Hasirukranti
ಸಿನಿಮಾ

ಸದ್ಯದಲ್ಲೇ ಕಾಲಚಕ್ರದ ವಿಭಿನ್ನ ಟೀಸರ್   

     ವಸಿಷ್ಠ ಎನ್ ಸಿಂಹ ನಾಯಕರಾಗಿ ನಟಿಸಿರುವ, ರಶ್ಮಿ ಫಿಲಂಸ್ ಲಾಂಛನದಲ್ಲಿ  ನಿರ್ಮಾಣವಾಗಿರುವ ಕಾಲಚಕ್ರ ಚಿತ್ರದ ವಿಭಿನ್ನ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ‌
     ತಮ್ಮ ಕಂಚಿನ ಕಂಠ ಹಾಗೂ ಸಹಜ ಅಭಿನಯದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿರುವ  ವಸಿಷ್ಠ ಸಿಂಹ ಈ ಚಿತ್ರದಲ್ಲಿ 25 ರಿಂದ 60 ವಯೋಮಾನದಲ್ಲಿ ಬರುವ ನಾಲ್ಕು ಪಾತ್ರಗಳ  ನಿರ್ವಹಣೆ ‌ಮಾಡಿದ್ದಾರೆ. ಲಾಕ್ ಡೌನ್ ಗೂ ಮುನ್ನ ಕಿಚ್ಚ ಸುದೀಪ ಅವರು ಬಿಡುಗಡೆ ಮಾಡಿದ್ದ  ಚಿತ್ರದ ಟೀಸರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
     ಸುಮಂತ್ ಕ್ರಾಂತಿ ನಿರ್ಮಾಣ, ರಚನೆ ಹಾಗೂ ನಿರ್ದೇಶನದ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ..ಗುರುಕಿರಣ್ ಸಂಗೀತವಿದ್ದು ಹಾಡುಗಳನ್ನು ಚೇತನ್ ಕುಮಾರ್, ಕವಿರಾಜ್, ಸಂತೋಷ್ ನಾಯಕ್ ಬರೆದಿದ್ದಾರೆ. ಸಂಚಿತ್ ಹೆಗ್ಡೆ, ಕೈಲಾಷ್ ಖೇರ್, ಪಂಚಮ್ ಜೀವ ಹಾಡಿದ್ದಾರೆ.
ಎಲ್ ಎಂ ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ‌ ಸಾಹಸ, ಮುರಳಿ  ನೃತ್ಯ ನಿರ್ದೇಶನವಿದ್ದು, ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ವಸಿಷ್ಠ ಎನ್ ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು  ತಾರಾಬಳಗದಲ್ಲಿದ್ದಾರೆ.

Related posts

ಇರುವಲ್ಲಿಯೇ  ಭ್ರಮೆ  ಸಿನಿಮಾ ನೋಡಿ ಬಹುಮಾನವನ್ನೂ ಗಳಿಸಿ …  

Siddu Naduvinmani

ಲಾಸ್ಟ್‌ಸೀನ್ ವಿಡಿಯೋ ಹಾಡು ಬಿಡುಗಡೆ

Siddu Naduvinmani

ಪ್ರಾರಂಭ ಚಿತ್ರತಂಡದಿಂದ ನೂತನ ಚಿತ್ರ ಆರಂಭ…

Hasiru Kranti

Leave a Comment