Hasirukranti
leadingnews ವಿಜಯಪುರ

ಪ್ರವಾಹದಿಂದಾಗಿ ದ್ರಾಕ್ಷಿ, ತೋಗರಿ ಸೇರಿದಂತೆ ಅನೇಕ ಬೆಳೆಗಳು ಹಾನಿ : ರೈತರ ಸಂಕಷ್ಟ ಕೇಳೋರ್ಯಾರು ?

 

ಚಡಚಣ: ಕಳೆದ ನಾಲ್ಕೈದು ದಿನಗಳಿಂದ ರುದ್ರ ನರ್ತನ ತೊರುತ್ತಿದ್ದ ಭೀಮೆ ರವಿವಾರದಂದು ಭೀಮೆಯ ಪ್ರತಾಪವು ಇಳಿಮುಖವಾಗಿದೆ. ಇದರಿಂದ ಭೀಮಾ ನದಿಯ ಪ್ರವಾಹದಿಂದ ಭಯ ಭೀತರಾಗಿದ್ದ ಭೀಮಾ ತೀರದ ಜನ ಇದೀಗ ಸ್ವಲ್ಪ ಮಟ್ಟಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಪ್ರವಾಹ ಇಳಿಮುಖವಾಗುತ್ತಿದ್ದರೂ ರೈತರ ಸಂಕಷ್ಟ ಕೇಳೋರಿಲ್ಲ: ಭೀಮಾ ನದಿಯ ಪ್ರವಾಹ ಹಾಗೂ ಹಿನ್ನೀರಿನಿಂದ ಅನೇಕ ಹಳ್ಳಿಗಳ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದರು. ಅದರಲ್ಲಿಯೂ ಕರೊನಾ ಮಹಾಮಾರಯಿಂದ ತತ್ತರಿಸಿ ಹೋಗಿದ್ದ ರೈತರು ಇದೀಗ ನದಿ ಪ್ರವಾಹದಲ್ಲಿ ಹಾಳಾದ ಬೆಳೆಯಿಂದ ರೈತ ಸಂಪೂರ್ಣವಾಗಿ ನಲುಗಿ ಹೋಗಿದ್ದಾನೆ. ಆತನ ಆರ್ತನಾದವನ್ನು ಕೇಳೋರಿಲ್ಲ. ಹಿನ್ನೀರಿನಿಂದ ರೇವತಗಾಂವದ ಅನೇಕ ದ್ರಾಕ್ಷಿ, ತೋಗರಿ ಸೇರಿದಂತೆ ಇತರ ಬೆಳೆಗಳು ನಾಶವಾಗಿದ್ದು. ರೈತನು ತುಂಬಾ ಹತಾಶಯನಾಗಿದ್ದಾನೆ.

ದ್ರಾಕ್ಷಿ ಬೆಳೆ ನಾಶ: ಭೀಮಾ ನದಿಯ ಹಿನ್ನೀರಿನಿಂದ ರೇವತಗಾಂವ ಗ್ರಾಮದ ಹಲವಾರು ದ್ರಾಕ್ಷಿ ತೋಟಗಳು ಮುಳುಗಡೆಯಾಗಿವೆ. ಇದರಿಂದ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ನೀರಲ್ಲಿ ಮುಳುಗಡೆಯಾದ ಹಿನ್ನಲೆ ರೈತ ಕಂಗಾಲಾಗಿದ್ದಾನೆ. ಆತನ ಸಂಕಷ್ಟವನ್ನು ಕೇಳಲು ಯಾವೊಬ್ಬ ತೋಟಗಾರಿಕಾ ಅಧಿಕಾರಿಗಳು ಬಾರದಿದ್ದಕ್ಕೆ ರೈತ ಆಕ್ರೋಶವನ್ನು ಹೊರ ಹಾಕುತ್ತಿದ್ದಾನೆ.

ದ್ರಾಕ್ಷಿ ತೋಟದ ಮೇಲೆ ಬಿತ್ತು ವಿದ್ಯುತ್ ಕಂಬ: ಭೀಮಾ ನದಿಯ ಹಿನ್ನೀರಿನಿಂದ ದ್ರಾಕ್ಷಿ ತೋಟ ನೀರಲ್ಲಿ ಮುಳುಗಡೆಯಾಗಿ ಕಷ್ಟ ಅನುಭವಿಸುತ್ತಿರುವ ಬೆನ್ನಲ್ಲೆ ಗ್ರಾಮದ ನಾಗಪ್ಪ ಹಾವಿನಾಳರವರ ಜಮೀನಿನಲ್ಲಿ ವಿದ್ಯುತ್ ಕಂಬವೊಂದು ದ್ರಾಕ್ಷಿ ತೋಟದ ಮೇಲೆ ಬಿದ್ದು ರೈತನನ್ನು ಇನ್ನಷ್ಟು ಸಂಕಷ್ಟಕ್ಕೆ ಇಡು ಮಾಡುವಂತೆ ಮಾಡಿದೆ.

Related posts

ಕೊರೊನಾ ಸಂಕಷ್ಟ : ತೆಲಂಗಾಣ ಮತ್ತು ಆಂದ್ರದಿಂದ ಬಳ್ಳಾರಿಗೆ ಸಾರ್ವಜನಿಕರ ಓಡಾಟ ನಿರ್ಬಂಧಿಸಿದ ಜಿಲ್ಲಾಡಳಿತ

Hasiru Kranti

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಿತ್ಯವೂ ಕೋಟ್ಯಂತರ ರೂ. ಕಾಮಗಾರಿ

Siddu Naduvinmani

ಕುಗನೊಳ್ಳಿ ಚೆಕ್ ಪೋಸ್ಟ್ ಗೆ ಗೃಹಸಚಿವ ಬೊಮ್ಮಾಯಿ ಭೇಟಿ : ಅಕ್ರಮ ಪ್ರವೇಶ ತಡೆಗೆ ಕಟ್ಟುನಿಟ್ಟಿನ ಸೂಚನೆ

Siddu Naduvinmani

Leave a Comment