Hasirukranti
leadingnews ವಿಜಯಪುರ

ಶಾಂತವಾದ ಭೀಮೆ : ನಿಟ್ಟುಸಿರು ಬಿಟ್ಟ ಪ್ರವಾಹ ತೀರದ ಜನ

 

ಚಡಚಣ, 19: ಅಬ್ಬರಿಸಿ ಬೊಬ್ಬೆರೆಯುತ್ತಿದ್ದ ಭೀಮೆ ಇದೀಗ ಸೋಮವಾರದಿಂದ ನಿಧಾನವಾಗಿ ಶಾಂತವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ರುದ್ರ ನರ್ತನ ತೊರುತ್ತಿದ್ದ ಭೀಮೆಯ ಪ್ರತಾಪವು ಇಳಿಮುಖವಾಗುತ್ತಿದ್ದಂತೆ ನದಿಯ ಪ್ರವಾಹದಿಂದ ಭಯ ಭೀತರಾಗಿದ್ದ ಭೀಮಾ ತೀರದ ಜನ ಇದೀಗ ಸ್ವಲ್ಪ ಮಟ್ಟಗೆ ನಿಟ್ಟುಸಿರು ಬಿಡುವಂತಾಗಿದೆ.

ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ದಸೂರ, ಉಮರಜ, ಗೋವಿಂದಪುರ, ರೇವತಗಾಂವ, ನಿವರಗಿ, ಹೊಳೆಸಂಖ, ಉಮರಾಣಿ ಸೇರಿದಂತೆ ಇತರ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ನಿರ್ಮಾಣವಾಗಿತ್ತು. ರವಿವಾರದ ಸಂಜೆಯಿಂದ ಅಬ್ಬರಿಸಿದ ಭೀಮೆ ಇಳಿಮುಖವಾಗಿದೆ.

ಅಸ್ತವ್ಯಸ್ತಗೊಂಡ ಜನ ಜೀವನ: ಪ್ರವಾಹದ ನೀರಿನಿಂದ ಭೀಮಾ ತೀರದ ಗ್ರಾಮಗಳ ಅಂಗಡಿ, ಹೊಟೇಲ್, ಮನೆಗಳಲ್ಲಿ ನುಗ್ಗಿದ ಪ್ರವಾಹದ ನೀರಿನಿಂದಾಗಿ ಜನ ಜೀವನ ಅಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಪ್ರವಾಹಕ್ಕೆ ಹೆದರಿ ಹಲವಾರು ಜನ ಉಟ್ಟ ಬಟ್ಟೆಯಲ್ಲಿಯೇ ಮಕ್ಕಳನ್ನು ಎತ್ತಿಕೊಂಡು ರಾತ್ರೋರಾತ್ರಿ ನೂರಾರು ಕುಟುಂಬಗಳು ಮನೆಗಳನ್ನು ತೊರೆದು ಪುನರ್ ವಸತಿ ಕೇಂದ್ರಗಳಲ್ಲಿ ಉಳಿಯಬೇಕಾಯಿತು.

ಎಲ್ಲಡೆ ಗಬ್ಬು ವಾಸನೇ: ಪ್ರವಾಹದ ನೀರು ನಿಂತ ರಸ್ತೆ, ಮನೆ, ಹೊಲ ಗದ್ದೆಗಳಲ್ಲಿ ಕೆಸರು ತುಂಬಿಗೊಂಡಿದ್ದು, ಎಲ್ಲಡೆ ಗಬ್ಬು ವಾಸನೆ ಬೀರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜನರಿದ್ದಾರೆ.

ಪ್ರವಾಹದಿಂದ ಮುಕ್ತವಾದ ದೇವಾಸ್ಥಾನ: ಇನ್ನೂ ಪ್ರವಾಹದ ನೀರಿನಿಂದ ಸುತ್ತು ವರೆದಿದ್ದ ಉಮರಜದ ಶ್ರೀ ರೇವಣ ಸಿದ್ಧೇಶ್ವರ ದೇವಾಸ್ಥಾನವು ಸಂಪೂರ್ಣವಾಗಿ ಪ್ರವಾಹದ ನೀರಿನಿಂದ ಮುಕ್ತವಾಗಿ ಭಕ್ತರು ದರ್ಶನವನ್ನು ಪಡೆದರು.

ಸರ್ಕಾರದಿಂದ ಬೇಕಾಗಿದೆ ಸಹಾಯ ಹಸ್ತ: ಮಳೆ ಹಾಗೂ ಪ್ರವಾಹಕ್ಕೆ ತುತ್ತಾಗಿದ್ದ ಭೀಮಾ ತೀರದ ಜನರಿಗೆ ಬೇಕಾಗಿದೆ ಸರ್ಕಾರದ ಸಹಾಯ ಹಸ್ತ. ಅದೆಷ್ಟೋ ಕುಟುಂಬಗಳು ಮನೆ-ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದು, ಜಮೀನುಗಳಿಗೆ ನೀರು ನುಗ್ಗಿ ಸಾವಿರಾರು ಎಕರೆಗಳಲ್ಲಿ ಬೆಳೆದ ಬೆಳೆಗಳು ನಾಶವಾಗಿವೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

Related posts

ರಾಜ್ಯದಲ್ಲಿ ಕೊರೊನಾ ಮಹಾ ಸ್ಪೋಟ : 7 ಹಸಿರು ವಲಯದ ಜಿಲ್ಲೆಗಳಲ್ಲಿ ವ್ಯಾಪಿಸಿದ ಸೋಂಕು

Hasiru Kranti

ಅಹಮದಾಬಾದ ಮತ್ತು ಮುಂಬೈನಿಂದ ರಾಜ್ಯದ ಹಸಿರು ವಲಕ್ಕೆ ಕೊರೊನಾ ಲಗ್ಗೆ

Hasiru Kranti

ಸ್ಯಾಂಡಲ್​ವುಡ್​ ಡ್ರಗ್ ದಂಧೆ ; ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವ ಮನೆ ಮೇಲೆ ಸಿಸಿಬಿ ದಾಳಿ

Siddu Naduvinmani

Leave a Comment