Hasirukranti
ಬಳ್ಳಾರಿ

ವಿಮ್ಸ್ ಸುಧಾರಣೆಗೆ ಅಗತ್ಯ ಕ್ರಮ: ಸಚಿವ ಆನಂದಸಿಂಗ್

ವಿಮ್ಸ್‍ನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿಂಗ್

ಬಳ್ಳಾರಿ, ಅ.17: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾವುದು ಎಂದು ಅರಣ್ಯ,ಪರಿಸರ,ಜೀವಿಶಾಸ್ತ್ರ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಆನಂದ್‍ಸಿಂಗ್ ಹೇಳಿದರು.

ನಗರದ ವಿಮ್ಸ್ ನಿರ್ದೇಶಕರ ಸಭಾಂಗಣದಲ್ಲಿ ಶನಿವಾರ ನಡೆದ ವಿಮ್ಸ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಮ್ಸ್‍ನಲ್ಲಿ ತಕ್ಷಣದ ಅವಶ್ಯಕತೆಗಳನ್ನು ಮೊದಲಿಗೆ ನಮ್ಮಲ್ಲಿನ ಜಿಲ್ಲಾ ಖನಿಜ ನಿಧಿ ಹಾಗೂ ಸರಕಾರದ ಅನುದಾನ ಬಳಸಿಕೊಂಡು  ಪೂರೈಸೋಣ.ನಂತರ ಹಂತಹಂತವಾಗಿ ವಿಮ್ಸ್‍ನ ಅಗತ್ಯ ಸೌಕರ್ಯ ಹಾಗೂ ಅವಶ್ಯಕತೆಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದರು.
ಇತ್ತೀಚೆಗೆ ನಡೆದ ಡಿಎಂಎಫ್ ಸಭೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ; ನಂತರ ಉಳಿದ ಸೆಕ್ಟರ್ ಗಳತ್ತ ಗಮನಹರಿಸಲು ತೀರ್ಮಾನಿಸಲಾಗಿದೆ. ವಿಮ್ಸ್ ನ ಕಾಯಕಲ್ಪಕ್ಕೆ ಕ್ರಮವಹಿಸಲಾಗುವುದು ಎಂದರು.

ವಿಮ್ಸ್ ಸಿಸಿಟಿವಿ ಅಳವಡಿಕೆಗೆ ನಿರ್ಭಯಾ ಫಂಡ್: 174ಎಕರೆ ವಿಸ್ತೀರ್ಣದ ವಿಮ್ಸ್ ಸಿಸಿಟಿವಿ ಅಳವಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ನಿರ್ಭಯಾ ಫಂಡ್ ಬಳಸಿ ಅಳವಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಗಿರೀಶ್ ಅವರು ಕೇಂದ್ರ ಸರಕಾರದ ಅನುದಾನ ಬಳಸಿಕೊಂಡು ಇದನ್ನು ಮಾಡಬಹುದು ಎಂದು ವಿಮ್ಸ್ ನಿರ್ದೇಶಕರ ಕೋರಿಕೆಗೆ ತಿಳಿಸಿದರು.ಸಚಿವರು ಕೂಡಲೇ ಪ್ರಸ್ತಾವನೆ ಸಿದ್ದಪಡಿಸಿ ಕಳುಹಿಸುವಂತೆ ಸೂಚಿಸಿದರು.

ಟ್ರಾಮಾಕೇರ್ ಮತ್ತು ವಿಮ್ಸ್ ಆವರಣದಲ್ಲಿ ಲಿಕ್ವೀಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ನಿರ್ಮಿಸಲಾಗಿದ್ದು,ನಮ್ಮಲ್ಲಿ ಯಾವುದೇ ರೀತಿಯ ಆಕ್ಸಿಜನ್ ಸಮಸ್ಯೆಯಾಗದಂತೆ ಜಿಲ್ಲಾಡಳಿತ ನೋಡಿಕೊಂಡಿದೆ ಎಂದು ವಿಮ್ಸ್ ನಿರ್ದೇಶಕ ಡಾ.ದೇವಾನಂದ್ ಹೇಳಿದರು.
ಇತ್ತೀಚಿಗೆ ಟ್ರಾಮಾಕೇರ್ ಸೆಂಟರ್ ಗೆ ಭೇಟಿ ನೀಡಿ ಕೇಂದ್ರ ತಂಡ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಅವರು ಪ್ರಸ್ತಾಪಿಸಿದರು.

*ವಿಮ್ಸ್ ರಿವೈರಿಂಗ್ ಮಾಡಿಸಿ: ವಿಮ್ಸ್‍ನಲ್ಲಿರುವ ಬಹುತೇಕ ಕಟ್ಟಡಗಳು ಹಳೆಯದಾಗಿದ್ದು, ಒಂದೇಡೆ ಕರೆಂಟ್ ಸ್ವಲ್ಪ ಸಮಸ್ಯೆಯಾದರೇ ಇಡೀ ವಿಮ್ಸ್ ಗೆ ಕರೆಂಟ್ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಅವಶ್ಯಕತೆ ಇರುವ ಕಡೆ ಮೊದಲಿಗೆ ರಿವೈರಿಂಗ್ ಮಾಡಿಸಿ;ನಂತರ ಉಳಿದ ಕಡೆ ಮಾಡಿಸುವುದು ಸೇರಿದಂತೆ ಇಡೀ ವಿಮ್ಸ್ ಗೆ ರಿವೈರಿಂಗ್ ಮಾಡುವಂತೆ ವಿಮ್ಸ್ ನಿರ್ದೇಶಕ ಡಾ.ದೇವಾನಂದ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಸೂಚಿಸಿದರು.

ವಿಮ್ಸ್ ಸುಧಾರಣೆ, ಅನುದಾನ ಹಾಗೂ ಇನ್ನೀತರ ಸರಕಾರ ಮಟ್ಟದಲ್ಲಿನ ಕೆಲಸಗಳನ್ನು ನಿರಂತರವಾಗಿ ಫಾಲೋಅಪ್ ಮಾಡಿ ಶೀಘ್ರ ಕೆಲಸಗಳನ್ನು ಮಾಡಿಕೊಂಡು ಬರುವ ನಿಟ್ಟಿನಲ್ಲಿ ಓರ್ವ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸಚಿವರು ಸೂಚಿಸಿದರು.

ರೋಗಿಗಳಿಗೆ ಹೊರಗಡೆ ಚೀಟಿ ಬರೆದುಕೊಡುವುದನ್ನು ಮೊದಲು ನಿಲ್ಲಿಸಿ ಎಂದು ಖಡಕ್ ಆಗಿ ಸೂಚನೆ ನೀಡಿದ ಸಚಿವ ಆನಂದಸಿಂಗ್ ಅವರು ವಿಮ್ಸ್ ನಲ್ಲಿ ಎಲ್ಲ ಸೌಲಭ್ಯಗಳಿವೆ ಎಂಬುದನ್ನು ನೆನಪಿನಲ್ಲಿರಲಿ ಎಂದರು.

ಸುವರ್ಣ ಆರೋಗ್ಯ ಟ್ರಸ್ಟ್ ನಡಿ ಚಿಕಿತ್ಸೆ,ಎಸ್ಸಿ/ಎಸ್ಟಿ ಜನರಿಗೆ ಉಚಿತ ಚಿಕಿತ್ಸೆ ಸೇರಿದಂತೆ ವಿವಿಧ ರೀತಿಯ ವಿಮ್ಸ್‍ಗೆ ಆದಾಯ ವೃದ್ಧಿಸುವ ಯೋಜನೆಗಳ ಸದುಪಯೋಗ ಕುರಿತು ಸಚಿವರು ಚರ್ಚಿಸಿದರು.

ವಿವಿಧ ವಿಷಯಗಳ ಕುರಿತು ಸುಧೀರ್ಘವಾಗಿ ಸಭೆಯಲ್ಲಿ ಚರ್ಚಿಸಲಾಯಿತು. ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ವಿಮ್ಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

Related posts

ಬಳ್ಳಾರಿಯಲ್ಲಿಂದು 432 ಜನರಿಗೆ ಸೋಂಕು – 4 ಬಲಿ

Siddu Naduvinmani

 ಶಾಸಕ ಸೋಮಶೇಖರರೆಡ್ಡಿ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಜಿಂದಾಲ್

Siddu Naduvinmani

ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸಾವು

Siddu Naduvinmani

Leave a Comment