Hasirukranti
leadingnews ಬೆಳಗಾವಿ ವಾಣಿಜ್ಯ

ಡಿಸಿಸಿ ಬ್ಯಾಂಕ್ : 16 ಸ್ಥಾನಗಳ ಪೈಕಿ 12 ಸ್ಥಾನಗಳಿಗೆ ಅವಿರೋಧ ಆಯ್ಕೆ

 

ಬೆಳಗಾವಿ, ಅ.29 ಬೆಳಗಾವಿಯ ಡಿಸಿಸಿ ಬ್ಯಾಂಕಿನ 16 ಸ್ಥಾನಗಳ ಪೈಕಿ ಈವರೆಗೆ 12 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಇನ್ನೂ 4 ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡುವ ಯತ್ನ ಮುಂದುವರಿದಿದೆ.

ಡಿಸಿಸಿ ಬ್ಯಾಂಕಿಗೆ ಈವರೆಗೆ ಅವಿರೋಧ ಆಯ್ಕೆಯಾದವರ ಪಟ್ಟಿ ಇಲ್ಲಿದೆ. ಲಕ್ಷ್ಮಣ ಸಂಗಪ್ಪ ಸವದಿ, ಅಣ್ಣಾಸಾಹೇಬ ಜೊಲ್ಲೆ, ಅಪ್ಪಾಸಾಬ ಕುಲಗೋಡ, ರಮೇಶ ವಿಶ್ವನಾಥ ಕತ್ತಿ, ಶಿವಾನಂದ ಡೋಣಿ, ವಿಶ್ವನಾಥ (ಆನಂದ) ಚಂದ್ರಶೇಖರ ಮಾಮನಿ, ರಾಜೇಂದ್ರ ಅಂಕಲಗಿ, ಸುಭಾಸ ಗಿರೆಪ್ಪ ಢವಳೇಶ್ವರ, ಪಂಚನಗೌಡ ದ್ಯಾಮನಗೌಡರ, ನೀಲಕಂಠ ಬಸವರಾಜ ಕಪ್ಪಲಗುದ್ದಿ, ಅಶೋಕ ಅವ್ವಕ್ಕನವರ ಮತ್ತು ಸತೀಶ ಈರಣ್ಣಾ ಕಡಾಡಿ ಸೇರಿದಂತೆ ಒಟ್ಟು ಈವರೆಗೆ 12 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.

ಎಲ್ಲ ಮುಖಂಡರ ಸಲಹೆ ಹಾಗೂ ಸೂಚನೆಯಂತೆ ಬೈಲಹೊಂಗಲದ ಗುರು ಮೆಟಗುಡ್ ಪಕ್ಷದ ಹಿತದೃಷ್ಟಿಯಿಂದ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ. ಸತೀಶ್ ಈರಣ್ಣ ಕಡಾಡಿ ಈ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೆಎಂಎಫ್ ಚೇರಮನ್ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ರಾಜಿ ಯತ್ನ ಮುಂದುವರಿದಿದೆ. ಮಾಜಿ ಸಚಿವ ಉಮೇಶ ಕತ್ತಿ ಸೇರಿದಂತೆ ಇತರ ಮುಖಂಡರು ಸಾಥ್ ನೀಡಿದ್ದಾರೆ. ರಾಮದುರ್ಗ, ಖಾನಾಪುರ ಸೇರಿದಂತೆ ಇನ್ನೂ 4 ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಗಬೇಕಿದೆ.

Related posts

ರಾಜ್ಯದಲ್ಲಿಂದು ಒಟ್ಟು 9 ಕೊರೊನಾ ಪ್ರಕರಣ ದಾಖಲು : ರಾದ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆ

Hasiru Kranti

ಅಗಸ, ಕ್ಷೌರಿಕರು ಪರಿಹಾರ ನೆರವು ಪಡೆಯಲು ಅರ್ಜಿ ಸಲ್ಲಿಸಲು ಕೊನೆ ದಿನಾಂಕ ವಿಸ್ತರಣೆ

Siddu Naduvinmani

ಹುಕ್ಕೇರಿಯಲ್ಲಿ ವೃದ್ಧ ಸೇರಿ ಮೂವರಿಗೆ ಕೊರೋನಾ ಪಾಸಿಟಿವ್

Siddu Naduvinmani

Leave a Comment