ್ಯವಸ್ಥೆಗೆ ಬೇಸತ್ತ ಗ್ರಾಹಕ

Hasiru Kranti

ಬೆಳಗಾವಿಯಲ್ಲಿ ಕೊರೊನಾ ಸ್ಪೋಟ : 64 ಜನರಿಗೆ ಸೋಂಕು

Hasiru Kranti

Leave a Comment