Hasirukranti
leadingnews ವಿಜಯಪುರ

ಜಿಲ್ಲೆಯ 34 ಮೃತ ರೈತರ, ಕುಟುಂಬಗಳಿಗೆ 127 ಲಕ್ಷ ರೂ.ಗಳ ಪರಿಹಾರ ವಿತರಣೆ : -ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್

ವಿಜಯಪುರ, ಅ.20: ಜಿಲ್ಲೆಯಲ್ಲಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವಾಗ ಆಕಸ್ಮಿಕ ಮರಣ ಹೊಂದಿದ ರೈತರಿಗೆ ಹಾಗೂ ಹಾವು ಕಡಿತದಿಂದ ಮೃತಪಟ್ಟ ರೈತರಿಗೆ ಜಿಲ್ಲಾ ಖಜಾನೆಯ ಮೂಲಕ ಹೀಗೆ ಒಟ್ಟು 34 ರೈತರ ಕುಟುಂಬಗಳಿಗೆ 127 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ಸಿಂದಗಿ ತಾಲೂಕಿನ ಆತ್ಮಹತ್ಯೆ ಮಾಡಿಕೊಂಡ 8 ಜನ ರೈತರ ಕುಟುಂಬಕ್ಕೆ 40 ಲಕ್ಷ ರೂ. ಹಾಗೂ ಹಾವು ಕಡಿತದಿಂದ ಮೃತಪಟ್ಟ 5 ರೈತರ ಕುಟುಂಬಗಳಿಗೆ 9 ಲಕ್ಷ ರೂ, ವಿತರಿಸಲಾಗಿದೆ.

ಅದರಂತೆ ಇಂಡಿ ತಾಲೂಕಿನ ಆತ್ಮಹತ್ಯೆ ಮಾಡಿಕೊಂಡ 6 ಜನ ರೈತರ ಕುಟುಂಬಕ್ಕೆ 30 ಲಕ್ಷ ರೂ. ಹಾಗೂ ಹಾವು ಕಡಿತದಿಂದ ಮೃತಪಟ್ಟ 3 ರೈತರ ಕುಟುಂಬಗಳಿಗೆ 6 ಲಕ್ಷ ರೂ, ಹಾಗೂ ಆಕಸ್ಮಿಕವಾಗಿ ಮರಣ ಹೊಂದಿದ 4 ರೈತರ ಕುಟುಂಬಕ್ಕೆ 8 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ.
ವಿಜಯಪುರ ತಾಲೂಕಿನ ಆತ್ಮಹತ್ಯೆ ಮಾಡಿಕೊಂಡ 4 ಜನ ರೈತರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ವಿತರಿಸಲಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಆತ್ಮಹತ್ಯೆ ಮಾಡಿಕೊಂಡ ಒಬ್ಬ ರೈತನ ಕುಟುಂಬಕ್ಕೆ ಐದು ಲಕ್ಷ ರೂ. ಮತ್ತು ಹಾವು ಕಡಿತದಿಂದ ಮೃತಪಟ್ಟ ಒಬ್ಬ ರೈತನ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಮುದ್ದೇಬಿಹಾಳ ತಾಲೂಕಿನ ಆತ್ಮಹತ್ಯೆ ಮಾಡಿಕೊಂಡ ಒಬ್ಬ ರೈತನ ಕುಟುಂಬಕ್ಕೆ ಐದು ಲಕ್ಷ ರೂ. ಹಾಗೂ ಹಾವು ಕಡಿತದಿಂದ ಸಾವನ್ನಪ್ಪಿದ ಒಬ್ಬ ರೈತ ಕುಟುಂಬಕ್ಕೆ ಎರಡು ಲಕ್ಷ ರೂ. ಸೇರಿದಂತೆ ಹೀಗೆ ಒಟ್ಟು ಜಿಲ್ಲೆಯ 34 ಮೃತ ರೈತರ ಕುಟುಂಬಗಳಿಗೆ 127 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಮತ್ತೆ ಲಾಕ್‍ಡೌನ್‍ನತ್ತ ರಾಜ್ಯ !

Hasiru Kranti

ಕಾದಿವೆ ರಹದಾರಿ ಗುಂಡಿಗಳು ವಾಹನ ಸವಾರರ ಆಹುತಿಗೆ.. ! 

Siddu Naduvinmani

ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ವೃತ್ತಿ ಶಿಕ್ಷಣಕ್ಕೆ ಚಿಂತನೆ : ಸಚಿವ ಶ್ರೀಮಂತ ಪಾಟೀಲ

Siddu Naduvinmani

Leave a Comment