Hasirukranti
ಉದ್ಯೋಗ

ಜಿಟಿಟಿಸಿಯಲ್ಲಿ ಉಚಿತ ತಾಂತ್ರಿಕ ಕೌಶಲ್ಯ ತರಬೇತಿಗಳು

ಹುಬ್ಬಳ್ಳಿ.ಅ.01: ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ‘ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ’ ಅಡಿಯಲ್ಲಿ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ (ಜಿಟಿಟಿಸಿ) ಉಚಿತ ತಾಂತ್ರಿಕ ಕೌಶಲ್ಯ ತರಬೇತಿಗಳನ್ನು ಆಯೋಜಿಸಲಾಗಿರುತ್ತದೆ.

ಯೋಜನೆಯಡಿ ಸಿ.ಎನ್.ಸಿ. ಪೆÇ್ರೀಗ್ರಾಮಿಂಗ್, ಸಿ.ಎನ್.ಸಿ. ಟೆಕ್ನಾಲಜಿಸ್ಟ್, ಕ್ಯಾಡ್ – ಕ್ಯಾಮ್ ಸ್ಪೆಶಾಲಿಸ್ಟ್, ಟೂಲರೂಮ ಮಶಿನಿಸ್ಟ್, ಪೆÇೀಸ್ಟ್ ಡಿಪೆÇ್ಲಮಾ ಇನ್ ಟೂಲ್ ಡಿಸೈನ್, ಟರ್ನರ್, ಮಿಲ್ಲರ್ ಮತ್ತು ಗ್ರೈಂಡರ್ ವೃತ್ತಿಗಳಲ್ಲಿ ಉಚಿತ ಕೌಶಲ್ಯ ತರಬೇತಿ ನೀಡಲಾಗುವುದು. ಎಸ್‍ಎಸ್‍ಎಲ್‍ಸಿ, ಐಟಿಐ, ಡಿಪೆÇ್ಲೀಮಾ, ಬಿ.ಇ ಪಾಸಾದ 16 ರಿಂದ 40 ವಯೋಮಿತಿಯೊಳಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಈ ತರಬೇತಿಗಳನ್ನು ಪಡೆಯಲು ಅರ್ಹರಿರುತ್ತಾರೆ. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಸ್ಟೈಪೆಂಡ್ ಮತ್ತು ಬಸ್ ಪಾಸ್ ಸೌಲಭ್ಯ ಇರುತ್ತದೆ. ಜಿಟಿಟಿಸಿ ಸಂಸ್ಥೆಯು ಉನ್ನತ ತಂತ್ರಜ್ಞಾನ ಮತ್ತು ಸೌಕರ್ಯಗಳನ್ನು ಅಳವಡಿಸಿಕೊಂಡಿದ್ದು, ಕೈಗಾರಿಕೆಗಳಲ್ಲಿ ಅನುಭವ ಹೊಂದಿದ ಶಿಕ್ಷಕರಿಂದ ಫಲಾನುಭವಿಗಳಿಗೆ ಆನ್ ಜಾಬ್ ತರಬೇತಿ ನೀಡಲಾಗುವುದು.

ಈ ತರಬೇತಿಗಳು ಕೈಗಾರಿಕೆಗಳಲ್ಲಿ ನೇರವಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ಪಠ್ಯಕ್ರಮ ಹೊಂದಿವೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸಿಕೊಡಲಾಗುವುದು. ತರಬೇತಿಗಳು ಅಕ್ಟೋಬರ್ 12 ರಿಂದ ಪ್ರಾರಂಭವಾಗಲಿವೆ. ಆಸಕ್ತ ಅಭ್ಯರ್ಥಿಗಳು ದಿನಾಂಕ 10-10-2020 ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹುಬ್ಬಳಿ ಹಾಗೂ ಧಾರವಾಡ ರಾಯಪುರ ಜಿಟಿಟಿಸಿ, ಕೇಂದ್ರಗಳ ದೂರವಾಣಿ ಸಂಖ್ಯೆ 0836-2333159, 8183860552, 96865 22203, 9591491810 ಸಂಪರ್ಕಿಸಬಹುದು.

Related posts

ಕೊರೋನಾ ಎಫೆಕ್ಟ್ ದಿಂದ ಮಾವಿಗೆ ಬರ

Hasiru Kranti

ಬೆಂಗಳೂರು: 27 ಕೋಟಿ ರೂ. ವಂಚಿಸಿದ್ದ ನಕಲಿ ಸ್ವಾಮಿ ಬಂಧನ

admins

ಎಲ್ಲೆಲ್ಲೂ ಹರಕೆಯ ಭಂಡಾರ: ಹಳದಿ ಬಣ್ಣದ ಚಿತ್ತಾರ; ಚಿಕ್ಕೋಡಿಯ ಜಾತ್ರೆಯಲ್ಲಿ ಭಕ್ತರ ದಂಡು

admins

Leave a Comment