Hasirukranti
leadingnews ಬೆಳಗಾವಿ

ಬಾವಿಗೆ ಬಿದ್ದಿದ್ದ ಜಾನುವಾರು ರಕ್ಷಣೆ ಮಾಡಿದ ಅಗ್ನಿ ಶಾಮಕ ಸಿಬ್ಬಂದಿ

 ಅಥಣಿ ; ಬಾವಿಗೆ ಬಿದ್ದ ಎತ್ತು ಒಂದನ್ನು ಅಥಣಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುರಕ್ಷಿತವಾಗಿ ರಕ್ಷಿಸಿ ಉಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ನಡೆದಿದೆ.
ಕಾಲು ಜಾರಿಗೆ ಬಾವಿಗೆ ಬಿದ್ದಿದ್ದ ಎತ್ತನ್ನು ಸುರಕ್ಷಿತವಾಗಿ ಮೇಲೆತ್ತಲು ಎರಡು ಗಂಟೆಗೂ ಅಧಿಕ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಥಣಿ ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯಕ್ಕೆ ರೈತರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಐಗಳಿ ಗ್ರಾಮದ ಗುರಪ್ಪ ಮಲ್ಲಪ್ಪ ಅಥಣಿ ಇವರ ಜಮೀನಿನಲ್ಲಿ ಸಂಜೆಯ ವೇಳೆ ನೀರು ತುಂಬಿದ್ದ 30 ಅಡಿ ಅಗಲದ 35 ಆಳದ ಬಾವಿಗೆ ಎತ್ತು ಕಾಲು ಜಾರಿ ಬಿದ್ದಿದ್ದು ಇದನ್ನು ಗಮನಿಸಿದ ಗುರಪ್ಪ ಮಲ್ಲಪ್ಪ ಅಥಣಿ ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದರು. ರಕ್ಷಣಾ ಕಾರ್ಯಕ್ಕೆ ಮುಂದಾದ ಠಾಣಾ ಸಿಬ್ಬಂದಿ ಅಥಣಿ ಆಗ್ನಿ ಶಾಮಕದಳದೊಂದಿಗೆ  ಎತ್ತನ್ನು ರಕ್ಷಿಸಿದ್ದಾರೆ.
ಈ ವೇಳೆ ಅಗ್ನಿಶಾಮಕ ಠಾಣಾಧಿಕಾರಿ ಆರ್ ಕೆ ಸಂಬೋಜಿ, ಸಿಬ್ಬಂದಿಗಳಾದ ಅನೀಲ ಬಡಚಿ, ಮಲ್ಲಿಕಾರ್ಜುನ ಕುಂಬಾರ, ಶಿವಾನಂದ ಪೂಜಾರಿ, ಪ್ರಕಾಶ ಅಲಿಶೆಟ್ಟಿ, ಸೇರಿದಂತೆ ಮುಂತಾದವರು ರಕ್ಷಣಾ ಕಾರ್ಯಚರಣೆಯಲ್ಲಿ ಇದ್ದರು

Related posts

Video – ಕಾಂಗ್ರೆಸ್ ಸದಸ್ಯರು ಬಿಜೆಪಿಗೆ; ಸಾಹುಕಾರ್ ಮಡಿಲಿಗೆ ಗೋಕಾಕ್ ನಗರಸಭೆ

Siddu Naduvinmani

ರಾಜ್ಯಮಟ್ಟದ 9 ಇಲಾಖೆಗಳನ್ನು ಬೆಂಗಳೂರಿನಲ್ಲಿಯೇ ಉಳಿಸಿಕೊಂಡು ನಂಬರ್ 75 ರ ಫೈನ್ ನ್ನು ಮುಚ್ಚಿ ಹಾಕುವ ಹುನ್ನಾರ : ಸೊಬರದಮಠ ಆರೋಪ

Siddu Naduvinmani

ಕಂಟಕಪ್ರಾಯವಾಗಿ ಕಾಡುತ್ತಿರುವ ವಾಯುಮಾಲಿನ್ಯ ತಡೆಯಲು ಹೊಸ ಕಾನೂನು

Siddu Naduvinmani

Leave a Comment