Hasirukranti
leadingnews ರಾಜ್ಯ ರಾಷ್ಟ್ರೀಯ

ಬಿಹಾರದ ನಂತರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಿದ ಪಂಜಾಬ್ ಸರ್ಕಾರ

ಪಂಜಾಬ್, ಅ.15: ಮಹಿಳೆಯರನ್ನು ಮತ್ತಷ್ಟು ಸಬಲೀಕರಣಗೊಳಿಸುವ ಸಲುವಾಗಿ ಪಣತೊಟ್ಟಿರುವ ಪಂಜಾಬ್ ಸರ್ಕಾರ ನಾಗರಿಕ ಸೇವೆಗಳಲ್ಲಿ ಮಹಿಳೆಯರಿಗೆ ಕೊನೆಗೂ ಶೇ.33 ರಷ್ಟು ಮೀಸಲಾತಿಗೆ ಅನುಮೋದನೆ ನೀಡಿದೆ. ಇದು ಪಂಜಾಬ್ ರಾಜ್ಯ ನಾಗರಿಕ ಸೇವೆಗಳ ನೇರನೇಮಕಾತಿಗೆ ಅನ್ವಯಿಸುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್‍ಸಿಂಗ್ ಇಂದು ಗುರುವಾರ ತಿಳಿಸಿದ್ದಾರೆ.

ಬಿಹಾರದ ನಂತರ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ಎರಡನೇ ರಾಜ್ಯ ಪಂಜಾಬ್. ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅಧ್ಯಕ್ಷತೆಯ ರಾಜ್ಯ ಸಚಿವ ಸಂಪುಟ ಸಭೆಯು, ಪಂಜಾಬ್ ನಾಗರೀಕ ಸೇವೆ ನಿಯಮಗಳು-2020ಕ್ಕೆ ಅನುಮೋದನೆ ನೀಡಿತು. ಇದು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ನಿಗಮಗಳಿಗೆ ಸಂಬಂಧಿಸಿದ ಎ, ಬಿ, ಸಿ ಮತ್ತು ಡಿ ಗ್ರೂಪ್‍ಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲಿದೆ.

ಇದರ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟ್ವೀಟ್ ಮಾಡಿದ್ದು, “ಇಂದು ಪಂಜಾಬ್ ಮಹಿಳೆಯರಿಗೆ ಒಂದು ಐತಿಹಾಸಿಕ ದಿನವಾಗಿದೆ. ಏಕೆಂದರೆ ನಮ್ಮ ಸಚಿವ ಸಂಪುಟ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನಿಡುವ ಪ್ರಸ್ತಾವವನ್ನು ಅನುಮೋದಿಸಿದೆ. ನಮ್ಮ ಹೆಣ್ಣುಮಕ್ಕಳನ್ನು ಮತ್ತಷ್ಟು ಸಬಲೀಕರಣಗೊಳಿಸಲು ಮತ್ತು ಹೆಚ್ಚು ಸಮಾನತೆಯ ಸಮಾಜವನ್ನು ರಚಿಸಲು ಇದು ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಬರೆದುಕೊಂಡಿದ್ದಾರೆ.

ನ್ಯಾಯಾಲಯದ ಪ್ರಕರಣಗಳು ಮತ್ತು ಕಾನೂನು ವಿಷಯಗಳನ್ನು ಸಮಯೋಚಿತವಾಗಿ ಪರಿಣಾಮಕಾರಿಯಾಗಿ ಮುಂದುವರಿಸಲು, ಗುಮಾಸ್ತ (ಕಾನೂನು) ಕೇಡರ್ ರಚನೆಗಾಗಿ 1976 ರ ಪಂಜಾಬ್ ಸಿವಿಲ್ ಸೆಕ್ರೆಟರಿಯಟ್ ನಿಯಮಗಳಿಗೆ ತಿದ್ದುಪಡಿ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿತು. ಸಾಮಾನ್ಯ ಗುಮಾಸ್ತ ಕೇಡರ್‍ನಿಂದ 100 ಹುದ್ದೆಗಳನ್ನು ತೆಗೆದುಕೊಂಡು ಆರ್ಥಿಕ ಪರಿಣಾಮಗಳಿಲ್ಲ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಇದನ್ನು ಮಾಡಲಾಗುತ್ತದೆ.

Related posts

ಬೆಳಗಾವಿ ಜಿಲ್ಲೆಯಲ್ಲಿಂದು 8 ಜನರಿಗೆ ಕೊರೋನಾ ಪತ್ತೆ, ಮತ್ತೋರ್ವ ಸಾವು

Siddu Naduvinmani

ಮುಂಬರುವ ಕಬ್ಬು ನುರಿಸುವ ಹಂಗಾಮಿನಲ್ಲಿ ರೈತರಿಗೆ ಸಕಾಲಕ್ಕೆ ಸ್ಪಂದಿಸಿ- ಜಿಲ್ಲಾಧಿಕಾರಿ ಪಿ.ಸುನೀಲಕುಮಾರ

Siddu Naduvinmani

ಕೊರೋನಾವೈರಸ್: ಗ್ರ್ಯಾಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ 21 ಜನರಿಗೆ ಸೋಂಕು ದೃಢ

admins

Leave a Comment