Hasirukranti
leadingnews ಬೆಳಗಾವಿ

ಸಿದ್ದರಾಮಯ್ಯನವರು ರಾಮದುರ್ಗ ತಾಲೂಕಿಗೆ ಆಗಮಿಸುತ್ತಿದ್ದಂತೆ ಹೂವಿನ ಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದ ಅಭಿಮಾನಿಗಳು

 

ರಾಮದುರ್ಗ, 19: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸೋಮವಾರ ರಾಮದುರ್ಗ ತಾಲೂಕಿಗೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಹೂವಿನ ಮಳೆ ಸುರಿಸಿ ಜಯಕಾರ ಕೂಗುತ್ತಾ ಅದ್ದೂರಿಯಾಗಿ ಸ್ವಾಗತಿಸಿಕೊಂಡರು.

ಬೆಳಗಾವಿಯಿಂದ ಬದಾಮಿಗೆ ಹೋಗುತ್ತಿರುವ ಮಾರ್ಗ ಮಧ್ಯದಲ್ಲಿ ರಾಮದುರ್ಗ ಮಾರ್ಗವಾಗಿ ಹೊರಟ ಅವರಿಗೆ ರಾಮದುರ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೂಮಾಲೆ ಹಾಕಿ ಸ್ವಾಗತಿಸುತ್ತಿರುವದು ಸಮಾನ್ಯವಾಗಿತ್ತು.

ಪಟ್ಟಣ ಪ್ರವೇಶಿಸುತ್ತಿದ್ದಂತೆ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ನಿರ್ಮಿಸಲಾಗಿರುವ ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡುತ್ತಿದ್ದಂತೆ ಕಾರ್ಯಕರ್ತರು ವೈಕ್ ರ್ಯಾಲಿ ಮೂಲಕ ಸಿದ್ದರಾಮಯ್ಯನವರನ್ನು ಹುತಾತ್ಮಚೌಕಕ್ಕೆ ಕರೆತಂದರು.

ಹುತಾತ್ಮಚೌಕಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿ ನೆರೆದ ಜನಸ್ತೋಮವನ್ನು ಕಂಡು ನಗುನಗುತ್ತಲೇ ಅವರತ್ತ ಕೈಬಿಸಿ ಸಂತಸ ವ್ಯಕ್ತಪಡಿಸಿದರು. ಮುಖಂಡರು ಹಾಗೂ ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ಹೂಮಾಲೆ ಹಾಕಿ ಸನ್ಮಾನಿಸಿ ತಾಲೂಕಿನ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.

ಮನವಿ ಸಲ್ಲಿಕೆ:
2019-20 ರಲ್ಲಿ ಸತತ ಪ್ರವಾಹದಿಂದ ರಾಮದುರ್ಗ ತಾಲೂಕಿನ ಸುಮಾರು 39 ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿ ಎಲ್ಲರೂ ಮನೆ ಹಾಗೂ ಬೆಳೆಗಳು ನಾಶವಾದರು ಸರಕಾರದಿಂದ ಇಲ್ಲಿಯವರೆಗೂ ಸರಿಯಾಗಿ ಪರಿಹಾರ ದೊರೆತಿಲ್ಲ. ಕಳೆದ ಬಾರಿ ಪ್ರವಾಹದಿಂದ ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೆ ಪ್ರವಾಹ ಬಂಧು ರೈತರ ಎಲ್ಲ ಬೆಳೆಗಳು ನಾಶವಾಗಿದ್ದು ಅಲ್ಲದೇ ತಾಲೂಕಿನಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಕಾರಣ ಎಲ್ಲ ರೈತರ ಪ್ರಮುಖ ಬೆಳೆಗಳಾದ ಹೆಸರು, ಮೆಕ್ಕೆಜೋಳ, ಸೂರ್ಯಕಾಂತಿ ಈರುಳ್ಳಿ ಬಾಳೆ. ಅನೇಕ ತೋಟಗಾರಿಕೆ ಬೆಳೆಗಳು ನಾಶವಾಗಿ ತಾಲೂಕಿನ ರೈತರು ತುಂಬಾ ತೊಂದರೆಯಲ್ಲಿದ್ದಾರೆ. ತಾವು ವಿಧಾನ ಸಭೆಯ ವಿರೋಧ ಪಕ್ಷ ನಾಯಕರಿದ್ದು, ತಾವುಗಳು ಸರಕಾರದ ಮೇಲೆ ಒತ್ತಡ ಹೇರಿ ನಮ್ಮ ತಾಲೂಕಿನ ರೈತರಿಗೆ ಆದ ನಷ್ಟಕ್ಕೆ ಪರಿಹಾರ ಕಲ್ಪಿಸಿಕೊಡವಂತೆ ಮನವಿ ಸಲ್ಲಿಸಿದರು.

ಕಳೆದ ಪ್ರವಾಹದಲ್ಲಿ ಸಾಕಷ್ಟು ಮನೆಗಳು ಬಿದ್ದು ನಾಶವಾಗಿವೆ ನಿಜವಾದ ಫಲಾನುಭವಿಗಳಿಗೆ ನೆರೆ ಸಂತ್ರಸ್ತ ಪರಿಹಾರದ ಅನುದಾನ ದೊರೆತಿರುವದಿಲ್ಲ. ಮನೆಗಳಿಲ್ಲದೆ ಜನರು ತುಂಬಾ ತೊಂದರೆ ಅನುಭಿಸುತ್ತಿದ್ದಾರೆ ಶಿಘ್ರವಾಗಿ ಅವರಿಗೆ ಪರಿಹಾರ ದೊರಕಿಸಕೊಡಬೇಕು. ಕುಲ ಕಸಬುಗಳನ್ನು ನಂಬಿಕೊಂಡು ಜೀವಿಸುತ್ತಿರುವ ವೃತ್ತಿನಿರತ ಜನರಿಗೆ ಪರಿಹಾರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದಂರ್ಭದಲ್ಲಿ ಮಾಜಿ ಶಾಸಕ ಅಶೋಕ ಪಟ್ಟಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ. ರಂಗನಗೌಡರ, ಸೋಮಶೇಖರ ಸಿದ್ದಲಿಂಗಪ್ಪನವರ, ಜಿಲ್ಲಾ ಪಂಚಾಯತ ಸದಸ್ಯರಾದ ಜಹೂರ ಹಾಜಿ, ಕೃಷ್ಣಪ್ಪ ಲಮಾಣಿ, ಮುಖಂಡರಾದ ಬಸವರಾಜ ಹಿರೇರಡ್ಡಿ, ಬಿ.ಎಸ್. ನಾಯಕ. ಎಸ್.ಎನ್. ಸಿಂಗಾರಗೊಪ್ಪ, ಪರಪ್ಪ ಜಂಗವಾಡ, ಗಿರಿಯಪ್ಪ ಹನಸಿ, ಲಕ್ಕಪ್ಪ ಕ್ವಾರಿ, ಕೆಂಪಣ್ಣ ಕ್ವಾರಿ, ಪುರಸಭೆಯ ಸದಸ್ಯರು, ಸೇರಿದಂತೆ ಯುವ ಮುಖಂಡರು ಉಪಸ್ಥಿತರಿದ್ದರು.

Related posts

ಕೊರೋನಾ : ದೇಶದಲ್ಲಿ ಗುಣಮುಖರ ಸಂಖ್ಯೆ 17.48ಕ್ಕೆ ಪ್ರತಿಶತಕ್ಕೆ ಏರಿಕೆ

Hasiru Kranti

ಹಲ್ಲೆ ಖಂಡಿಸಿ ಭೀಮ್ಸ್ ವೈದ್ಯಕೀಯ ಸಿಬ್ಬಂಧಿಗಳ ಪ್ರತಿಭಟನೆ – ಸ್ಥಳಕ್ಕೆ ಆಗಮಿಸಿ ಸಮಾಧಾನ ಪಡಿಸಿದ ಜಿಲ್ಲಾಧಿಕಾರಿ

Siddu Naduvinmani

ಕೊಯ್ನಾ ಜಲಾಶಯ ಸುತ್ತಮುತ್ತ ಲಘು ಭೂಕಂಪ : ಕೃಷ್ಣಾ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ

Siddu Naduvinmani

Leave a Comment