Hasirukranti
ಸಿನಿಮಾ

ಇರುವಲ್ಲಿಯೇ  ಭ್ರಮೆ  ಸಿನಿಮಾ ನೋಡಿ ಬಹುಮಾನವನ್ನೂ ಗಳಿಸಿ …  

     ಕೊರೊನಾದಿಂದಾಗಿ ಕನ್ನಡ ಚಿತ್ರಗಳು ಬಿಡುಗಡೆ ಕಾಣದೆ ಸಂಕಷ್ಟ ಎದುರಿಸುತ್ತಿವೆ. ಆದರೆ ಇದರ ನಡುವೆ ಭ್ರಮೆ ಚಿತ್ರತಂಡ  ಹೊಸ ಮಾರುಕಟ್ಟೆ  ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿದೆ. ಪ್ರೇಕ್ಷಕರು ಇರುವಲ್ಲಿಯೇ ಚಿತ್ರ ನೋಡುವ ಅವಕಾಶ ಕಲ್ಪಿಸುವ ಜೊತೆಗೆ ಬಹುಮಾನಗಳನ್ನು ನೀಡಲಿದೆ. ಇಂಟರ್ ನೆಟ್ ನ ಒಟಿಟಿ ಮೂಲಕ ನಮ್ಮ  ಫ್ಲಿಕ್ಸ್ (ನಮ್ಮ Flix) ಆ್ಯಪ್ ನಲ್ಲಿ  ರಾಜ್ಯೋತ್ಸವಕ್ಕೆ  ಭ್ರಮೆ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.
  ಬೆಂಗಳೂರಿನ ರೇಣುಕಾಂಬ ಸ್ಟುಡಿಯೊದಲ್ಲಿ ನಡೆದ ಸಮಾರಂಭದಲ್ಲಿ ಭ್ರಮೆಯ ರೋಮ್ಯಾಂಟಿಕ್ ಹಾಡೊಂದನ್ನು  ಬಿಡುಗಡೆ  ಮಾಡಲಾಯಿತು. ಈ ಸಂದರ್ಭದಲ್ಲಿ  ತನ್ನ ಚಿತ್ರಕ್ಕೆ  ಪ್ರೇಕ್ಷಕರನ್ನು ಆಕರ್ಷಿಸಿ ಹೊಸ  ರೀತಿಯಲ್ಲಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುತ್ತಿರುವ  ಚಿತ್ರತಂಡ ಪ್ರಶಂಸೆಗೆ ಪಾತ್ರವಾಯಿತು.
     ಅನೇಕ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಮೇಲೆ ಮೊದಲ ಬಾರಿಗೆ ಭ್ರಮೆಯನ್ನು ನಿರ್ದೇಶಿಸಿರುವ ಚರಣ್ ರಾಜ್ ಮಾತನಾಡಿ, ಕುಂದಾಪುರದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರವಿದು. ಭ್ರಮೆ ಹೊಸ ತರಹಾನೆ ಇದೆ  ಪ್ರೇಕ್ಷಕರೆಲ್ಲರಿಗೂ ಭ್ರಮೆ ಹಿಡಿಸುತ್ತದೆ ಎಂದಿದ್ದಾರೆ. ಭ್ರಮೆ ಚಿತ್ರಕ್ಕೆ ಹೊಸ ಮಾರುಕಟ್ಟೆ  ಕಂಡುಕೊಳ್ಳುವಲ್ಲಿ ಪ್ರಮುಖ  ರೂವಾರಿಯೂ  ಆಗಿದ್ದಾರೆ ಚರಣ್ ರಾಜ್. ಭ್ರಮೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ  ದೊರೆತಿದ್ದು ಆನ್ ಲೈನ್ ನಲ್ಲಿ ಈಗಾಗಲೇ ಹತ್ತು ಸಾವಿರ ಟಿಕೆಟ್ ಗಳನ್ನು ಮಾರಾಟ ಮಾಡಲಾಗಿದೆ  ಎನ್ನುವ ಸಂತೋಷವನ್ನು ಹಂಚಿಕೊಂಡರು. ಚರಣ್ ರಾಜ್ ಮೇಲೆ ನಂಬಿಕೆಯನ್ನಿಟ್ಟು ಅವರ ಬಾಲ್ಯ ಸ್ನೇಹಿತ  ಸುಭಾಷ್ ಸೇರಿದಂತೆ ಲೋಕೇಶ್, ವಿಷ್ಣು ಭವ್ಯ, ಆದಿತ್ಯ ಬಲರಾಮ್, ಮಂಜುನಾಥ್ ಎಬಿಬಿ ಹಾಗೂ ಶಿವಕುಮಾರ್  ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
     ಭ್ರಮೆ ಚಿತ್ರತಂಡದ ಈ ಹೊಸ ಯತ್ನ ಕನ್ನಡ ಚಿತ್ರಗಳಿಗೆ ಭವಿಷ್ಯದಲ್ಲಿ ಒಳ್ಳೆ ಮಾರುಕಟ್ಟೆ ಇದೆ ಎನ್ನುವುದರ ಸೂಚನೆ ಎಂದು ನಿರ್ದೇಶಕ ಡಾ. ನಾಗೇಂದ್ರ ಪ್ರಸಾದ್ ಪ್ರಶಂಸೆ ವ್ಯಕ್ತಪಡಿಸಿದರು.ಅನೇಕ ವರ್ಷಗಳ ನಂತರ ಈ ಚಿತ್ರಕ್ಕೆ ಅವರೇ ಸಂಗೀತ ಸಂಯೋಜನೆ  ಮಾಡಿದ್ದಾರೆ.  ಬಿಡುಗಡೆಯಾದ ಅವರದೇ ರಚನೆಯ ಮೌನವೇ ಮಾತನಾಡು ಹಾಡು ಸೆಳೆಯುತ್ತದೆ.
     ನಮ್ಮ  ಫ್ಲಿಕ್ಸ್   ಸಂಸ್ಥೆಯಿಂದ ಮೊದಲ ಬಾರಿಗೆ ಭ್ರಮೆ ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಸಂಸ್ಥೆಯ ಸಿಒಒ ವಿಜಯಕುಮಾರ್ ಅವರು ಮಾತನಾಡಿ, ಕನ್ನಡಕ್ಕಾಗಿ ಕಿಡಿಯಾಗಿ ಹೊರಹೊಮ್ಮುತ್ತಿರುವ ನಮ್ಮ ಸಂಸ್ಥೆಯನ್ನು ಕನ್ನಡಿಗರು ಪ್ರೋತ್ಸಾಹಿಸುತ್ತಾರೆ ಎನ್ನುವ ಆಶಯ ವ್ಯಕ್ತಪಡಿಸಿದರು. ಆಡಿಯೋ ಬಿಡುಗಡೆ ಮಾಡಿದ ನಿರ್ಮಾಪಕ ಬಾ ಮಾ ಹರೀಶ್ ಅವರು  ಚಿತ್ರತಂಡದ ಈ ಹೊಸ ಹೆಜ್ಜೆಯ ಯಶಸ್ಸಿಗೆ ಶುಭ ಹಾರೈಸಿದರು.
     ಹಿರಿಯ ನಿರ್ದೇಶಕ ತಿಪಟೂರು ರಘು ಅವರ ಮಗ ನವೀನ್ ರಘು ಮೊದಲ ಬಾರಿಗೆ ನಾಯಕರಾಗಿ ನಟಿಸಿದ್ದಾರೆ. ಹಾರರ್ ಕಾಮಿಡಿ ಜಾನರ್ನಲ್ಲಿ ಥ್ರಿಲ್ಲರ್ ಎಲಿಮೆಂಟ್ಸ್ ಇರುವಂಥ  ಚಿತ್ರವಾಗಿದೆ ಭ್ರಮೆ ಎಂದ ನವೀನ್ ರಘು,  ಈಗಾಗಲೇ ಚಿತ್ರದ ಟ್ರೇಲರ್ಗೆ ಸಕ್ಸಸ್ ಕೊಟ್ಟಿರುವ ಜನರು  ಸಿನಿಮಾವನ್ನು ಕೈಹಿಡಿಯುತ್ತಾರೆನ್ನುವ ನಂಬಿಕೆಯಲ್ಲಿದ್ದಾರೆ. ನಾಯಕಿಯರಾದ  ಇಶಾನ್ ಮತ್ತು ಅಂಜನಗೌಡ,  ಭ್ರಮೆ ವಿಭಿನ್ನ ಚಿತ್ರವಾಗಿದ್ದು ಪ್ರೇಕ್ಷಕರು ಪ್ರೋತ್ಸಾಹಿಸುವಂತೆ ಕೋರಿದರು.
     ಭ್ರಮೆ ಚಿತ್ರದ ಟಿಕೆಟ್ ಖರೀದಿಸಿದವರಿಗೆ ಲಕ್ಕಿ ಡಿಪ್ ಮೂಲಕ ಕಾರು, ಬೈಕುಗಳು ಮತ್ತು 10 ಸಾವಿರ ಮೌಲ್ಯದ ಕೂಪನ್  ಗಳನ್ನು  ಬಹುಮಾನಗಳಾಗಿ ನೀಡಲಾಗುತ್ತಿದೆ.  ಟಿಕೆಟ್‌ ಗಾಗಿ ಸಂಪರ್ಕಿಸಿ 91 9740214666/8050969245

Related posts

ಉಪ್ಪಿ ಹುಟ್ಟುಹಬ್ಬಕ್ಕೆ ಕಬ್ಜ ಥೀಮ್ ಪೋಸ್ಟರ್ ಬಿಡುಗಡೆ

Hasiru Kranti

ಕಸ್ತೂರಿ ಮಹಲ್ ನಲ್ಲಿ ಶಾನ್ವಿ ಶ್ರೀವಾಸ್ತವ್

Siddu Naduvinmani

ನೈಂಟಿ ಹೊಡಿ ಮನೀಗ್ ನಡಿ ; ಟೈಟಲ್  ಸಾಂಗ್ ಚಿತ್ರೀಕರಣ 

Siddu Naduvinmani

Leave a Comment