Hasirukranti
leadingnews ರಾಜ್ಯ ರಾಷ್ಟ್ರೀಯ

ಭಾರೀ ಮಳೆ : ಗೋಡೆ ಕುಸಿದ ಪರಿಣಾಮ 9 ಮಂದಿ ದಾರುಣ ಸಾವು.!

 

ಹೈದರಾಬಾದ್, ಅ.14: ಹೈದರಾಬಾದ್ ನ ಹಳೆಬಸ್ತಿ ಪ್ರದೇಶದ 2 ಮನೆಗಳ ಮೇಲೆ ಭಾರೀ ಮಳೆಯಿಂದಾಗಿ ಬಂಡೆ ಕುಸಿದ ಬಿದ್ದ ಪರಿಣಾಮ ಮನೆಯಲ್ಲಿದ್ದ ಮೂವರು ಮಕ್ಕಳು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.

ತೆಲಂಗಾಣ ಮತ್ತು ನೆರೆಯ ಆಂಧ್ರಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಕಳೆದ 48 ಗಂಟೆಗಳಲ್ಲಿ ತೆಲಂಗಾಣದಲ್ಲಿ ಹನ್ನೆರಡು ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿ ಪ್ರವಾಹ ಉಂಟಾಗಿದೆ ಮತ್ತು ಕೆಲವು ತಗ್ಗು ಪ್ರದೇಶಗಳು ಮುಳುಗಿವೆ.

ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸುಮಾರು 10 ಮನೆಗಳ ಮೇಲೆ ಕಾಂಪೌಂಡ್ ಗೋಡೆ ಬಿದ್ದಿದೆ.

ಈ ಕುರಿತು ಟ್ವೀಟ್ ಮಾಡಿದ ಸಂಸದ ಅಸಾದುದ್ದೀನ್ ಒವೈಸಿ, ನಾನು ಬಂಡಲಗುಡದ ಮೊಹಮ್ಮದಿಯಾ ಹಿಲ್ ನಲ್ಲಿ ಸ್ಥಳ ಪರಿಶೀಲನೆಯಲ್ಲಿದ್ದೆ. ಪಕ್ಕದ ಜಮೀನಿನ ಗೋಡೆ ಕುಸಿದು ಬಿದ್ದು 9 ಜನರು ಸಾವನ್ನಪ್ಪಿದರು ಮತ್ತು 2 ಮಂದಿ ಗಾಯಗೊಂಡರು ಎಂದಿದ್ದಾರೆ.

ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಹೈದರಾಬಾದ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Related posts

ದೇಶದಲ್ಲಿ ಈವರೆಗೆ 39 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

Siddu Naduvinmani

ಕರ್ನಾಟಕದಲ್ಲಿಂದು ಒಂದೇ ದಿನ 149 ಕೊರೋನಾ ಪಾಸಿಟಿವ್ : ಮಂಡ್ಯ, ದಾವಣಗೆರೆಯಲ್ಲಿ ಅತಿ ಹೆಚ್ಚು ಸೋಂಕು ದೃಢ

Siddu Naduvinmani

ಅಕ್ರಮವಾಗಿ ಬೆಳೆದ 75 ಕೆಜಿ ಗಾಂಜಾ ಜಪ್ತಿ : ಇಬ್ಬರ ಬಂಧನ

Siddu Naduvinmani

Leave a Comment