Hasirukranti
ಬೆಳಗಾವಿ ವಾಣಿಜ್ಯ

ನಾಳೆ ಕುಂದಾನಗರಿಯಲ್ಲಿ ಅರಿಹಂತ ಎಸ್.ಎನ್. ಸಿಲ್ಕ್ಸ್ ಸಾರೀಸ್ ಶೋ ರೂಮ್ ಉದ್ಘಾಟನೆ : ನಮೀತಾ ಪಾಟೀಲ್

 

ಬೆಳಗಾವಿ, ಅ.24 : ಕುಂದಾನಗರಿಗೆ ಸದ್ಯ ಮಹಿಳೆಯರ ಮನಸೂರೆಗೆ. ಕಾರಣವಾಗಲು ವಿಧ ವಿಧವಾದ ರೇಷ್ಮೆ ಸೀರೆಗಳು, ಬ್ರೈಡಲ್ ಲೆಹೆಂಗಾ ಹಾಗು ಬ್ರಾಂಡೆಡ್ ಚೂಡಿದಾರಗಳನ್ನೊಳಗೊಂಡ ನೂತನ ‘ಅರಿಹಂತ ಎಸ್.ಎನ್, ಸಿಲ್ಕ್ಸ್ ಸಾರೀಸ್’ ಬೃಹದಾಕಾರದ ಶೋ ರೂಮ್ ನಾಳೆ ರವಿವಾರ(ಅ.25) ರಂದು ಉದ್ಘಾಟನೆಗೊಳ್ಳಲು ಸಜ್ಜಾಗಿರುವದು ಜನತೆಗೆ ಹೆಮ್ಮೆ ತರುವಂಥಹ ವಿಷಯವಾಗಿದೆ ಎಂದು ಎಂಡಿ ನಮೀತಾ ಪಾಟೀಲ್ ಅವರು ಹೇಳಿದರು.

ಇಲ್ಲಿನ ಖಡೇ ಬಜಾರ್‌ನ ಶನಿವಾರ ಕೂಟದ ಪೋತದಾರ ಜ್ಯುವೆಲರ್ ಹತ್ತಿರ ನೂತನ ‘ಅರಿಹಂತ ಎಸ್.ಎನ್, ಸಿಲ್ಕ್ಸ್ ಸಾರೀಸ್’ ಮಳಿಗೆಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸುಮಾರು 10 ಸಾವಿರ ಚದರ ಅಡಿಯ ನಾಲ್ಕು ಅಂತಸ್ತಿನ ಮಳಿಗೆ ಇದಾಗಿದ್ದು, ರಾಜ್ಯದಲ್ಲಿಯೇ ವಿಧ ವಿಧವಾದ ರೇಷ್ಮೆ ಸೀರೆಗಳು, ಬ್ರೈಡಲ್ ಲೆಹೆಂಗಾ ಹಾಗು ಬ್ರಾಂಡೆಡ್ ಚೂಡಿದಾರಗಳನ್ನೊಳಗೊಂಡ ಬೃಹತ್ ಮಳಿಗೆಯಾಗಿದೆ. ಇಷ್ಟೇ ಹೇಳಿದರೆ ಸಾಲದು. ಕೇವಲ ಗ್ರಾಹಕರ ಸೇವೆಗಾಗಿಯೇ ತಲೆ ಎತ್ತಿ ನಿಂತಿರುವ ‘ಅರಿಹಂತ ಎಸ್.ಎನ್. ಸಿಲ್ಕ್ಸ್ ಸಾರೀಸ್ ಅತ್ಯಂತ ಅಗ್ಗದ ದರದಲ್ಲಿ ಜನಸಾಮಾನ್ಯರಿಗೂ ಕೈಗೆಟುವ ದರದಲ್ಲಿ ಕನಿಷ್ಠ 300 ರೂ.ಗಳಿಂದ 50,೦೦೦ ರೂ.ಗಳ ವರೆಗೂ ವಿಧವಿಧ ಶೈಲಿಯ ಸೀರೆಗಳನ್ನು ಜನತೆಗೆ ಅರ್ಪಿಸಲು ಪ್ರಾಮಾಣಿಕ ಸೇವೆಗೆ ನಿಂತಿದೆ ಎಂದರು.

ಇನ್ನು ದೀಪಾವಳಿ ಆಪರ್ ಇರುವುದರಿಂದ ವಿಶೇಷವಾಗಿ ಗ್ರಾಹಕರಿಗೆ ಬಟ್ಟೆಗಳ ಜೊತೆಗೆ ಬೆಳ್ಳಿ ದೀಪ ಗಿಪ್ಟ್  ಮತ್ತು 10℅ ಡಿಸ್ಕೌಂಟ್ ಕೊಡಲಾಗುತ್ತದೆ ಎಂದು ಎಂಡಿ ನಮೀತಾ ಅವರು ಹೇಳಿದರು.

ನಂತರ ಗೀತಾ ಎಸ್ ಅವರು ಮಾತನಾಡಿ, ಕೇವಲ ಲಾಭಕ್ಕಾಗಿ ಮಳಿಗೆ ಪ್ರಾರಂಭಿಸದೆ ರಾಜ್ಯವಷ್ಟೇ ಅಲ್ಲದೆ ನೆರೆಯ ಮಹಾರಾಷ್ಟ್ರದ ಜನತೆಗೂ ವಿಶಿಷ್ಟ ಶೈಲಿಯ ಹಾಗು ವಿಭಿನ್ನತೆಯಿಂದ ಕೂಡಿರುವ ಸೀರೆಗಳನ್ನು ಒದಗಿಸುವ ಉದ್ದೇಶದಿಂದ ಬೆಳಗಾವಿಯಲ್ಲಿ ಮಳಿಗೆ ಸ್ಥಾಪನೆ ಅನಿವಾರ್ಯವಾಗಿದೆ. ಸುಂದರ ವಾತಾವರಣದಿಂದ ಕೂಡಿರುವ ಪ್ರದೇಶವಾಗಿದ್ದು, ಪಾರ್ಕಿಂಗ್ ವ್ಯವಸ್ಥೆಯಿದೆ ಎಂದು ಹೇಳಿದರು.

ಈ ಮಳಿಗೆಯಲ್ಲಿ ಹೋಲಸೇಲ್ ದರದಲ್ಲಿ ಗ್ರಾಹಕರಿಗೆ ರಿಟೇಲ್ ದರದ ಬಟ್ಟೆಗಳನ್ನು ನೀಡಲಾಗುತ್ತದೆ. ಇಷ್ಟೊಂದು ಕಡಿಮೆ ದರದಲ್ಲಿ ಹೇಗೆ ಕೊಡಲು ಸಾಧ್ಯ ಎಂದು ಉಹಿಸುವುದು ಸಹಜ, ಇಲ್ಲೊಂದು ಮುಖ್ಯವಾದ ಕಾರಣ ಕೂಡಾ ಇದೆ. ದೊಡ್ಡ ದೊಡ್ಡ ಕಂಪನಿಯ ಉತ್ತಮ ಗುಣಮಟ್ಟದ ಬಟ್ಟೆಯನ್ನು ಕಡಿಮೆ ದರದಲ್ಲಿ ಹಾಗು ನೇರವಾಗಿ ಖರೀದಿಸುವ ಮೂಲಕ ನೇರವಾಗಿ ಗ್ರಾಹಕರಿಗೆ ನೆರವಾಗುವಲ್ಲಿ ಕಾರಣವಾಗಿದೆ ಎಂದರು.

ಇನ್ನು ಹೆಸರಾಂತ ಜನಪ್ರಿಯ ನಿರೂಪಕಿ ಹಾಗು
ತಾರೆಯಾದಂತಹ ಪ್ರಿಯಾಂಕ ಅವರಿಂದ ನಿರೂಪಣೆಯ ಮೂಲಕ ಪ್ರಾರಂಭಗೊಳ್ಳುವ ಮೂಲಕ ಜವಳಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿ ಮಾಡುವಲ್ಲಿ ದಾಪುಗಾಲಿನಲ್ಲಿ ನಿಂತಿದೆ ಎಂದು ಗೀತಾ ಅವರು ಹೇಳಿದರು.

ಈ ಸಂದರ್ಭದಲ್ಲಿ ಮ್ಯಾನೇಜರ್ ಸಂಜೆಯ ನವಲಗುಂದ ಸೇರಿದಂತೆ ಮತ್ತಿತರರು ಹಾಜರಿದ್ದರು.

Related posts

Video – ಭಾರೀ ಮಳೆ : ದುಮ್ಮಿಕ್ಕಿ ಹರಿಯುತ್ತಿರುವ ವರವಿಕೊಳ್ಳ ಜಲಪಾತ

Siddu Naduvinmani

ಮೂಡಲಗಿ ಲಕ್ಷ್ಮೀ ನಗರದ ಚರಂಡಿ ದುರಸ್ಥಿಪಡಿಸಲು ಸಾರ್ವಜನಿಕರ ಆಗ್ರಹ

Siddu Naduvinmani

ಎಪಿಎಂಸಿಯ ಅಧ್ಯಕ್ಷರಾಗಿ ಯುವರಾಜ್ ಕದಂ, ಉಪಾಧ್ಯಕ್ಷರಾಗಿ ಮಹಾದೇವಿ ಖಾನಗೌಡರ ಅವಿರೋಧವಾಗಿ ಆಯ್ಕೆ

Siddu Naduvinmani

Leave a Comment