Hasirukranti
ಬೆಳಗಾವಿ

ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಂಘಟನೆಗಳು ಜನರ ಧ್ವನಿಯಾಗುತ್ತವೆ : ಸತೀಶ ಜಾರಕಿಹೊಳಿ

ನೇಸರಗಿ. 26. ಎಲ್ಲ ಜನಾಂಗದ, ಬಡವರ, ದಿನದಲಿತರ, ದುರ್ಬಲರ ಬಾಳಿಗೆ ಬೆಳಕಾಗಿ ಸಂಘಟನೆಗಳು ಗ್ರಾಮದ, ತಾಲ್ಲೂಕಿನ, ಜಿಲ್ಲೆಯ ಜನರ ಕೆಲಸ ಕಾರ್ಯಗಳನ್ನು ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಂಘಟನೆಗಳು ಜನರ ದ್ವನಿಯಾಗುತ್ತವೆಂದು ರಾಜ್ಯ ಕೆಪಿಸಿಸಿ ಕಾರ್ಯಾದ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಅವರು ಇಂದು ಬೈಲಹೊಂಗಲ ತಾಲೂಕಿನ ಮುರ್ಕಿಬಾಂವಿಯ ಶ್ರೀ ಸಿದ್ದಾರೂಢ ಮಠದಲ್ಲಿ ನಡೆದ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಸಂಘಟನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಸಕ್ತ ಕರೋನಾ ಮಾರಿಯ ಸಂದರ್ಬದಲ್ಲಿ ಅನೇಕ ಸಂಘಟನೆಗಳು ಉತ್ತಮವಾಗಿ ಕೆಲಸ ಮಾಡಿವೆ, ಮುಸ್ಲಿಂ ಸಂಘಟನೆಗಳು ಕರೋನಾದಿಂದ ಮರಣ ಹೊಂದಿದ ಎಲ್ಲಾ ಜನಾಂಗಳ ಶವ ಸಾಗಣೆ ಮತ್ತು ಶವ ಸಂಸ್ಕಾರ ಮಾಡಿ ಒಳ್ಳೆಯ ಕೆಲಸ ಮಾಡಿದ್ದಾರೆ.ಅದೇ ತರಹ ಈ ಒಂದು ವಾಲ್ಮೀಕಿ ಯುವ ಸಂಘ ಜನರ ಸೇವೆ ಮಾಡಿ ಮಾದರಿ ಸಂಘವಾಗಿ ಬೆಳದು ಗುರುತ್ತಿಸಿಸಿಕೊಳ್ಳಬೇಕೆಂದರು. ಇಂಥಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರದ ಕೆಲಸದ ಜೊತೆ ವೈಯಕ್ತಿಕ ಜನ ಪ್ರತಿನಿಧಿಗಳಾದ ನಾವು ಶಿಕ್ಷಣ, ಮೂಡನಂಬಿಕೆ ವಿರುದ್ದ ಹೋರಾಟ, ಬಡ ರೋಗಿಗಳಿಗೆ ಆಕ್ಸಿಜನ್ ವಿತರಣೆ ಕೆಲಸವನ್ನು ನಮ್ಮ ಕ್ಷೇತ್ರದಲ್ಲಿ ಮಾಡಿದ್ದೇವೆ ಅದೇ ರೀತಿ ಜನಪ್ರತಿನಿಧಿಗಳು ,ಸಂಘಟನೆಗಳು ಕೆಲಸ ಮಾಡಬೇಕೆಂದು ಸತೀಶ ಜಾರಕಿಹೊಳಿ ಹೇಳಿದರು.

ಕಾರ್ಯಕ್ರಮದ ಅದ್ಯಕ್ಷ ಸ್ಥಾನ ವಹಿಸಿದ್ದ ಕಿತ್ತೂರ ಶಾಸಕರಾದ ಮಹಾಂತೇಶ ದೊಡ್ಡಗೌಡರ ಮಾತನಾಡುತ್ತಾ ಸಂಘಟನೆಗಳ ಮುಖಾಂತರ ಸಮಾಜ ಸೇವೆ ಮಾಡುತ್ತಾ ನಾವೆಲ್ಲರೂ ಇಂದು ಈ ಮಟ್ಟದಲ್ಲಿ ಜನಪ್ರತಿನಿದಿಗಳಾಗಿ ತಮ್ಮೆಲ್ಲರ ಸೇವೆ ಮಾಡುವ ಪುಣ್ಯ ಒದಗಿ ಬಂದಿದೆ ಎಂದರು.ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಅನುಧಾನ ನೀಡಯತ್ತೇನೆ ಮತ್ತು ಇಂತಹ ಸಂಘಟನೆಗಳು ಕ್ಷನಿಕವಾಗಿ ಕೆಲಸ ಮಾಡದೇ ನಿರಂತರವಾಗಿ ಜನರ ,ಬಡವರ,ದಿನದಲಿತರ ಕೆಲಸಕಾರ್ಯಗಳನ್ನು ನಾವು ನಿವೆಲ್ಲ ಕೂಡಿ ಮಾಡೋಣ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.

ಈ ಸಭೆಯಲ್ಲಿ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಮಾತನಾಡುತ್ತಾ ಒಂದು ಜಾತಿಯ ಬೆಳವಣಿಗೆಗೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಂಘಟನೆ ಮಾಡದೇ ಜನರ ಆಶೋತ್ತರಗಳನ್ನು ಈಡೇರಿಸಲು ,ಎಲ್ಲ ಜಾತಿ ಜನಾಂಗದ ಅಭಿವೃದ್ಧಿಗೆ ಸಂಘಟನೆ ಮಾಡಿದರೆ ನೀವು ಜನರ ಮನಸ್ಸನಲ್ಲಿ ಇರುತ್ತೀರಿ ಎಂದು ಶಾಸಕ ಕೌಜಲಗಿ ಹೇಳಿದರು.

ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿದ್ದ ಶ್ರೀ ರಾಮಾನಂದ ಪರಮಹಂಸ ಮಹಾಸ್ವಾಮಿಗಳು, ಹುಬ್ಬಳ್ಳಿ, ಜನರ ಸಂಕಷ್ಟದ ಸಮಯದಲ್ಲಿ ಸಂಘಟನೆಗಳು ಕೆಲವು ಸಂಘಟನೆಗಳು ಉನ್ನತವಾದ ಸೇವೆ ಸಲ್ಲಿಸುತ್ತಿದ್ದು ಅದೇ ಹಾದಿಯಲ್ಲಿ ವಾಲ್ಮೀಕಿ ಯುವ ವೇದಿಕೆ ಜನಸೇವೆ ಮಾಡಲೆಂದು ಆಶಿರ್ವದಿಸಿದರು.

ಕಾರ್ಯಕ್ರಮದಲ್ಲಿ ಮುಖಂಡ ಬಾಬಾಸಾಹೇಬ ಪಾಟೀಲ ಮಾತನಾಡಿ ಭಾರತ ದೇಶದ ರಾಮಾಯಣ ಇಡೀ ವಿಶ್ವವೇ ಮೆಚ್ಚುವ ಕೆಲಸ ಮಾಡಿದ್ದು ಮಾನ್ಯ ವಾಲ್ಮೀಕಿ ಮಹರ್ಷಿಗಳು ಎಂದರು.

ಈ ಸಭೆಯಲ್ಲಿ ನೇಸರಗಿ ಜಿ.ಫಂ ಸದಸ್ಯ ನಿಂಗಪ್ಪ ಅರಿಕೇರಿ ಮಾತನಾಡಿ ಈ ಒಂದು ವಾಲ್ಮೀಕಿ ಯುವ ಸಂಘಟನೆ ಯಾವುದೇ ಪಕ್ಷದ, ನಾಯಕರ ಸಂಘಟನೆಯಾಗಿ ಪ್ರಾರಂಬವಾಗಿಲ್ಲ. ಎಲ್ಲಾ ಜನಾಂಗಗಳ ದ್ವನಿಯಾಗಿ ಕೆಲಸ ಮಾಡತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ನಾಗನೂರ ತಾ.ಪಂ. ಸದಸ್ಯ ರವಿ ಗದಗ ಮತ್ತು ಚಂದರಗಿ ಕ್ರೀಡಾ ಶಾಲೆಯ ಮಾಜಿ ಚೇರಮನ್ನರಾದ ರುದ್ರಗೌಡ ಪಾಟೀಲ ಪ್ರಸ್ತಾವಿಕವಾಗಿ ವಾಲ್ಮೀಕಿ ಮಹರ್ಷಿಗಳ ಕುರಿತು ಸವಿಸ್ತಾರವಾಗಿ ಹೇಳಿದರು,ವೇದಿಕೆಯಲ್ಲಿ ಶಿವಾನಂದ ಪಾಟೀಲ, ಸಂಟನೆ ಅದ್ಯಕ್ಷ ಬಾಳೇಶ ಪೂಜೇರಿ,ನೇಸರಗಿ ಪಿಎಸ ಐ ವಾಯ್ ಎಲ್ ಶೀಗಿಹಳ್ಳಿ,ನಿಂಗಪ್ಪ ತಳವಾರ ,ಅನೇಕ ವಾಲ್ಮೀಕಿ ಸಮಾಜದ ಮುಖಂಡರು, ಎಲ್ಲಾ ಸಮಾಜದ ಮುಖಂಡರು. ವಾಲ್ಮೀಕಿ ಯುವ ಸಂಘಟನೆ ಸದಸ್ಯರು ಮುರ್ಕಿಬಾಂವಿಯ ಜನತೆ ಪಾಲ್ಗೊಂಡಿದ್ದರು.

Related posts

ಲಾಕ್‌ಡೌನ್ ಹಿನ್ನೆಲೆ ನೆಲಕಚ್ಚಿದ ಮುದ್ರಣ ವ್ಯವಸಾಯ: ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ

Siddu Naduvinmani

ಬೆಳಗಾವಿ ಎಪಿಎಂಸಿ ಅಧ್ಯಕ್ಷರಾಗಿ ಯುವರಾಜ ಕದಂ ಅವರನ್ನು ಮಾಡಿದ್ದು ನಾನೇ : ರಮೇಶ ಜಾರಕಿಹೊಳಿ

Siddu Naduvinmani

ಕೋವಿಡ್-19 ಲಸಿಕೆ ಎಲ್ಲರಿಗೂ ತಲುಪಿಸಲು ಸಿದ್ಧತೆ: ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ

Siddu Naduvinmani

Leave a Comment