Hasirukranti
leadingnews ವಿಜಯಪುರ

ನೀರು ನುಗ್ಗಿದ ಮನೆಗಳಿಗೆ ತಕ್ಷಣ 10 ಸಾವಿರ ರೂಗಳ ಪರಿಹಾರ ಧನ ವಿತರಣೆ : ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ

 

ವಿಜಯಪುರ, ಅ.18: ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಭೇಟಿ ನೀಡಿ ರೈತರ ಹಾಗೂ ಸಂತ್ರಸ್ತರೊಂದಿಗೆ ಮಾತನಾಡಿದ ಅವರು ಪ್ರವಾಹದಿಂದ ಮನೆಯಲ್ಲಿ ನೀರು ಬಂದ ಪ್ರತಿ ಕುಟುಂಬಕ್ಕೆ ತಕ್ಷಣ 10 ಸಾವಿರ ರೂಗಳ ಪರಿಹಾರಧನ ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಆದ ಪ್ರವಾಹದಿಂದಾಗಿ ಒಟ್ಟು 41 ಹಳ್ಳಿಗಳು ಸಿಲುಕಿಕೊಂಡಿದ್ದು ಅವುಗಳ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಂಡಿದ್ದೆ ಹಾಗೂ ಪ್ರವಾಹಕ್ಕೆ ಒಳಗಾದ ಹಳ್ಳಿಗಳಿಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಅದರಂತೆ ಪ್ರವಾಹಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದ್ದು ಯಾವುದೆ ಮಾನವಹಾನಿ ಹಾಗೂ ಜಾನುವಾರ ಹಾನಿ ಯಾಗದಂತೆ ನೊಡಿಕೊಳ್ಳಲಾಗುವುದು. ಕೆಲವು ದಿನಗಳಲ್ಲಿ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯಿಂದ ಬೆಳೆಹಾನಿ ಹಾಗೂ ಮನೆಹಾನಿಗಳ ಸರ್ವೆ ಕಾರ್ಯ ಪ್ರಾರಂಭಸಿಲಾಗುತ್ತದೆ. ಯಾವುದೇ ರೈತರೂ ಆತಂಕಪಡಬಾರದು ಎಂದು ಹೇಳಿದರು.

ಉಮರಾಣಿ ಗ್ರಾಮದ ಸಮಸ್ಯೆಗಳಾದ ರಸ್ತೆಗಳ ಸುಧಾರಣೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲು ಇನ್ನು ಕೆಲವೆ ದಿನಗಳಲ್ಲಿ ಇಲ್ಲಿನ ರೈತ ಮುಖಂಡರೊಂದಿಗೆ ಚರ್ಚಿಸಿ ಪರಿಹರಿಸಲು ಪ್ರಯತ್ನಿಸುತ್ತೆನೆ ಎಂದು ಹೇಳಿದರು.

ಅದರಂತೆ ಕಳೆದ ಸಾಲಿನಲ್ಲಾದ ಬೆಳೆ ಪರಿಹಾರ ಈಗಾಗಲೆ ರೈತರ ಖಾತೆಗಳಿಗೆ ಜಮೆಯಾಗುತ್ತಿದೆ. ಸದ್ಯ ಜಿಲ್ಲೆಯಲ್ಲಾದ ಪ್ರವಾಹ ಬೆಳೆಹಾನಿ, ಮನೆಹಾನಿಗಳ ಸರ್ವೆ ಮಾಡಿಸಿ ರೈತರಿಗೆ ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಆತ್ಮ ಸ್ಥೈರ್ಯ ತುಂಬಿದರು.

ಕೋವಿಡ್-19 ನಿಂದ ಜಿಲ್ಲೆ ಇನ್ಮೂ ಹೊರಬಂದಿಲ್ಲ ಅಷ್ಟರಲ್ಲೆ ಪ್ರವಾಹವನ್ನು ಎದುರಿಸುಂತಾಗಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಸಕಲ ಕಾರ್ಯಗಳನ್ನು ಮಾಡುತ್ತಿದ್ದು, ನನ್ನ ಪ್ರಯತ್ನ ಮೀರಿ ನಿಮ್ಮ ಮನೆ ಮಗಳಾಗಿ ಕಾರ್ಯ ಮಾಡುತ್ತೆನೆ ಎಂದು ಸಾಂತ್ವನ ಹೇಳಿದರು.
ಇದೇ ಸಂದರ್ಭದಲ್ಲಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವ ಸಂತ್ರಸ್ತರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು.

ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋವಿಂದ ರೆಡ್ಡಿ, ನಾಗಠಾಣ ಶಾಸಕ ದೇವಾನಂದ ಚಹ್ವಾಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Related posts

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮೃತ ಸಿಬ್ಬಂದಿ ಪ್ರಾಥಮಿಕ ಸಂಪರ್ಕದಿಂದ ಮತ್ತೆ 6 ಜನರಿಗೆ ಕೋವಿಡ್-19 ಸೋಂಕು

Siddu Naduvinmani

ಸಚಿವ ರಮೇಶ್ ಜಾರಕಿಹೊಳಿ‌ ಬಿಜೆಪಿ ರಾಷ್ಟ್ರಾಧ್ಯಕ್ಷರನ್ನು ಭೇಟಿ : ಅತಿವೃಷ್ಟಿಯನ್ನು ತಡೆಯಲು ನದಿಗಳ ಜೋಡಣೆಗಾಗಿ ಮನವಿ

Siddu Naduvinmani

ಬೆಳಗಾವಿಯಲ್ಲಿ ಮುಂದುವರೆದ ಕೊರೋನಾರ್ಭಟ : ಇಂದು ಒಂದೇ ದಿನಕ್ಕೆ 218 ಜನರಿಗೆ ಸೋಂಕು – 5 ಬಲಿ

Siddu Naduvinmani

Leave a Comment