Hasirukranti
ಸಿನಿಮಾ

ಶಿವ ಕಂದುಕುರಿ ಮತ್ತು ಪ್ರಿಯಾಂಕಾ ಜವಾಲ್ಕರ್ ; ಗಮನಂ ಫಸ್ಟ್ ಲುಕ್ ಅನಾವರಣ

     ಸುಜನಾ ರಾವ್ ಅವರ ಚೊಚ್ಚಲ ನಿರ್ದೇಶನದಲ್ಲಿ ಕನ್ನಡ ಸೇರಿದಂತೆ ಅನೇಕ   ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ  ಗಮನಂ ಚಿತ್ರದ  ಅಲಿ ಮತ್ತು ಜಾರಾ ಪಾತ್ರಗಳನ್ನು ನಿರ್ವಹಿಸಿರುವ ಶಿವ ಕಂದುಕುರಿ ಮತ್ತು ಪ್ರಿಯಾಂಕಾರ ಫಸ್ಟ್ ಲುಕ್  ಬಿಡುಗಡೆಯಾಗಿದೆ.
     ಜರ್ಸಿ ಧರಿಸಿದ ಕ್ರೀಡಾಪಟುವಾಗಿ ಶಿವ ಕಾಣಿಸಿಕೊಂಡರೆ, ಮುಸ್ಲಿಂ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಿಯಾಂಕಾ ಕಂಗೊಳಿಸುತ್ತಿದ್ದಾರೆ.
ಗಮನಂ ಚಿತ್ರದಲ್ಲಿ ಈ ಎರಡು ಪಾತ್ರಗಳ ಬ್ಯೂಟಿಫುಲ್ ರೊಮ್ಯಾಂಟಿಕ್ ಸ್ಟೋರಿ ಪರದೆ ಮೇಲೆ ಅನಾವರಣಗೊಳ್ಳಲಿರುವ ಸೂಚನೆಯನ್ನು ಈ ಫಸ್ಟ್ ಲುಕ್ ನೀಡಿದೆ.
     ಗಮನಂ ಚಿತ್ರತಂಡ ಈ ಹಿಂದೆ ಶ್ರೀಯಾ ಶರಣ್ ಮತ್ತು ನಿತ್ಯಾ ಮೆನನ್ ಅವರ ಫಸ್ಟ್ ಲುಕ್  ಪೋಸ್ಟರನ್ನು ಬಿಡುಗಡೆ ಮಾಡಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈಗ ಶಿವ ಕಂದುಕುರಿ ಮತ್ತು ಪ್ರಿಯಾಂಕಾ ಜವಾಲ್ಕರ್ ಅವರ ಪೋಸ್ಟರ್ ಕೂಡಾ ಎಲ್ಲರನ್ನೂ ಸೆಳೆಯುವಂತಿದೆ.
     ಸುಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜಾ ಗಮನಂಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಜ್ಞಾನಶೇಖರ್ ವಿ.ಎಸ್. ಛಾಯಾಗ್ರಹಣ, ರಾಮಕೃಷ್ಣ ಅರ್ರಮ್ ಸಂಕಲನ, ಸಾಯಿ ಮಾಧವ ಬುರಾ ಸಂಭಾಷಣೆ  ಇದೆ. ರಮೇಶ್ ಕರುತೂರಿ ಮತ್ತು ವೆಂಕಿ ಪುಶದಾಪು ಮತ್ತು ಜ್ಞಾನಶೇಖರ್ ವಿ ಎಸ್ ಕ್ರಿಯಾ ಫಿಲ್ಮ್ಸ್ ಕಾರ್ಪ್ ಮೂಲಕ ನಿರ್ಮಾಣ ಮಾಡಿದ್ದಾರೆ.

Related posts

ಡಬ್ಬಿಂಗ್ ಮುಗಿಸಿದ ಅರ್ಜುನ್ ಗೌಡ

Siddu Naduvinmani

ಕನ್ನಡ ಚಿತ್ರರಂಗದಲ್ಲಿ ದೊಡ್ಡ ಕಲಾವಿದೆಯಾಗಬೇಕು …

Siddu Naduvinmani

ವೀರಪುತ್ರನಿ ಜ್ಯೂಡಾ ಸ್ಯಾಂಡಿಯ ಸಂಗೀತ

Siddu Naduvinmani

Leave a Comment