Hasirukranti
leadingnews ಬೆಳಗಾವಿ

Video ವೈರಲ್ : ಭಕ್ತರಿಗೆ ನಿರ್ಬಂಧ ಇದ್ದರೂ 200 ರೂ. ಕೊಟ್ಟರೆ ಯಲ್ಲಮ್ಮನ ದರ್ಶನ : ಸಾರ್ವಜನಿಕರು ಆರೋಪ

 

ಸವದತ್ತಿ, ಅ.18 : ಯಲ್ಲಮ್ಮನ ದರ್ಶನಕ್ಕೆ ಎರಡುನೂರು ರೂಪಾಯಿ ಬೇಡಿಕೆ ಇಟ್ಟು ಖಾಕಿ ಎದುರೆ ಭರ್ಜರಿ ರೋಲ್ಕಾಲ್ ಮಾಡಲಾಗಿದೆ. ಲಂಚ ಪಡೆಯುವ ಖಾಸಗಿ ವ್ಯಕ್ತಿಗಳಿಗೆ ಸ್ಥಳೀಯ ಪೊಲೀಸರು ಸಾಥ್ ನೀಡುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.

ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಅ 31ರ ವರೆಗೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕೊರೊನಾ ಆತಂಕದ ನಡುವೆಯೂ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ರಾಜ್ಯ ಮಹಾರಾಷ್ಟ್ರದಿಂದ ಭಕ್ತರು ಎಲ್ಲಮ್ಮಗುಡ್ಡಕ್ಕೆ ಆಗಮಿಸುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಂಪರ್ಕ ಕಲ್ಪಿಸುವ ಉಗರಗೋಳ, ಸವದತ್ತಿ ಹಾಗೂ ಜೋಗುಳ ಬಾವಿ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಭಕ್ತರಲ್ಲಿ ಖಾಸಗಿ ವ್ಯೆಕ್ತಿಗಳು ಎರಡುನೂರು (200) ರೂಪಾಯಿ ಬೇಡಿಕೆಯಿಡುತ್ತಿದ್ದಾರೆ ಎಂಬ ಆರೋಪ ಹೇಳಿ ಬಂದಿದೆ ಅಲ್ಲದೆ ಈ ಲಂಚಾವತಾರ ಪೊಲೀಸರ ಎದುರೇ ನಡೆಯುತ್ತಿದ್ದು, ಲಂಚ ಪಡೆಯುವ ಖಾಸಗಿ ವ್ಯೆಕ್ತಿ ಭಕ್ತರಲ್ಲಿ ಎರಡುನೂರು (200) ರೂ ಬೇಡಿಕೆ ಇಟ್ಟ ದೃಶ್ಯ ಇದೀಗ ಎಲ್ಲಡೆ ಹರಿದಾಡುತ್ತಿದೆ.

ಅಕ್ಟೋಬರ್ 25ರ ವರೆಗೆ ನವರಾತ್ರಿ ಉತ್ಸವ ಇರುವ ಹಿನ್ನೆಲೆಯಲ್ಲಿ ಎಲ್ಲಮ್ಮ ದೇವಿಯ ದರ್ಶನಕ್ಕೆ ಭಕ್ತರ ದಂಡು ಆಗಮಿಸುತ್ತಿದೆ ಇದನ್ನೆ ಬಳಸಿಕೊಳ್ಳಲು ಮುಂದಾದ ಖಾಸಗಿ ವ್ಯೆಕ್ತಿಗಳು ಪೊಲೀಸರ ಸಮ್ಮುಖದಲ್ಲೆ, ಒಬ್ಬರಿಗೆ ಎರಡುನೂರು ಲಂಚ ಕೊಟ್ಟರೆ ದೇವಿಯ ಬಾಗಿಲವರೆಗೆ ಕರೆದುಕೊಂಡು ಹೋಗಿ ಮಾತಂಗಿ ಮತ್ತು ಎನೆಹೊಂಡದ ದರ್ಶನ ಮಾಡಿಸುವುದಾಗಿ ಹೇಳಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಲಂಚ ಪಡೆಯುವ ಖಾಸಗಿ ವ್ಯಕ್ತಿಗಳಿಗೆ ಸ್ಥಳೀಯ ಪೊಲೀಸರು ಸಾಥ್ ನೀಡುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.

Related posts

ಬಡಕುಂದ್ರಿ ಗ್ರಾಮದಲ್ಲಿ 30 ಹೆಕ್ಟೇರ್ ಬೆಳೆ ಸಂಪೂರ್ಣ ನಾಶ : ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿ ಮಾಹಿತಿ

Siddu Naduvinmani

ರಾಮತೀರ್ಥ ನಗರದಲ್ಲಿ ಕ್ವಾರಂಟೈನ್ ಮಾಡಬಾರದೆಂದು ಸ್ಥಳೀಯರು ಆಗ್ರಹ

Siddu Naduvinmani

ಐನಾಪೂರ ನೆಮ್ಮದಿ‌ ಕೇಂದ್ರಕ್ಕೆ ನುಗ್ಗಿದ ಮಳೆ ನೀರು : ಖಡತಗಳು ನೀರು ಪಾಲು

Siddu Naduvinmani

Leave a Comment