Hasirukranti
leadingnews ಬೆಳಗಾವಿ

ಡಿಸಿಸಿ ಬ್ಯಾಂಕ್ ಚುನಾವಣೆ ಗೊಂದಲ ಬೇಡ: ಅಥಣಿಯಲ್ಲಿ ಡಿಸಿಎಮ್ ಸವದಿ ಸ್ಪಷ್ಟನೆ

ಅಥಣಿ, 18: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ಕಣದಲ್ಲಿ ರಂಗೇರುತ್ತಿದ್ದಂತೆಯೇ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಆರ್ ಎಸ್ ಎಸ್ ತನ್ನ ಕಾವು ಪಡೆದುಕೊಂಡಿದೆ.ಈ ಬಗ್ಗೆ ಖಾಸಗಿ ಕಾರ್ಯಕ್ರಮ ವೇಳೆ ಮಾತನಾಡಿರುವ ಡಿಸಿಎಮ್ ಹಾಗೂ ಸಾರಿಗೆ ಸಚೀವ ಲಕ್ಷ್ಮಣ ಸವದಿ ಆರ್ ಎಸ್ ಎಸ್, ಬಿಜೆಪಿ ಎರಡು ಒಂದೆ ಆಗಿವೆ.
ಆರ್ ಎಸ್ ಎಸ್ ನೇರವಾಗಿ ರಾಜಕೀಯ ಮಾಡುವದಿಲ್ಲಾ, ಅದು ಬಿಜೆಪಿಗೆ ಮಾರ್ಗದರ್ಶನ ಮಾಡುತ್ತದೆ.ಡಿ ಸಿ ಸಿ ಬ್ಯಾಂಕ ರಾಜ್ಯದಲ್ಲೇ ದೊಡ್ಡದಾದ ಬ್ಯಾಂಕ ಆಗಿದ್ದು ಡಿಸಿಸಿ ಬ್ಯಾಂಕ ಚುನಾವಣೆ ಹಿನ್ನಲೆಯಲ್ಲಿ ಆರ್ ಎಸ್ ಎಸ್ ಮುಖಂಡರ ಜೊತೆಗೆ ನಿನ್ನೆ ಅಥಣಿಯಲ್ಲಿ ಸಭೆ ನಡೆದಿದ್ದು ನಿಜ.ಬೆಳಗಾವಿ ಜಿಲ್ಲೆಯ ಬಿಜೆಪಿ ಪಕ್ಷದಲ್ಲಿ ಲಕ್ಷ್ಮಣ ಸವದಿ, ಕತ್ತಿ ಕುಟುಂಬ, ಹಾಗೂ ಜಾರಕಿಹೋಳಿ ಕುಟುಂಬ ಇರುವದರಿಂದ ನಮ್ಮ ಮದ್ಯ ವೈಮನಸ್ಸು ಬರಬಾರದು ಅನ್ನುವ ನಿಟ್ಟಿನಲ್ಲಿ ಸಭೆ ನಡೆದಿದೆ.ಡಿ ಸಿ ಸಿ ಬ್ಯಾಂಕಿನ ಚುನಾವಣೆಯನ್ನು ಸೌಹಾರ್ಧಯುತವಾಗಿ ನಡೆಸಬೇಕು ಅಲ್ಲದೆ ಅವಿರೋಧವಾಗಿ ಆಯ್ಕೆ ನಡೆಯಬೇಕು ಅನ್ನುವ ಬಗ್ಗೆ ಚರ್ಚೆ ನಡೆದಿದ್ದು ಮಂಗಳವಾರ ಮತ್ತೆ  ಬೆಳಗಾವಿಯಲ್ಲಿ ಸಭೆ ಸೇರಿ ಯಾವ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಇರಬೇಕು ಅನ್ನುವದ ಬಗ್ಗೆ ನಿರ್ಧಾರ ಮಾಡುತ್ತೇವೆ.ಅಲ್ಲದೆ
ಡಿ ಸಿ ಸಿ ಬ್ಯಾಂಕ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಾನು ಇನ್ನು ನಿರ್ಧಾರ ಮಾಡಿಲ್ಲಾ, ಪಕ್ಷ ಹಾಗೂ ಕಾರ್ಯಕರ್ತರ ಸಭೆ ನಡೆಸಿ ತಿರ್ಮಾಣ ತೆಗೆದುಕೊಳ್ಳಲಿದ್ದು, ಅಥಣಿಯಲ್ಲಿ  ಉಪಮುಖ್ಯಮಂತ್ರಿ ಡಿಸಿಎಂ ಲಕ್ಷ್ಮಣ ಸವದಿ  ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Related posts

ಆಝಾದ್ ಗಲ್ಲಿ ಕಂಟೈನ್ಮೇಂಟ ಝೋನ್ ತೆರವು

Siddu Naduvinmani

ದಸರಾ ಗಿಫ್ಟ್ : ಕೇಂದ್ರ ಸರ್ಕಾರದಿಂದ ಚಕ್ರಬಡ್ಡಿ ಮನ್ನಾ

Siddu Naduvinmani

ಒಂದೇ ದಿನ ಸರಳ ಮತ್ತು ಸಾಂಪ್ರದಾಯಿಕ ಕಿತ್ತೂರು ಉತ್ಸವ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

Siddu Naduvinmani

Leave a Comment