Hasirukranti
leadingnews ಪ್ರವಾಸೋದ್ಯಮ ಬಾಗಲಕೋಟೆ

ಪ್ರವಾಸಿ ತಾಣಗಳಿಗೆ ಕೆಎಸ್‍ಟಿಡಿಸಿ ಅಧ್ಯಕ್ಷೆ ಶೃತಿ ಭೇಟಿ ಪರಿಶೀಲನೆ

ಬಾಗಲಕೋಟೆ: ಅಕ್ಟೋಬರ 03 – ಜಿಲ್ಲೆಯ ಪ್ರವಾಸಿ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲ ಹಾಗೂ ಮಹಾಕೂಟ ಪ್ರದೇಶಗಳಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶೃತಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಾದಾಮಿಯ ಗುಹಾಂತರ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅಧ್ಯಕ್ಷರು ಸ್ಥಳಾಂತರಗೊಳ್ಳಬೇಕಾದ ಮನೆ ಹಾಗೂ ಅದಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಪ್ರವಾಸೋದ್ಯಮ ಅಭಿವೃದ್ದಿ ಕೈಗೊಂಡ ಕಾರ್ಯ, ಹಾಕಿಕೊಂಡ ಕ್ರೀಯಾ ಯೋಜನೆಗಳ ಬಗ್ಗೆ ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಅನಿಕುಮಾರ ಅವರಿಂದ ಮಾಹಿತಿ ಪಡೆದರು. ಪಟ್ಟದಕಲ್ಲ ಮತ್ತು ಐಹೊಳೆ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಮನೆಗಳ ಸ್ಥಳಾಂತರ ಬಗ್ಗೆ ಮಾಹಿತಿ ಪಡೆದುಕೊಂಡರು.

ಭೇಟಿ ಸಂದರ್ಭದಲ್ಲಿ ಬೆಂಗಳೂರಿನ ಸೌಂಡ್ & ಲೈಟ್ ಸಿಸ್ಟಮ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ, ಕೆಎಸ್‍ಟಿಡಿಸಿಯ ಎಜಿಎಂ ಎಸ್.ಬಿ.ದೇಶಮುಖ, ರಾಕ್ ಕ್ಲೈಬಿಂಗ್ ಗಣೇಶ ವಡ್ಡರ ಸೇರಿದಂತೆ ಇತರರು ಇದ್ದರು.

Related posts

ಅತಿವೃಷ್ಟಿ‌ ಹಾನಿ ತಕ್ಷಣ ಸರಿಪಡಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಧಿಕಾರಿಗಳಿಗೆ ಸೂಚನೆ

Siddu Naduvinmani

ಬೆಳಗಾವಿಯಲ್ಲಿ ಕೊರೊನಾ ಸ್ಫೋಟ – 3 ಬಲಿ, 92 ಜನರಿಗೆ ಸೋಂಕು

Siddu Naduvinmani

ಭಾರೀ ಮಳೆ : ಗೋಡೆ ಕುಸಿದ ಪರಿಣಾಮ 9 ಮಂದಿ ದಾರುಣ ಸಾವು.!

Siddu Naduvinmani

Leave a Comment