Hasirukranti
leadingnews ರಾಜಕೀಯ ರಾಜ್ಯ ವಾಣಿಜ್ಯ

SBI ನ ನೂತನ ಅಧ್ಯಕ್ಷರಾಗಿ ದಿನೇಶ್​ ಕುಮಾರ್ ಖರಾ ನೇಮಕ

 

ನವದೆಹಲಿ, ಅ.07: ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದ ನೂತನ ಅಧ್ಯಕ್ಷರನ್ನಾಗಿ ಹಿರಿಯ ಬ್ಯಾಂಕರ್ ದಿನೇಶ್​ ಕುಮಾರ್ ಖರಾ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರವು ಮೂರು ವರ್ಷಗಳ ಅವಧಿಗೆ ದಿನೇಶ್​ ಕುಮಾರ್​ ಅವರನ್ನು ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಅವಧಿಯು 2020ರ ಅಕ್ಟೋಬರ್ 7ರಿಂದ ಅಥವಾ ಹುದ್ದೆಯ ಉಸ್ತುವಾರಿ ವಹಿಸಿಕೊಂಡ ದಿನಾಂಕದಿಂದ ಮುಂದಿನ ಆದೇಶದವರೆಗೆ ಇರುತ್ತದೆ. ಹಣಕಾಸು ಸಚಿವಾಲಯವು ಈ ಅಧಿಸೂಚನೆಯನ್ನು ಹೊರಡಿಸಿದೆ.

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಅಧ್ಯಕ್ಷರನ್ನಾಗಿ ದಿನೇಶ್​ ಕುಮಾರ್​​ ಅವರನ್ನು ನೇಮಿಸುವಂತೆ ಬ್ಯಾಂಕ್ಸ್​ ಬೋರ್ಡ್​​ ಬ್ಯೂರೋ(ಬಿಬಿಬಿ) ಕಳೆದ ತಿಂಗಳು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ದಿನೇಶ್​ ಕುಮಾರ್​ ಅವರನ್ನು ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ 2016 ಆಗಸ್ಟ್​​ನಲ್ಲಿ ಮೂರು ವರ್ಷಗಳ ಅವಧಿಗೆ ನೇಮಿಸಲಾಗಿತ್ತು. ದಿನೇಶ್​ ಅವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಅವರ ಅವಧಿಯನ್ನು ಮತ್ತೆ ಎರಡು ವರ್ಷ ವಿಸ್ತರಿಸಲಾಯಿತು.

1984ರಲ್ಲಿ ಎಸ್​ಬಿಐ ಪ್ರೊಬೇಷನರಿ ಅಧಿಕಾರಿಯಾಗಿ ಸೇರ್ಪಡೆಗೊಂಡ ದಿನೇಶ್ ಕುಮಾರ್​, 5 ಸಹಾಯಕ ಬ್ಯಾಂಕ್​ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್​​ನ್ನು ಎಸ್​​​ಬಿಐನೊಂದಿಗೆ ಏಪ್ರಿಲ್ 17ರಂದು ವಿಲೀನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸಧ್ಯ ರಜನೀಶ್​ ಕುಮಾರ್ ಅವರ ಸ್ಥಾನಕ್ಕೆ ದಿನೇಶ್​ ಕುಮಾರ್​ ಅವರನ್ನು ನೇಮಿಸಲಾಗಿದೆ. ರಜನೀಶ್​ ಕುಮಾರ್ ತಮ್ಮ ಮೂರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಹಿನ್ನೆಲೆ, ನೂತನ ಅಧ್ಯಕ್ಷರ ನೇಮಕ ಮಾಡಲಾಯಿತು.

Related posts

ಕರ್ನಾಟಕದಲ್ಲಿಂದು ಒಂದೇ ದಿನ 149 ಕೊರೋನಾ ಪಾಸಿಟಿವ್ : ಮಂಡ್ಯ, ದಾವಣಗೆರೆಯಲ್ಲಿ ಅತಿ ಹೆಚ್ಚು ಸೋಂಕು ದೃಢ

Siddu Naduvinmani

ಡಿ.ಕೆ.ಶಿವಕುಮಾರ ಮೇಲಿನ ದಾಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ : ಪ್ರಹ್ಲಾದ್ ಜೋಶಿ

Siddu Naduvinmani

ಅಥಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಬೈಕ್ ಕಳ್ಳನ ಬಂಧನ – ಏಳು ಬೈಕ್ ವಶ

Siddu Naduvinmani

Leave a Comment