Hasirukranti
ವಿಜಯಪುರ

ಜಿಲ್ಲೆಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವಲ್ಲಿ ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ : ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್

ವಿಜಯಪುರ, ಅ.17 : ಜಿಲ್ಲೆಯಲ್ಲಿ ಇಂದು ಮಳೆ ಆಗಿರುವುದಿಲ್ಲ. ತಾವು ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಸಿಂದಗಿ ತಾಲೂಕಿನಲ್ಲಿ ಮೊಕ್ಕಾಂ ಹೂಡಿ, ರೆಸ್ಕ್ಯೂ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 02 ಎನ್.ಡಿ.ಆರ್.ಎಫ್ ತಂಡಗಳು ಸಿಂದಗಿ ತಾಲೂಕಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುತ್ತವೆ. ಬೆಳಗಾವಿಯ ಮರಾಠಾ ಲೈಫ್ ಇನ್ಫೆಂಟರಿಯ ಪ್ರವಾಹ ರೆಸ್ಕ್ಯೂ ತಂಡವು ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಸರ್ವೆ ಕಾರ್ಯದಲ್ಲಿ ತೊಡಗಿದ್ದು, ಒಟ್ಟಿನಲ್ಲಿ ಜಿಲ್ಲಾಡಳಿತವು ಪ್ರವಾಹ ಪರಿಸ್ಥಿತಿಯನ್ನು ಎದುರಿಸುವಲ್ಲಿ ಸರ್ವಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತಿದೆ.

ಅದರಂತೆ ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ನೇಮಿಸಲಾದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲದಾರರು ಕೇಂದ್ರ ಸ್ಥಾನದಲ್ಲಿದ್ದು, ಅತೀವೃಷ್ಟಿ, ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಕಂಟ್ರೋಲ್ ರೂಮ್ ದೂ.ಸಂ: ಟೋಲ್ ಫ್ರೀ ನಂ : 1077 (08352-221216) ಪ್ರಾರಂಭಿಸಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಚಡಚಣ ತಾಲೂಕಿನ ವಿವಿಧ ಏಳು ಗ್ರಾಮಗಳಲ್ಲಿ ಒಟ್ಟು 3121 ಮನೆಗಳಿದ್ದು, ಆ ಪೈಕಿ 189 ಮನೆಗಳು ಜಲಾವೃತಗೊಂಡಿವೆ. ಅಲ್ಲಿನ ಜನಸಂಖ್ಯೆ 15180 ಆಗಿದ್ದು, 1002 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 121 ಜನರನ್ನು ರಕ್ಷಣಾ ತಂಡದಿಂದ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ.

ಇಂಡಿ ತಾಲೂಕಿನ ವಿವಿಧ 12 ಗ್ರಾಮಗಳಲ್ಲಿ ಒಟ್ಟು 6434 ಮನೆಗಳಿದ್ದು, ಆ ಪೈಕಿ 1790 ಮನೆಗಳು ಜಲಾವೃತಗೊಂಡಿವೆ. ಅಲ್ಲಿನ ಜನಸಂಖ್ಯೆ 33133 ಆಗಿದ್ದು, 8952 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 515 ಜನರನ್ನು ರಕ್ಷಣಾ ತಂಡದಿಂದ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ.

ಸಿಂದಗಿ ತಾಲೂಕಿನ ವಿವಿಧ 8 ಗ್ರಾಮಗಳಲ್ಲಿ ಒಟ್ಟು 3021 ಮನೆಗಳಿದ್ದು, ಆ ಪೈಕಿ 426 ಮನೆಗಳು ಜಲಾವೃತಗೊಂಡಿವೆ. ಅಲ್ಲಿನ ಜನಸಂಖ್ಯೆ 22472 ಆಗಿದ್ದು, 1421 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 880 ಜನರನ್ನು ರಕ್ಷಣಾ ತಂಡದಿಂದ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ.

ಜಿಲ್ಲೆಯ ಚಡಚಣ, ಇಂಡಿ, ಸಿಂದಗಿ ತಾಲೂಕುಗಳಲ್ಲಿ ಒಟ್ಟು 18 ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, 460 ಕುಟುಂಬಗಳಿದ್ದು, ಅಲ್ಲಿ 1861 ಜನರಿದ್ದಾರೆ. ಆ ಪೈಕಿ 675 ಗಂಡಸರು, 592 ಮಹಿಳೆಯರು 601 ಮಕ್ಕಳು ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

Related posts

ರಸ್ತೆ ಅವಘಡ ತಪ್ಪಿಸಲು ಬಿಡಾಡಿ ದನಗಳನ್ನು ಹದ್ದುಬಸ್ತ್‍ದಲ್ಲಿ ಇಡುವ ಬಗ್ಗೆ ಮಾಹಿತಿ ನೀಡಿ – ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್

Siddu Naduvinmani

ಸಂಗೋಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಪ್ರತಿಭಟನೆ

Siddu Naduvinmani

ಸಿಡಿಲು ಬಡಿದು ರೈತನೋರ್ವ ಸಾವು

Siddu Naduvinmani

Leave a Comment