Hasirukranti
leadingnews ಆರೋಗ್ಯ ರಾಷ್ಟ್ರೀಯ

ಹೈಪಟೈಟಿಸ್ ಸಿ ವೈರಸ್ ಅನ್ವೇಷಣೆ: ಮೂವರಿಗೆ ನೊಬೆಲ್ ಪ್ರಶಸ್ತಿ ಘೋಷಣೆ

 

ನವದೆಹಲಿ, ಅ.5; ರಕ್ತದಿಂದ ಹರಡುವ ಹೆಪಟೈಟಿಸ್ ವಿರುದ್ಧದ ಹೋರಾಟ ಕುರಿತು ಅನ್ವೇಷಣೆ ನಡೆಸಿದ್ದ ಅಮೆರಿಕರದವರಾದ ಹಾರ್ವೆ ಆಲ್ಟರ್, ಚಾಲ್ರ್ಸ್ ರೈಸ್ ಹಾಗೂ ಬ್ರಿಟನ್‍ನ ಮೈಕೆಲ್ ಹೌಟನ್ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಹೈಪಟೈಟಿಸ್ ಸಿ ವೈರಸ್ ಅನ್ವೇಷಣೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗೆ ಮೂವರಿಗೆ ಜಂಟಿಯಾಗಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಪಿತ್ತಜನಕಾಂಗದ ಕ್ಯಾನ್ಸರ್ ಮತ್ತು ಸಿರೋಸಿಸ್ ಪ್ರಮುಖ ಜಾಗತಿಕ ಆರೋಗ್ಯ ಸಮಸ್ಯೆಯಾಗಿದೆ ಎಂದು ಇದೇ ವೇಳೆ ನೊಬೆಲ್ ಪ್ರಶಸ್ತಿ ಆಯ್ಕೆ ತೀರ್ಪುಗಾರರು ತಿಳಿಸಿದ್ದಾರೆ.

ಈ ಪ್ರತಿಷ್ಠಿತ ಪ್ರಶಸ್ತಿ ಚಿನ್ನದ ಪದಕ ಹಾಗೂ 10 ಮಿಲಿಯನ್ ಸ್ವೀಡಿಸ್ ಹಣ ಹೊಂದಿದೆ. ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಪುರಸ್ಕರಿಸುವ ಈ ಪ್ರಶಸ್ತಿಯನ್ನು ಒಟ್ಟು ಆರು ಕ್ಷೇತ್ರಗಳಲ್ಲಿ ನೀಡಲಾಗುವುದು. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಾಹಿತ್ಯಮ ಶಾಂತಿ ಹಾಗೂ ಅರ್ಥಶಾಸ್ತ್ರದ ಕ್ಷೇತ್ರಗಳಲ್ಲಿನ ಸಾಧನೆಗೂ ಈ ಪ್ರಶಸ್ತ್ರಿ ನೀಡಲಾಗುವುದು. ಅಕ್ಟೋಬರ್ ಮೊದಲವಾರದಿಂದ ಈ ಪ್ರಶಸ್ತಿಗಳು ಪ್ರಕಟವಾಗುತ್ತವೆ.

ವಿಶ್ವ ಆರೋಗ್ಯ ಸಂಘಟನೆ ಪ್ರಕಾರ ಸರಿಸುಮಾರು 70ಮಿಲಿಯನ್ ಜನರು ಈ ಹೆಪಟೈಟಿಸ್‍ಗೆ ಪ್ರತಿವರ್ಷ ತುತ್ತಾಗುತ್ತಿದ್ದಾರೆ. ಇದರಿಂದಾಗಿ ನಾಲ್ಕು ಲಕ್ಷ ಜನರು ಪ್ರತಿ ವರ್ಷ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ದೀರ್ಘಕಾಲ ಪಿತ್ತಕೋಶದ ಉರಿಯೂತ ಮತ್ತು ಕ್ಯಾನ್ಸರ್‍ಗೆ ಪ್ರಮುಖ ಕಾರಣವಾಗಿದೆ.

Related posts

ಪರೀಕ್ಷಾ ಕೇಂದ್ರಗಳ ಹೊರಗೆ ಅನಗತ್ಯ ಗುಂಪು ಸೇರಿ ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಿಸಬಾರದು : ಸುರೇಶ ಅಂಗಡಿ

Siddu Naduvinmani

ವ್ಯಾಪಕ ಮಳೆ: ನದಿತೀರದ ಗ್ರಾಮಗಳು, ಪರಿಹಾರ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಹಿರೇಮಠ ಭೇಟಿ, ಪರಿಶೀಲನೆ

Siddu Naduvinmani

ಶೇರು ಸದಸ್ಯರ ಹಕ್ಕನ್ನು ಕಸಿದುಕೊಂಡು ಶಾಸಕ ಮಹಾದೇವಪ್ಪ ಯಾದವಾಡ : ಮಾಜಿ ಶಾಸಕ ಅಶೋಕ ಪಟ್ಟಣ ಆರೋಪ

Siddu Naduvinmani

Leave a Comment