Hasirukranti
leadingnews ಬೆಂಗಳೂರು ನಗರ ರಾಜಕೀಯ ರಾಜ್ಯ

ಗ್ರಾ.ಪಂ ಚುನಾವಣೆ ನಡೆಸುವ ಬಗ್ಗೆ ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ

 

ಬೆಂಗಳೂರು, ಅ.16: ಗ್ರಾಮ ಪಂಚಾಯತ್  ಚುನಾವಣೆ ನಡೆಸುವ ಸಂಬಂಧ ಇಂದು ಅಂತಿಮ‌‌ ತೀರ್ಮಾನ ಸಾಧ್ಯತೆ ಹೊರ ಬೀಳುವ ಸಾಧ್ಯತೆ ಇದೆ. ಈ ಸಂಬಂಧ ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ.

ಈಗಾಗಲೇ ಚುನಾವಣೆ ಮಾಡಲೇಬೇಕಾದ ಅನಿವಾರ್ಯತೆ ಇದೆ ಅಂತ ಹೈ ಕೋರ್ಟ್ ಗೆ ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಕೋರೋನಾ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವುದು ಕಷ್ಟವಾದ್ದರಿಂದ, ಸದ್ಯ ಚುನಾವಣೆ ಬೇಡ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ.  ಸರ್ಕಾರದ ವಾದಕ್ಕೆ ಹೈಕೋರ್ಟ್ ಇವತ್ತು ಸಮ್ಮತಿ ನೀಡಿಲಿದೆಯಾ ಎನ್ನುವ ಕುತೂಹಲ‌ ಮನೆ ಮಾಡಿದೆ.

ರಾಜ್ಯದ 6,021 ಗ್ರಾಮ ಪಂಚಾಯಿತಿಗಳ 94 ಸಾವಿರ ಸ್ಥಾನಗಳಿಗೆ ಚುನಾವಣೆಗೆ ನಡೆಯಬೇಕಿದೆ. ಚುನಾವಣೆಗೆ ಸೂಕ್ತ ವ್ಯವಸ್ಥೆ ಮಾಡಲು ಕಷ್ಟ ಎಂಬ ಸಮಜಾಯಿಷಿಯನ್ನ ರಾಜ್ಯ ಸರ್ಕಾರ ನೀಡಿದೆ. ಈ ಮಧ್ಯೆ ಚುನಾವಣಾ ಆಯೋಗದಿಂದ ಸಂಭಾವ್ಯ ವೇಳಾಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಗ್ರಾಮ ಪಂಚಾಯತಿ ಚುನಾವಣೆ ನವೆಂಬರ್ 12 ರ ನಂತರ ವೇಳಾಪಟ್ಟಿ ಪ್ರಕಟಿಸಲು ಸಿದ್ಧ ಇರುವುದಾಗಿ ಆಯೋಗ ಹೇಳಿದೆ. ಆಯೋಗ ಮತ್ತು ಸರ್ಕಾರದ ಅಭಿಪ್ರಾಯ ಕುರಿತು ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಹೈಕೋರ್ಟ್ ಸೂಚನೆ ಬಳಿಕ ಮುಂದಿನ ತಿರ್ಮಾನ ಕೈಗೊಳ್ಳುವುದಾಗಿ ರಾಜ್ಯ ಚುನಾವಣಾ ಆಯೋಗ ಹೇಳಿದೆ.

Related posts

ಪ್ರವಾಹ ನಿರ್ವಹಣೆ-ಪೂರ್ವಸಿದ್ಧತೆಗೆ ಸೂಚನೆ: ರಮೇಶ್ ಜಾರಕಿಹೊಳಿ

Siddu Naduvinmani

ಬಾಬ್ರಿ ಮಸೀದಿ ಧ್ವಂಸ ಪ್ರಕರಣ; ಎಲ್ಲಾ ಆರೋಪಿಗಳು ನಿರ್ದೋಷಿ

Siddu Naduvinmani

ಬೆಳಗಾವಿಯ 64 ಜನ ಸೇರಿ ರಾಜ್ಯದಲ್ಲಿ 2496 ಜನರಿಗೆ ಕೊರೊನಾ ಸೋಂಕು

Hasiru Kranti

Leave a Comment