Hasirukranti
leadingnews ರಾಜ್ಯ ರಾಷ್ಟ್ರೀಯ

ಕಡು ಬಡವರಿಗೆ ಸರಕಾರದಿಂದ 10 ರೂಪಾಯಿಗೆ ಸೀರೆ, ಪಂಚೆ!

ರಾಂಚಿ, 17: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ವರ್ಷಕ್ಕೆ ಎರಡು ಬಾರಿ 10 ರೂಪಾಯಿ ದರದಲ್ಲಿ ಪಂಚೆ ಮತ್ತು ಸೀರೆಗಳನ್ನು ವಿತರಿಸಲು ಜಾರ್ಖಂಡ್ ಸರಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯ ಪ್ರಯೋಜನ ಪಡೆಯುತ್ತಿರುವ ಕುಟುಂಬಗಳು ಮತ್ತು ಅಂತ್ಯೋದಯ ಅನ್ನ ಯೋಜನೆಯ ಅಡಿಯಲ್ಲಿ ಬರುವ ಕುಟುಂಬಗಳಿಗೆ ಆರು ತಿಂಗಳಿಗೊಮ್ಮೆ ಈ ಬಟ್ಟೆಗಳನ್ನು ವಿತರಿಸಲಾಗುವುದು ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ಪ್ರತಿ ಪಂಚೆಗೆ 10 ರೂಪಾಯಿ ಹಾಗೂ ಸೀರೆಗೆ 10 ರೂಪಾಯಿಯಂತೆ ಬಟ್ಟೆಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಸರಕಾರ ಹೇಳಿದೆ. ಹಾಲಿ ಆರ್ಥಿಕ ವರ್ಷದಲ್ಲಿ ಒಮ್ಮೆ ಬಟ್ಟೆಗಳನ್ನು ವಿತರಿಸಲಾಗುವುದು. ಮುಂದಿನ ವರ್ಷದಿಂದ ಎರಡು ಬಾರಿ ವಿತರಿಸಲಾಗುತ್ತದೆ ಎಂದು ಸಿಎಂ ಕಚೇರಿ ಹೇಳಿದೆ. ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪಂಚೆ ಮತ್ತು ಸೀರೆಗಳನ್ನು ನೀಡುವ ಭರವಸೆಯನ್ನು ಜಾರ್ಖಂಡ್ ಮುಕ್ತಿ ಮೋರ್ಚಾ ನೀಡಿತ್ತು. ಅದರಂತೆ ಇದೀಗ ಪಂಚೆ ಮತ್ತು ಸೀರೆ ವಿತರಣೆಗೆ ಮುಂದಾಗಿದೆ.

Related posts

ವಿಜಯಪುರ ಜಿಲ್ಲೆಯಲ್ಲಿ ಕೋವಿಡ್‍ನಿಂದ ಇಂದು ಒರ್ವ ಸಾವು

Siddu Naduvinmani

ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಪ್ರಸ್ತಾವಣೆಗಳ ಅನುಸರಣಾ ಕ್ರಮದ ಬಗ್ಗೆ ಚರ್ಚೆ ನಡೆಸಿದ ಸಚಿವ ಜೋಶಿ

Siddu Naduvinmani

ಲಾಕ್ ಡೌನ್ ಸಂಕಷ್ಟದಲ್ಲಿರುವ ಶ್ರಮಿಕ ವರ್ಗಕ್ಕೆ 1610ಕೋಟಿ ವಿಶೇಷ ಪ್ಯಾಕೇಜ ಘೋಷಿಸಿದ ಬಿಎಸ್‍ವೈ

Hasiru Kranti

Leave a Comment