Hasirukranti
ಬಾಗಲಕೋಟೆ

79 ಜನ ಗುಣಮುಖ, 138 ಹೊಸ ಪ್ರಕರಣಗಳು ದೃಡ

ಬಾಗಲಕೋಟೆ: ಅಕ್ಟೋಬರ 18: ಜಿಲ್ಲೆಯಲ್ಲಿ 79 ಜನ ಕೋವಿಡ್‍ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದ್ದು, ಹೊಸದಾಗಿ 138 ಕೊರೊನಾ ಪ್ರಕರಣಗಳು ಹಾಗೂ ಒಂದು ಮೃತ ಪ್ರಕರಣ ರವಿವಾರ ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 12523 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 11470 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ದೃಡಪಟ್ಟವರಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 25, ಬಾದಾಮಿ 18, ಬೀಳಗಿ 3, ಹುನಗುಂದ 37, ಮುಧೋಳ 24, ಜಮಖಂಡಿ 31 ಜನರಲ್ಲಿ ಸೋಂಕು ದೃಡಪಟ್ಟಿದ್ದು, ಅವರನ್ನು ನಿಗದಿತ ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾ ಕೋವಿಡ್ ಲ್ಯಾಬ್‍ನಲ್ಲಿ ಪರಿಕ್ಷಿಸಲಾಗುತ್ತಿದ್ದ 1296 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 136629 ಸ್ಯಾಂಪಲ್‍ಗಳನ್ನು ಪರೀಕ್ಷೀಸಲಾಗಿದ್ದು, ಈ ಪೈಕಿ 122299 ನೆಗಟಿವ್ ಪ್ರಕರಣ, 12523 ಪಾಜಿಟಿವ್ ಪ್ರಕರಣ ಹಾಗೂ 126 ಮೃತ ಪ್ರಕರಣ ವರದಿಯಾಗಿರುತ್ತದೆ. ಇನ್ನು 927 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 413 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. ಕಂಟೈನ್ಮೆಂಟ್ ಝೋನ್ 438 ಇರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Related posts

165 ಜನ ಗುಣಮುಖ, 212 ಹೊಸ ಪ್ರಕರಣಗಳು ದೃಡ

Siddu Naduvinmani

ನೆರೆ, ಪ್ರವಾಹ ಹಾನಿ ವೀಕ್ಷಿಸಿದ ಕೇಂದ್ರ ಅಧ್ಯಯನ ತಂಡ

Siddu Naduvinmani

ಪ್ರವಾಹ ಬಾಧಿತಗೊಳಗಾಗುವ ಪ್ರದೇಶಗಳಿಗೆ ಡಿಸಿಎಂ ಕಾರಜೋಳ ಭೇಟಿ : ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸಾರ್ವಜನಿಕರಲ್ಲಿ ಮನವಿ

Siddu Naduvinmani

Leave a Comment