Hasirukranti
leadingnews ಅಂತಾರಾಷ್ಟ್ರೀಯ

ಲಂಡನನಲ್ಲಿ ಮನುಷ್ಯರ ಮೇಲೆ ಕೊರೊನಾ ವೈರಸ ಲಸಿಕೆಯ ಪ್ರಯೋಗ ಆರಂಭ

ಲಂಡನ ಏ., 25- ಕೊರೊನಾ ವೈರಸ್‍ಗೆ ಕಂಡುಹಿಡಿದಿದ್ದ ಲಸಿಕೆಯನ್ನು ಸೊಕ್ಷ್ಮಜೀವ ವಿಜ್ಞಾನಿಗೆ ನೀಡುವ ಮೂಲಕ ಮನುಷ್ಯರ ಮೇಲೆ ಲಸಿಕೆಯ ಪ್ರಯೋಗಿಕ ಹಂತಕ್ಕೆ ಆಕ್ಸಫರ್ಡ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಚಾಲನೆ ನೀಡಿದೆ.
ಆಕ್ಸಫರ್ಡ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಕೊರೊನಾ ವೈರಸಗೆ ಲಸಿಕೆಯನ್ನು ಸಿದ್ದ ಪಡಿಸಿದ್ದು, ಅದನ್ನು ಮಾನವರ ಮೇಲೆ ಉಪಯೋಗಿಸುವ ಪ್ರಾಯೋಗಿಕ ಹಂತವನ್ನು ಆರಂಭಿಸಿದ್ದು, ಈ ಪ್ರಯೋಗಕ್ಕೆ ಮುಂದೆ ಬಂದ 800 ಸ್ವಯಂ ಸೇವಕರಲ್ಲಿ ಸೊಕ್ಷ್ಮಜೀವ ವಿಜ್ಞಾನಿ ಎಲಿಸಾ ಗ್ರಾನ್ಟೋ ಲಸಿಕೆ ಚುಚ್ಚಿಕೊಂಡ ಪ್ರಥಮ ವ್ಯಕ್ತಿಯಾಗಿದ್ದಾಳೆ.
ಇವಳೊಂದಿಗೆ ಇನ್ನೊಬ್ಬ ವಿಜ್ಞಾನಿ ಎಡ್ವರ್ಡ ಓನೀಲಗು ಲಸಿಕೆ ನೀಡಲಾಗಿದೆ. ಇದರಲ್ಲಿ ಒಬ್ಬರಿಗೆ ಕೋವಿಡ್-19 ಲಸಿಕೆ ನೀಡಲಾಗಿದ್ದು ಇನ್ನೊಬ್ಬರಿಗೆ ಮಿದುಳ್ಪೊರೆಯುರಿತ ರಕ್ಷಿಸುವ ಲಸಿಕೆ ನೀಡಲಾಗಿದೆ.
ಇವರನ್ನು ಮುಂದಿನ 48 ಗಂಟೆಗಳ ಕಾಲ ನಿಗಾದಲ್ಲಿ ಇರಿಸಿ, ಲಸಿಕೆಗಳ ಪರಿಣಾಮಗಳನ್ನು ಗಮನಿಸಿ ನಂತರ ಇತರ ಸ್ವಯಂಸ್ವೇವಕರಿಗೆ ಹಂತಹಂತವಾಗಿ ಲಸಿಕೆ ನೀಡುವರು. ಇವರೆಲ್ಲ ಆರೋಗ್ಯವಂತ 18 ರಿಂದ 55 ವರ್ಷ ವಯಸ್ಸಿನವರಾಗಿದ್ದಾರೆ.
ನನಗೆ ವಯಕ್ತಿಕವಾಗಿ ಈ ಲಸಿಕೆ ಕೆಲಸ ಮಾಡುತ್ತದೆ ಎಂಬ ವಿಶ್ವಾಸ ಬಹಳಷ್ಟಿದೆ. ನಾವುಈ ಲಸಿಕೆಯನ್ನು ಪರೀಕ್ಷಸಬೇಕು, ಪ್ರಯೋಗಕ್ಕೆ ಒಳಗಾದವರಿಂದ ದತ್ತಾಂಶಗಳನ್ನು ಪಡೆಯಬೇಕು. ಇದು ಕೆಲಸ ಮಾಡುತ್ತದೆ ಎಂಬುದನ್ನು ಪ್ರದರ್ಶಿಸಬೇಕು. ಇದರಲ ಫಲಿತಾಂಶದ ಬಗ್ಗೆ ನಾನು ಬಹಳ ಆಶಾವಾದಿಯಾಗಿದ್ದೆನೆ ಎಂದು ಈ ಲಸಿಕೆ ಸಂಶೋಧಕರಲ್ಲಿ ಒಬ್ಬರಾದ ಸಾರಾ ಗಿಲ್ಬರ್ಟ ಅವರು ಹೇಳಿದ್ದಾರೆ.
ಈ ಲಸಿಕೆಯ ಪ್ರಯೋಗಕ್ಕೆ ಒಳಗಾದವರಿಗೆ ಇ-ಡೈರಿ ನೀಡಲಾಗಿದ್ದು, ಅವರು ತಮ್ಮಲ್ಲಿ ಕಂಡುಬರುವ ಬದಲಾವಣೆಗಳನ್ನು 7 ದಿನಗಳ ವರೆಗೆ ಬರೆಯಬೇಕು. ನಂತರ ಮೂರು ವಾರಗಳ ಕಾಲದಲ್ಲಿ ಅವರಿಗೆ ಯಾವುದಾದರು ಅನಾರೋಗ್ಯ ಕಾಣಿಸಿದರೆ ಡೈರಿಯಲ್ಲಿ ನಮೂದಿಸಬೇಕು. ಅಷ್ಟೇ ಅಲ್ಲ ಅವರು ಈ ಸಂದರ್ಬದಲ್ಲಿ ಸರಣಿ ಭೇಟಿಯನ್ನು ನೀಡಬೇಕಾಗುತ್ತದೆ. ಈ ಭೇಟಿ ಸಂದರ್ಭದಲ್ಲಿ ನಮ್ಮ ತಂಡವು ಅವರ ಅನಿಸಿಕೆಗಳನ್ನು ಪಡೆಯುತ್ತೆವೆ, ಅವರ ರಕ್ತದ ಮಾದರಿಗಳನ್ನು ಪಡೆಯುತ್ತೇವೆ. ಅವರು ಇ-ಡೈರಿಯನ್ನು ಪರಿಶೀಲಿಸುತ್ತೇವೆ. ಅವರ ರಕ್ತದ ಮಾದರಿಗಳಿಂದ ಲಸಿಕೆಯ ಪ್ರತಿರಕ್ಷಣಾ ಪ್ರತಿಕ್ರಿಯೆ ಬಗ್ಗೆ ನಿರ್ಣಯಿಸಲಾಗುತ್ತದೆ.

Related posts

ನಿಯಂತ್ರಣಕ್ಕೆ ಸಿಗದ ಕೊರೊನಾ ಸೋಂಕು : 9 ದಿನಗಳಲ್ಲಿ 1000 ಸೋಂಕು

Hasiru Kranti

ಎಸಿಬಿ ದಾಳಿ : ನಿಷೇಧಿತ ನೋಟು ಪತ್ತೆ; ಭಾರೀ ಮೊತ್ತದ ನಗದು, ಚಿನ್ನ ವಶಕ್ಕೆ

Siddu Naduvinmani

ಕಣಗಲಾ ಬಳಿ ರಸ್ತೆ ಅಪಘಾತ ಇಬ್ಬರ ಸಾವು

Siddu Naduvinmani

Leave a Comment