Hasirukranti
leadingnews ಬೆಳಗಾವಿ

ಅಬಕಾರಿ ದಾಳಿ: ಕಬ್ಬಿನ ಗದ್ದೆಯಲ್ಲಿ ಬೆಳೆದಿದ್ದ 131 ಕೆಜಿ ಗಾಂಜಾ, ಓರ್ವ ವಶ

ಅಥಣಿ, ಅ.17 : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೆಳೆದಿದ್ದ ಗಾಂಜಾ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶನಿವಾರ ಬೆಳಗ್ಗೆ ಅಬಕಾರಿ ಪೊಲೀಸರು ದಾಳಿ ನಡೆಸಿ 131 ಕೆಜಿ ತೂಕದ ಗಿಡಗಳ ಜೊತೆಗೆ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.

ಅಥಣಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಎಲ್, ಎಸ್, ಸಲಗರೆ, ಹಾಗೂ ಅಬಕಾರಿ ನಿರೀಕ್ಷಕ ಮಹೇಶ ದೊಳಪ್ಪನವರ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿ ದೇವಪ್ಪ ಈರಪ್ಪ ರುದ್ರಗೌಡರ ಎಂಬುವರನ್ನು ಬಂಧಿಸಿದ್ದಾರೆ. ಕಬ್ಬಿನ ಗದ್ದೆಯ ಮಧ್ಯದಲ್ಲಿ ಗಾಂಜಾ ಬೆಳೆಯಲಾಗಿತ್ತು. 131 ಕೆಜಿ ಗಾಂಜಾ ಜೊತೆಗೆ ಆರೋಪಿಯನ್ನು ಬಂಧಿಸುವಲ್ಲಿ ಅಥಣಿ ಅಬಕಾರಿ ಇಲಾಖೆ ಯಶಸ್ವಿಯಾಗಿದ್ದು ಕೆ, ಅರುಣ್ ಕುಮಾರ್ ಅಬಕಾರಿ ಉಪ ಆಯುಕ್ತರು ಚಿಕ್ಕೋಡಿ ಇವರು ಮಾಹಿತಿ ನೀಡಿದ್ದಾರೆ.

ಕನ್ನಡ ಚಿತ್ರ ರಂಗದ ಘಟಾನುಘಟಿಗಳ ಹೆಸರು ಡ್ರಗ್ಸ ಮಾಫಿಯಾದಲ್ಲಿ ಕೇಳಿ ಬರುತ್ತಿರುವ ಬೆನ್ನಲ್ಲೆ ಬಹುತೇಕ ಉತ್ತರ ಕರ್ನಾಟಕದಲ್ಲಿ ಗಾಂಜಾ ರೇಡ್ ನಡೆಯುತ್ತಿದ್ದು ಪೊಲೀಸ ಇಲಾಖೆ ಹಾಗೂ ಅಬಕಾರಿ ಇಲಾಖೆಯ ಜಂಟಿ ಕಾರ್ಯಾಚರಣೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಬೇರು ಬಿಟ್ಟ ಅಕ್ರಮ ಗಾಂಜಾ ಬೆಳೆ ಹಾಗೂ ಮಾರಾಟ ಜಾಲಗಳನ್ನು ಮಟ್ಟ ಹಾಕುವಲ್ಲಿ ಯಶಸ್ವಿ ಆಗುತ್ತಿದ್ದಾರೆ.ಇದರ ನಡುವೆ

ಅಥಣಿ ತಾಲೂಕಿನ ಬಹುತೇಕ ಕಡೆ ಅಕ್ರಮ ಗಾಂಜಾ ಬಗ್ಗೆ ಅಬಕಾರಿ ಇಲಾಖೆಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅಧಿಕೃತ ಮಾಹಿತಿಯೊಂದಿಗೆ ದಾಳಿ ನಡೆಸಲಾಗಿದ್ದು ಸಾರ್ವಜನಿಕರು ಸಹಕಾರ ನೀಡುವ ಮೂಲಕ ಅಕ್ರಮ ಮದ್ಯಮಾರಾಟ ಹಾಗೂ ಗಾಂಜಾ, ಅಫೀಮ್,ಡ್ರಗ್ಸ ನಂತಹ ಮಾದಕ ಪದಾರ್ಥಗಳ ಮಾರಾಟ ಜಾಲವನ್ನು ಮಟ್ಟ ಹಾಕಲು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಗಾಂಜಾ ಮಾರಾಟ ಜಾಲ ವೇಗವಾಗಿ ಹಬ್ಬಿಕೊಳ್ಳುತ್ತಿರುವತ್ತಿರುವ ಹಿನ್ನೆಲೆಯಲ್ಲಿ ದಿಡೀರ್ ಕಾರ್ಯಾಚರಣೆಗೆ ಇಳಿದ ಅಬಕಾರಿ ಇಲಾಖೆ ಗಾಂಜಾ ಬೆಳೆ ಬೆಳೆದವರನ್ನು ಹೆಡೆಮುರಿಗೆ ಕಟ್ಟುತ್ತಿದ್ದು ಇಂದು 131 ಕೆಜಿ ಹಸಿ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.

ಬೆಳಗಾವಿಯ ಅಬಕಾರಿ ಇಲಾಖೆಯ ಜಂಟಿ ಆಯುಕ್ತ ವೈ ಮಂಜುನಾಥ ಇವರ ಮಾರ್ಗದರ್ಶನದಲ್ಲಿ ಹಾಗೂ ಎಲ್ ಎಸ್ ಸಲಗರೆ ಅಬಕಾರಿ ಉಪ ಅಧೀಕ್ಷಕ ಚಿಕ್ಕೋಡಿ ಮತ್ತು ಅಥಣಿ ಉಪವಿಭಾಗದ ಅಬಕಾರಿ ನಿರೀಕ್ಷಕ ಮಹೇಶ್ ಧೂಳಪ್ಪನ್ನವರ ಮತ್ತು ಬಿ ಎಸ್ ಮುಡಸಿ ಅಬಕಾರಿ ಉಪನಿರೀಕ್ಷಕರು ಅಥಣಿ ವಲಯ,ಎಸ್ ಬಿ ಅಸ್ಕಿ ಅಬಕಾರಿ ಉಪನಿರೀಕ್ಷಕರು ಅಥಣಿ ವಲಯ ಸಿಬ್ಬಂದಿಗಳಾದ ಎನ್ ಸಿ ದಾನಪ್ಪನವರ, ಮೋಹನ ಕಾಂಬಳೆ, ಎಸ್ ಐ ಭಂಢಗರ್, ಎಸ್ ಎಸ್ ನಾಯಕ,ಎಸ್ ಬಿ ಮಂಗಸೂಳಿ,ಆರ್ ಡಿ ದಿಗ್ಗೆವಾಡಿ,ಆರ್ ಎನ್ ಬಡಿಗೇರ, ವಿಜಯ ಉಪ್ಪಾರ,ಬಿ ಎಮ್ ಸವದಿ,ಡಿ ಎ ಮುಲ್ಲಾ ಸಿದ್ದನಿಂಗ್ ಮಾದರ ಇವರೊಂದಿಗೆ ದಾಳಿ ನಡೆಸಲಾಗಿದೆ ಎಂದು ಹೇಳಿದರು.

ಈ ಹಿಂದೆ ಪೊಲೀಸ್ ಇಲಾಖೆಯೂ ಕೂಡ ನಾಲ್ಕೈದು ಕಡೆ ದಾಳಿ ಮಾಡಿ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದು ಇರುತ್ತದೆ,

Related posts

ರಾಜ್ಯದಲ್ಲಿಂದು ತ್ರಿಬಲ್ ಸೆಂಚೂರಿ ಬಾರಿಸಿದ ಕೊರೋನಾ ; ಮತ್ತೆ ಮೂವರು ಸೋಂಕಿತರು ಸಾವು

Siddu Naduvinmani

ಹಸಿರು ವಲಯಕ್ಕೆ ಬಿಗ್ ರಿಲೀಫ್ : ಆರ್ಥಿಕ ಪುನಶ್ಚೇತನಕ್ಕೆ ಅಸ್ತು

Hasiru Kranti

ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಪ್ರಗತಿ ಪರಿಶೀಲನಾ ಸಭೆ; ನಿಗದಿತ ಗುರಿ ಸಾಧಿಸದಿದ್ದರೆ ಕ್ರಮ-ಜಿಲ್ಲಾಧಿಕಾರಿ ಹಿರೇಮಠ ಎಚ್ಚರಿಕೆ

Siddu Naduvinmani

Leave a Comment