Hasirukranti
leadingnews ರಾಷ್ಟ್ರೀಯ

ಹಬ್ಬದ ಖುಷಿಯಲ್ಲಿ ಮೈಮರೆಯಬಾರದು, ಕೊರೋನಾ ಬಗ್ಗೆ ಜಾಗ್ರತೆ ಇರಲಿ : ಪಿಎಂ ಮೋದಿ

ನವದೆಹಲಿ, ಅ.20: ಲಾಕ್‍ಡೌನ್ ಮುಗೀತು. ವೈರಸ್ ಹೊರಟುಹೋಯ್ತು ಎಂದು ಜನರು ಮೈಮರೆಯಬಾರದು. ಹಬ್ಬದ ಋತು ಬಂದಿದ್ದು ಜನರು ಜಾಗರೂಕತೆಯಿಂದ ಇರಬೇಕು. ಹಬ್ಬದ ಖುಷಿಯಲ್ಲಿ ಮೈಮರೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಕರೆ ನೀಡಿದರು.

ಆನ್‍ಲೈನ್‍ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಅನೇಕ ಕಡೆ ಲಾಕ್‍ಡೌನ್ ಅಂತ್ಯಗೊಂಡಿದ್ದರೂ ವೈರಸ್ ಆರ್ಭಟ ನಿಂತಿಲ್ಲ. ಆದ್ದರಿಂದ ಜನರು ಎಚ್ಚರಿಕೆಯಿಂದ ಇರಬೇಕು. ಲಸಿಕೆ ಬರುವವರೆಗೂ ಜನರು ಕೊರೋನಾ ನಿಯಮಗಳನ್ನ ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿದರು.

ನಾವು ವೈರಸ್ ವಿರುದ್ಧ ಸಮರ್ಥವಾಗಿ ಹೋರಾಡಿದ್ದೇವೆ. ನಮ್ಮ ಚೇತರಿಕೆ ಪ್ರಮಾಣ ಉತ್ತಮವಾಗಿದೆ. ಸಾವಿನ ಸಂಖ್ಯೆ ಕಡಿಮೆ ಇದೆ. ಬ್ರೆಜಿಲ್ ಮತ್ತು ಅಮೆರಿಕಕ್ಕಿಂತ ನಮ್ಮ ಪ್ರಕರಣಗಳ ಏರಿಕೆ ಸಂಖ್ಯೆ ಕಡಿಮೆ ಇದೆ. ಆದರೂ ಕೂಡ ನಾವು ಎಚ್ಚರಿಕೆ ತಪ್ಪಬಾರದು ಎಂದರು.

ಲಾಕ್‍ಡೌನ್ ಮುಗೀತು. ವೈರಸ್ ಹೊರಟುಹೋಯ್ತು ಎಂದು ಜನರು ಮೈಮರೆಯಬಾರದು. ಮಾಸ್ಕ್ ಇಲ್ಲದೆ ಹೊರಗೆ ಕಾಲಿಡುವ ಜನರು ತಾವಷ್ಟೇ ಅಲ್ಲ, ತಮ್ಮ ಕುಟುಂಬ ಸದಸ್ಯರಿಗೂ ಅಪಾಯ ತರುತ್ತಿದ್ದೇವೆಂದು ಅರಿಯಬೇಕು. ಫಸಲು ಬೆಳೆದು ಬಿಟ್ಟೆ ಅಂತ ಯಾರಾದರೂ ಖುಷಿ ಪಟ್ಟು ಕೂರಲು ಸಾಧ್ಯವಾ? ಫಸಲು ಬಂದ ಬಳಿಕವೂ ಸಾಕಷ್ಟು ಕಾರ್ಯಗಳನ್ನ ಮಾಡಬೇಕಾಗುತ್ತದೆ. ಈ ವಿಚಾರವನ್ನು ಜನರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ನರೇಂದ್ರ ಮೋದಿ ಹೇಳಿದರು.

ವೈದ್ಯರು, ನರ್ಸ್?ಗಳು, ಸ್ವಚ್ಛತಾ ಕರ್ಮಿಗಳು ಕೊರೋನಾ ವಿರುದ್ಧ ನಿಸ್ವಾರ್ಥತೆಯಿಂದ ಹೋರಾಡಿದ್ದಾರೆ. ಅವರೆಲ್ಲರ ಶ್ರಮದ ಫಲವಾಗಿ ಇಂದು ವೈರಸ್ ಅನ್ನು ತಕ್ಕ ಮಟ್ಟಿಗೆ ಕಟ್ಟಿಹಾಕಿದ್ದೇವೆ. ಲಸಿಕೆ ಬರುವವರೆಗೂ ಜನರು ಕೋವಿಡ್ ನಿಯಮಗಳನ್ನ ಪಾಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದರು.

Related posts

ಕೊರೋನಾ ಪರೀಕ್ಷೆ ವೇಳೆ ನೆಗೆಟಿವ್ ಬಂದಿರುವವರನ್ನು ಆ್ಯಂಟಿಜೆನ್ ಪರೀಕ್ಷೆಗೊಳಪಡಿಸಿ : ರಾಜ್ಯಗಳಿಗೆ ಕೇಂದ್ರ ಸೂಚನೆ

Siddu Naduvinmani

ಲಂಡನನಲ್ಲಿ ಮನುಷ್ಯರ ಮೇಲೆ ಕೊರೊನಾ ವೈರಸ ಲಸಿಕೆಯ ಪ್ರಯೋಗ ಆರಂಭ

Hasiru Kranti

ರಾಜ್ಯದ 57 ಜನರಿಗೆ ಸೋಂಕು ತಗುಲಿದ್ದು ಹೇಗೆ ?

Hasiru Kranti

Leave a Comment