Hasirukranti
leadingnews ರಾಜ್ಯ ರಾಷ್ಟ್ರೀಯ

ರೈಲು ಹೊರಡುವ 5 ನಿಮಿಷದ ಮೊದಲು ಟಿಕೆಟ್ ಕಾಯ್ದಿರಿಸಲು, ರದ್ದುಗೊಳಿಸುವ ಅವಕಾಶ ನೀಡಿದ ರೈಲ್ವೆ ಇಲಾಖೆ

 

ನವದೆಹಲಿ, ಅ.10: ಕೋವಿಡ್ 19 ಸೋಂಕಿನಿಂದಾಗಿ ಕಳೆದ ಕೆಲವು ತಿಂಗಳಿನಿಂದ ನಿಲ್ಲಿಸಲಾಗಿದ್ದ ರೈಲು ಸಂಚಾರ ಆರಂಭಿಸಿದ್ದು, ಇನ್ಮುಂದೆ ರೈಲು ನಿಲ್ದಾಣದಿಂದ ಹೊರಡುವ ಕೇವಲ ಇನ್ಮುಂದೆ ರೈಲು ನಿಲ್ದಾಣದಿಂದ ಹೊರಡುವ ಕೇವಲ ಐದು ನಿಮಿಷದ ಮೊದಲು ಟಿಕೆಟ್ ಕಾಯ್ದಿರಿಸಲು ಮತ್ತು ರದ್ದುಗೊಳಿಸುವ ಅವಕಾಶ ನೀಡಿದೆ.

ಈ ನಿಟ್ಟಿನಲ್ಲಿ ರೈಲು ಹೊರಡುವ 30 ನಿಮಿಷದ ಮೊದಲು 2ನೇ ರಿಸರ್ವೇಶನ್ ಪಟ್ಟಿಯನ್ನು ಸಿದ್ದಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ. ಈ ಹೊಸ ಕಾನೂನು ಕೋವಿಡ್ ಸಂದರ್ಭದಲ್ಲಿ ಸಂಚರಿಸುವ ಎಲ್ಲಾ ವಿಶೇಷ ರೈಲುಗಳಿಗೆ ಅನ್ವಯಿಸಲಿದೆಯಂತೆ. ಅಲ್ಲದೇ ಇಂದಿನಿಂದಲೇ (ಅಕ್ಟೋಬರ್ 10,2020) ಈ ಕಾನೂನು ಜಾರಿಯಾಗಲಿದೆ ಎಂದು ತಿಳಿಸಿದೆ.

ಭಾರತೀಯ ರೈಲ್ವೆ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ರೈಲ್ವೆ ವಲಯದ ಮನವಿ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರೈಲು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲು ಹೊರಡುವ ನಿಗದಿತ ಸಮಯಕ್ಕಿಂತ 30 ನಿಮಿಷಗಳ ಮೊದಲು ಎರಡನೇ ರಿಸರ್ವೇಶನ್ ಪಟ್ಟಿ ಸಿದ್ದಪಡಿಸಲು ನಿರ್ಧಾರ ತೆಗೆದುಕೊಂಡಿದ್ದು, ಇದರಿಂದಾಗಿ ರೈಲು ಹೊರಡುವ 5 ನಿಮಿಷದ ಮೊದಲು ಟಿಕೆಟ್ ಬುಕ್ಕಿಂಗ್ ಅಥವಾ ರದ್ದು ಮಾಡಬಹುದಾಗಿದೆ ಎಂದು ವಿವರಿಸಿದೆ.

ರೈಲು ಹೊರಡುವ ಐದು ನಿಮಿಷದ ಮೊದಲು ಸೀಟು ಲಭ್ಯವಿದ್ದಲ್ಲಿ ರೈಲ್ವೆ ಕೌಂಟರ್ ಗಳಲ್ಲಿ ಅಥವಾ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಅಥವಾ ರದ್ದು ಮಾಡಲು ಅವಕಾಶ ಇದೆ ಎಂದು ಹೇಳಿದೆ.

Related posts

ಬೆಳಗಾವಿ ಜಿಲ್ಲೆಯಲ್ಲಿಂದು 8 ಜನರಿಗೆ ಕೊರೋನಾ ಪತ್ತೆ, ಮತ್ತೋರ್ವ ಸಾವು

Siddu Naduvinmani

ರಾಜ್ಯದಲ್ಲಿ ಇಂದು ಮುಂಜಾನೆ ವರದಿಯಲ್ಲಿಯೇ 116 ಜನರಲ್ಲಿ ಸೋಂಕು ಪತ್ತೆ

Hasiru Kranti

ಬೆಳಗಾವಿಯಲ್ಲಿ ನಾಲ್ಕು ಸರ್ಕಾರಿ ಕಚೇರಿಗಳ ಮೇಲೆ ಎಸಿಬಿ ದಾಳಿ

Siddu Naduvinmani

Leave a Comment