Hasirukranti
leadingnews ಬಾಗಲಕೋಟೆ

143 ಜನ ಗುಣಮುಖ, 152 ಹೊಸ ಪ್ರಕರಣಗಳು ದೃಡ

ಬಾಗಲಕೋಟೆ: ಅಕ್ಟೋಬರ 17 : ಜಿಲ್ಲೆಯಲ್ಲಿ 143 ಜನ ಕೋವಿಡ್‍ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದ್ದು, ಹೊಸದಾಗಿ 152 ಕೊರೊನಾ ಪ್ರಕರಣಗಳು ಹಾಗೂ ಒಂದು ಮೃತ ಪ್ರಕರಣ ಶನಿವಾರ ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 12385 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 11391 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ದೃಡಪಟ್ಟವರಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 40, ಹುನಗುಂದ 60, ಮುಧೋಳ 24, ಜಮಖಂಡಿ 28 ಜನರಲ್ಲಿ ಸೋಂಕು ದೃಡಪಟ್ಟಿದ್ದು, ಅವರನ್ನು ನಿಗದಿತ ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾ ಕೋವಿಡ್ ಲ್ಯಾಬ್‍ನಲ್ಲಿ ಪರಿಕ್ಷಿಸಲಾಗುತ್ತಿದ್ದ 1288 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 135081 ಸ್ಯಾಂಪಲ್‍ಗಳನ್ನು ಪರೀಕ್ಷೀಸಲಾಗಿದ್ದು, ಈ ಪೈಕಿ 120897 ನೆಗಟಿವ್ ಪ್ರಕರಣ, 12385 ಪಾಜಿಟಿವ್ ಪ್ರಕರಣ ಹಾಗೂ 125 ಮೃತ ಪ್ರಕರಣ ವರದಿಯಾಗಿರುತ್ತದೆ. ಇನ್ನು 866 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 413 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. ಕಂಟೈನ್ಮೆಂಟ್ ಝೋನ್ 438 ಇರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Related posts

ಕೃಷ್ಣೆಗೆ 65 ಸಾವಿರ ಕ್ಯುಸೆಕ್ ನೀರು; ಎರಡು ಕೆಳಮಟ್ಟದ ಸೇತುವೆಗಳು ಜಲಾವೃತ

Siddu Naduvinmani

ಸಾಕು ಮಾಡು ಮಾಹಾರಾಯ ಮಳೆರಾಜ

Siddu Naduvinmani

ಗೋಕಾಕ್ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ಮಹಿಳೆ ಪತ್ತೆ

Hasiru Kranti

Leave a Comment