Hasirukranti
leadingnews ರಾಷ್ಟ್ರೀಯ ವಾಣಿಜ್ಯ

ದೇಶದ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ; 2020-21ನೇ ಸಾಲಿನಲ್ಲಿ ಜಿಡಿಪಿ ಶೇ.9.5ರಷ್ಟಾಗಲಿದೆ – ಆರ್ ಬಿಐ

 

ನವದೆಹಲಿ, ಅ.9: ಮಹಾಮಾರಿ ಕೊರೋನಾ ಹಾಗೂ ಲಾಕ್ ಡೌನ್ ಪರಿಣಾಮದಿಂದ ದೇಶದ ಆರ್ಥಿಕ ಮೇಲೆ ಹಿನ್ನೆಲೆಯಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಮುಂದುವರಿಸಲು ಆರ್ ಬಿಐ ನಿರ್ಧರಿಸಿದೆ ಎಂದು ಗವರ್ನರ್ (ಆರ್ ಬಿಐ) ಶಕ್ತಿಕಾಂತ್ ದಾಸ್ ಶುಕ್ರವಾರ (ಅ.9) ಘೋಷಿಸಿದ್ದಾರೆ.

ಪ್ರಸ್ತುತ ಶೇ.4ರಷ್ಟು ರೆಪೋ ದರ ಇದ್ದು, ರಿವರ್ಸ್ ರೆಪೋ ದರದಲ್ಲಿಯೂ ಯಾವುದೇ ಬದಲಾವಣೆ(ಶೇ.3.35) ಆಗಿಲ್ಲ. ಒಂದು ವೇಳೆ ಆರ್ ಬಿಐ ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಪಾಡಿಕೊಂಡಲ್ಲಿ ಚಿಲ್ಲರೆ ಹಣದುಬ್ಬರ ಮತ್ತೆ ಶೇ.4ರಿಂದ 6ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಹಲವು ತಜ್ಞರು ಈಗಾಗಲೇ ವಿಶ್ಲೇಷಿಸಿದ್ದಾರೆ.

ಶೇ.4ಷ್ಟಿರುವ ರೆಪೋ ದರವನ್ನು ಇಳಿಕೆ ಮಾಡದಿರಲು ಆರ್ ಬಿಐನ ಹಣಕಾಸು ನೀತಿ ಸಮಿತಿ ಅವಿರೋಧವಾಗಿ ಒಪ್ಪಿಗೆ ಸೂಚಿಸಿದೆ. ಪ್ರಸಕ್ತ ಆರ್ಥಿಕ ವರ್ಷ ಮತ್ತು ಮುಂದಿನ ವರ್ಷವೂ ಕೂಡಾ ಅಗತ್ಯವಿರುವ ಹಣಕಾಸು ನೆರವನ್ನು ಮುಂದುವರಿಸಲು ಎಂಪಿಸಿ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಕೋವಿಡ್ 19 ಸೋಂಕಿನ ಸಂಕಷ್ಟದ ನಡುವೆಯೂ ದೇಶದ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಅಲ್ಲದೇ 2020-21 ಸಾಲಿನ ಜಿಡಿಪಿ ಶೇ.9.5ರಷ್ಟಿರಲಿದೆ ಎಂದು ಆರ್ ಬಿಐ ಭವಿಷ್ಯ ನುಡಿದಿದೆ.

Related posts

ಬಾಗಲಕೋಟೆ: 129 ಜನ ಗುಣಮುಖ, 188 ಹೊಸ ಪ್ರಕರಣಗಳು ದೃಡ

Siddu Naduvinmani

ಎಸಿಬಿ ದಾಳಿ : ನಿಷೇಧಿತ ನೋಟು ಪತ್ತೆ; ಭಾರೀ ಮೊತ್ತದ ನಗದು, ಚಿನ್ನ ವಶಕ್ಕೆ

Siddu Naduvinmani

ಬೆಳಗಾವಿಯಲ್ಲಿ ಇನ್ನೂ 2387 ಜನರ ವರದಿ ಫಲಿತಾಂಶ ಬರಬೇಕಿದೆ

Siddu Naduvinmani

Leave a Comment