Hasirukranti
leadingnews ವಿಜಯಪುರ

ನಾಳೆ ಮುಖ್ಯಮಂತ್ರಿಗಳಿಂದ ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ

ಅತಿವೃಷ್ಟಿ-ಪ್ರವಾಹದಿಂದಾದ ಹಾನಿಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ

ವಿಜಯಪುರ, ಅ.20: ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರು ಇದೇ ಅಕ್ಟೋಬರ್ 21 ರಂದು ಬಳ್ಳಾರಿ, (ತಾಂತ್ರಿಕ ನಿಲುಗಡೆ), ಯಾದಗಿರಿ, ರಾಯಚೂರು, ಕಲಬುರ್ಗಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ ಅತೀವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದು, ಪರಿಷ್ಕøತ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿದೆ.

ಅಕ್ಟೋಬರ್ 21 ರಂದು ಬೆಳಿಗ್ಗೆ 9.15 ಗಂಟೆಗೆ ಎಚ್‍ಎಎಲ್ ವಿಮಾನ ನಿಲ್ದಾಣ ಬೆಂಗಳೂರ ಇಲ್ಲಿಂದ ವಿಶೇಷ ವಿಮಾನದ ಮೂಲಕ ಹೊರಟು ಬೆಳಿಗ್ಗೆ 10.05 ಗಂಟೆಗೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲು, ಜಿಂದಾಲ್ ಏರ್‍ಸ್ಟ್ರಿಪ್‍ಗೆ ತೆರಳಿ ಅಲ್ಲಿಂದ ಬೆಳಿಗ್ಗೆ 10.15 ಗಂಟೆಗೆ ಐಎಎಫ್ ಹೆಲಿಕ್ಯಾಪ್ಟರ್ ಮೂಲಕ ಅತೀವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವರು.

ಅಂದು ಮಧ್ಯಾಹ್ನ 12.00 ಗಂಟೆಗೆ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಮಧ್ಯಾಹ್ನ 1.00 ಗಂಟೆಗೆ ಐಎಎಫ್ ಹೆಲಿಕ್ಯಾಪ್ಟರ್ ಮೂಲಕ ಅತಿವೃಷ್ಟಿ, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವರು.

ಅಂದು ಮಧ್ಯಾಹ್ನ 3.00 ಗಂಟೆಗೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಆಣೆಕಟ್ಟು ಆವರಣದ ಹೆಲಿಪ್ಯಾಡ್‍ಗೆ (ತಾಂತ್ರಿಕ ನಿಲುಗಡೆ) ಗೆ ಆಗಮಿಸಿ ಆಲಮಟ್ಟಿಯಲ್ಲಿ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಮಧ್ಯಾಹ್ನ 3.30 ಗಂಟೆಗೆ ಐಎಎಫ್ ಹೆಲಿಕಾಪ್ಟರ್ ಮೂಲಕ ಅತಿವೃಷ್ಟಿ, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವರು. ಸಂಜೆ 4.30 ಕ್ಕೆ ಬಳ್ಳಾರಿ ಜಿಲ್ಲೆಯ ಜಿಂದಾಲ್ ಏರ್‍ಸ್ಟ್ರಿಪ್‍ಗೆ ತೆರಳಿ, ಸಂಜೆ 4.45 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

Related posts

ಚಿರತೆ ದಾಳಿಗೆ ಯುವಕ ಬಲಿ-ಜನರಲ್ಲಿ ಆತಂಕ-ಅರಣ್ಯ ಇಲಾಖೆ ವಿರುದ್ದ ಆಕ್ರೋಶ

Siddu Naduvinmani

ಬೆಳಗಾವಿಯಲ್ಲಿ ಮರಾಠಿ ನಾಮಫಲಕಕ್ಕೆ ಕನ್ನಡಪರ ಸಂಘಟನೆಗಳಿಂದ ಕಪ್ಪುಮಸಿ

Siddu Naduvinmani

ವಿಜಯಪುರ ಜಿಲ್ಲೆಯಲ್ಲಿ ಕೋವಿಡ್‍ನಿಂದ ಇಂದು ಓರ್ವ ವೃದ್ಧ ಸಾವು

Siddu Naduvinmani

Leave a Comment