Hasirukranti
leadingnews ಬೆಳಗಾವಿ

ಸರಕಾರದ ಮೇಲೆ ಒತ್ತಡ ಹೇರಿ ಪರಿಹಾರ ಕಲ್ಪಿಸಿ: ರಾಮದುರ್ಗ ತಾಲೂಕಿನ ರೈತರಿಂದ ಸಿದ್ದರಾಮಯ್ಯನವರಿಗೆ ಮನವಿ

 

ರಾಮದುರ್ಗ, ಅ.19 : 2019-20 ರಲ್ಲಿ ಸತತ ಪ್ರವಾಹದಿಂದ ರಾಮದುರ್ಗ ತಾಲೂಕಿನ ಸುಮಾರು 39 ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿ ಎಲ್ಲರೂ ಮನೆ ಹಾಗೂ ಬೆಳೆಗಳು ನಾಶವಾದರು ಸರಕಾರದಿಂದ ಇಲ್ಲಿಯವರೆಗೂ ಸರಿಯಾಗಿ ಪರಿಹಾರ ದೊರೆತಿಲ್ಲ. ಕಳೆದ ಬಾರಿ ಪ್ರವಾಹದಿಂದ ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೆ ಪ್ರವಾಹ ಬಂಧು ರೈತರ ಎಲ್ಲ ಬೆಳೆಗಳು ನಾಶವಾಗಿದ್ದು ಅಲ್ಲದೇ ತಾಲೂಕಿನಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಕಾರಣ ಎಲ್ಲ ರೈತರ ಪ್ರಮುಖ ಬೆಳೆಗಳಾದ ಹೆಸರು, ಮೆಕ್ಕೆಜೋಳ, ಸೂರ್ಯಕಾಂತಿ ಈರುಳ್ಳಿ ಬಾಳೆ. ಅನೇಕ ತೋಟಗಾರಿಕೆ ಬೆಳೆಗಳು ನಾಶವಾಗಿ ತಾಲೂಕಿನ ರೈತರು ತುಂಬಾ ತೊಂದರೆಯಲ್ಲಿದ್ದಾರೆ. ತಾವು ವಿಧಾನ ಸಭೆಯ ವಿರೋಧ ಪಕ್ಷ ನಾಯಕರಿದ್ದು, ತಾವುಗಳು ಸರಕಾರದ ಮೇಲೆ ಒತ್ತಡ ಹೇರಿ ನಮ್ಮ ತಾಲೂಕಿನ ರೈತರಿಗೆ ಆದ ನಷ್ಟಕ್ಕೆ ಪರಿಹಾರ ಕಲ್ಪಿಸಿಕೊಡವಂತೆ ಮನವಿ ಸಲ್ಲಿಸಿದರು.

ಕಳೆದ ಪ್ರವಾಹದಲ್ಲಿ ಸಾಕಷ್ಟು ಮನೆಗಳು ಬಿದ್ದು ನಾಶವಾಗಿವೆ ನಿಜವಾದ ಫಲಾನುಭವಿಗಳಿಗೆ ನೆರೆ ಸಂತ್ರಸ್ತ ಪರಿಹಾರದ ಅನುದಾನ ದೊರೆತಿರುವದಿಲ್ಲ. ಮನೆಗಳಿಲ್ಲದೆ ಜನರು ತುಂಬಾ ತೊಂದರೆ ಅನುಭಿಸುತ್ತಿದ್ದಾರೆ ಶಿಘ್ರವಾಗಿ ಅವರಿಗೆ ಪರಿಹಾರ ದೊರಕಿಸಕೊಡಬೇಕು. ಕುಲ ಕಸಬುಗಳನ್ನು ನಂಬಿಕೊಂಡು ಜೀವಿಸುತ್ತಿರುವ ವೃತ್ತಿನಿರತ ಜನರಿಗೆ ಪರಿಹಾರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದಂರ್ಭದಲ್ಲಿ ಮಾಜಿ ಶಾಸಕ ಅಶೋಕ ಪಟ್ಟಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ. ರಂಗನಗೌಡರ, ಸೋಮಶೇಖರ ಸಿದ್ದಲಿಂಗಪ್ಪನವರ, ಜಿಲ್ಲಾ ಪಂಚಾಯತ ಸದಸ್ಯರಾದ ಜಹೂರ ಹಾಜಿ, ಕೃಷ್ಣಪ್ಪ ಲಮಾಣಿ, ಮುಖಂಡರಾದ ಬಸವರಾಜ ಹಿರೇರಡ್ಡಿ, ಬಿ.ಎಸ್. ನಾಯಕ. ಎಸ್.ಎನ್. ಸಿಂಗಾರಗೊಪ್ಪ, ಪರಪ್ಪ ಜಂಗವಾಡ, ಗಿರಿಯಪ್ಪ ಹನಸಿ, ಲಕ್ಕಪ್ಪ ಕ್ವಾರಿ, ಕೆಂಪಣ್ಣ ಕ್ವಾರಿ, ಪುರಸಭೆಯ ಸದಸ್ಯರು, ಸೇರಿದಂತೆ ಯುವ ಮುಖಂಡರು ಉಪಸ್ಥಿತರಿದ್ದರು.

Related posts

ಕರ್ನಾಟಕ ಭೂ ಕಂದಾಯ ಬಗರ್ ಹುಕುಂ ಸಾಗುವಳಿ, ಸಕ್ರಮೀಕರಣ ಸಮೀತಿಗೆ ಶಿಲ್ಪಾ ತೊದಲಬಾಗಿ ಆಯ್ಕೆ

Siddu Naduvinmani

ಸಿಎಂ ಕಾರ್ಯದರ್ಶಿಯಾಗಿದ್ದ ಶಂಕರಗೌಡ ಪಾಟೀಲ ದೆಹಲಿಯ ವಿಶೇಷ ಪ್ರತಿನಿಧಿಯಾಗಿ ನೇಮಕ

Siddu Naduvinmani

ವಿದ್ಯುತ್ ಸಹಕಾರ ಸಂಘದ ಚುನಾವಣೆ: 15 ಸ್ಥಾನಗಳಿಗೆ ಕತ್ತಿ ಸಹೋದರರ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆ

Siddu Naduvinmani

Leave a Comment