Hasirukranti
leadingnews ಬೆಳಗಾವಿ

ದೇಶದಲ್ಲಿ ಒಳ್ಳೆ ಪೊಲಿಟಿಕಲ್ ಪಾರ್ಟಿ ಇದ್ರೇ ಅದು ಕಾಂಗ್ರೆಸ್ ಪಕ್ಷ: ಸಿದ್ದರಾಮಯ್ಯ

 

ಬೆಳಗಾವಿ, ಅ.19: ದೇಶದಲ್ಲಿ ಒಳ್ಳೆ ಪೊಲಿಟಿಕಲ್ ಪಾರ್ಟಿ ಇದ್ರೇ ಅದು ಕಾಂಗ್ರೆಸ್ ಪಕ್ಷ. ಜಿಜೆಪಿ ಎಂಎಲ್ ಎ ಅವರನ್ನು ಕೇಳಿ, ಜೆಡಿಎಸ್ ಅವರನ್ನೇ ಕೇಳಿ ನಮ್ಮ ಆಡಳಿತದಲ್ಲಿ ಯಾವತ್ತೂ ಅನುದಾನ ಕೊರತೆ ಇರಲಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ ಅವರು, ರಾಜ್ಯದಲ್ಲಿ ಲಂಚವಿಲ್ಲದೇ ಯಾವ ಕೆಲಸಗಳೂ ಆಗುತ್ತಿಲ್ಲ. ಹಣ ಕೊಡದೇ ಸರ್ಕಾರದಿಂದ ವಿವಿಧ ಕಾಮಗಾರಿಗಳ ಅನುದಾನವೂ ಬಿಡುಗಡೆಯಾಗುತ್ತಿಲ್ಲ. ರಾಜ್ಯದಲ್ಲಿ ಪರ್ಸೆಂಟೇಜ್ ಸರ್ಕಾರ ಆಡಳಿತ ನಡೆಸುತ್ತಿದೆ.

ಕಾಂಗ್ರೆಸ್ ಎಂಎಲ್‍ಎ ಇರುವ ಕಡೆ ಹೋಗಲಿ, ಬಿಜೆಪಿ ಎಂಎಲ್‍ಎ ಇರುವ ಕಡೆಯೂ ಹಣ ನೀಡಿಯೇ ಅನುದಾನ ಪಡೆಯಲಾಗುತ್ತಿದೆ. ಸರ್ಕಾರದ ಭ್ರಷ್ಟಾಚಾರ ಎಲ್ಲೇ ಮೀರಿದೆ. ಸ್ವಪಕ್ಷದ ಶಾಸಕರಿಂದಲೇ ಅನುದಾನಕ್ಕಾಗಿ ಹಣ ಪಡೆಯುತ್ತಿರುವುದು ಇದೇ ಮೊದಲು.ನೆರೆ ಸಂತ್ರಸ್ತರಿಗೆ ಇದುವರೆಗೂ ಪರಿಹಾರ ತಲುಪಿಲ್ಲ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಖಾತೆಯಲ್ಲಿ ಹಣವಿದೆ. ಅದನ್ನು ಪ್ರವಾಹ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಲು ಬಳಸಿಕೊಳ್ಳಿ ಎನ್ನುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿ ಖಾತೆಯಲ್ಲಿದ್ದರೆ ಆ ಹಣ ನೆರೆ ಸಂತ್ರಸ್ತರಿಗೆ ತಲುಪುತ್ತಿತ್ತು. ತಲುಪಿಲ್ಲ ಅಂದರೆ ಹಣ ಇಲ್ಲ ಎಂದೇ ಅರ್ಥ. ಬಾರೋ ಬಾರೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ ಎಂದು ಹಾಡು ಹೇಳುತ್ತಲೇ ಇದ್ದೇವೆ. ಪರಿಹಾರ ಮಾತ್ರ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಈ ವೇಳೆ ಶಾಸಕರಾದ ಡಾ.ಅಂಜಲಿ ನಿಂಬಾಳ್ಕರ್, ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಫಿರೋಜ್ ಶೇಠ್, ಅಶೋಕ ಪಟ್ಟಣ, ಬೆಳಗಾವಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜು ಶೇಠ್ ಮತ್ತಿತರರು ಇದ್ದರು.

Related posts

ವಾಟ್ಸಾಪ್ ಬಳಕೆದಾರರಿಗೆ ಶುಭ ಸುದ್ದಿ : ಇಲ್ಲಿದೆ ಸಂಪೂರ್ಣ ಮಾಹಿತಿ

Siddu Naduvinmani

ರಾಜ್ಯದಲ್ಲಿಂದು ಮತ್ತೆ 7866 ಜನರಿಗೆ ಕೊರೋನಾ ದೃಢ : 146 ಸೋಂಕಿತರು ಬಲಿ

Siddu Naduvinmani

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ರಮೇಶ ಜಾರಕಿಹೊಳಿ ನೇಮಕ

Siddu Naduvinmani

Leave a Comment