Hasirukranti
leadingnews ರಾಷ್ಟ್ರೀಯ

ಉಗ್ರರು – ಸೇನೆ ನಡುವೆ ಗುಂಡಿನ ದಾಳಿ : ಇಬ್ಬರು ಉಗ್ರರ ಬಲಿ

 

ಶ್ರೀನಗರ, 10: ಜಮ್ಮು-ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ಪಡೆ ಎನ್ ಕೌಂಟರ್ ಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ.

ಜಮ್ಮು-ಕಾಶ್ಮೀರದ ಚಿನ್ಗಂ ಬಳಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆ ಭಾರತೀಯ ಸೇನೆಯ 01 ಆರ್‍ಆರ್ ಹಾಗೂ ಜಮ್ಮು ಕಾಶ್ಮಿರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಉಗ್ರರ ಅಡುಗುದಾಣವನ್ನು ಸುತ್ತುವರಿದು ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರು ಹಾಗೂ ಸೇನೆ ನಡುವೆ ಗುಂಡಿನ ಚಕಮಕಿ ನಡೆಯಿತು.

ಈ ವೇಳೆ ಭದ್ರತಾ ಪಡೆ ನಡೆಸಿದ ಎನೌಕೌಂಟರ್ ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಆದರೆ ಉಗ್ರರ ಗುರುತು ಪತ್ತೆಯಾಗಿಲ್ಲ, ಕಾರ್ಯಾಚಾರಣೆ ಇನ್ನೂ ಮುಂದುವರೆದಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

Related posts

ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

Siddu Naduvinmani

ನಮಗೆ ಸೇರಿದ ಒಂದೇ ಒಂದು ಇಂಚು ಭೂಮಿಯನ್ನು ನಾವು ಕಳೆದುಕೊಳ್ಳುವುದಿಲ್ಲ – ಚೀನಾ ಹೇಳಿಕೆ!

Siddu Naduvinmani

ಬೆಳಗಾವಿ ಜಿಲ್ಲೆಯಲ್ಲಿ ಇಂದು 316 ಜನರಿಗೆ ಕೊರೊನಾ ಸೋಂಕು : 7 ಬಲಿ

Hasiru Kranti

Leave a Comment