Hasirukranti
ಸಿನಿಮಾ

ಲಾಸ್ಟ್‌ಸೀನ್ ವಿಡಿಯೋ ಹಾಡು ಬಿಡುಗಡೆ

       ಹೊಸಬರೇ ಸೇರಿಕೊಂಡು ಲಾಸ್ಟ್ ಸೀನ್   ಎನ್ನುವ ೪.೩೦ ನಿಮಿಷದ ವಿಡಿಯೋ ಹಾಡನ್ನು ಸಿದ್ದಪಡಿಸಿದ್ದಾರೆ.  ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ  ನಡೆದ ಸಮಾರಂಭದಲ್ಲಿ ಹಾಡನ್ನು ಬಿಡುಗಡೆ ಮಾಡಲಾಯಿತು.
     ಹಾಡಿನ ಪರಿಕಲ್ಪನೆ ಮತ್ತು ನಿರ್ದೇಶನ ಮಾಡಿರುವ ಎನ್.ವಿನಾಯಕ ಮಾತನಾಡಿ, ಮೊದಲ ಬಾರಿಗೆ  ನಮ್ಮ ಭಾಷೆ ಸೇರಿದಂತೆ ತೆಲುಗು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಹಾಡನ್ನು ಸಿದ್ದಪಡಿಸಲಾಗಿದೆ. ಮೂರು ದಿನಗಳ ಕಾಲ ಬೆಂಗಳೂರು, ಮಂಗಳೂರು, ದಾಬಸ್‌ಪೇಟೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಮಾಜದಲ್ಲಿ ಒಂದು ಹುಡುಗಿ ಅತ್ಯಾಚಾರವಾದಾಗ ಆಕೆ ಅನುಭವಿಸುವ ನೋವು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರೇಮಿಯಾದವನು ಯಾವ ರೀತಿ ವೇದನೆ ಪಡುತ್ತಾನೆ ಎಂಬುದನ್ನು ಹೇಳುವ ಪ್ರಯತ್ನ ಹಾಡಿನಲ್ಲಿ ಮಾಡಲಾಗಿದೆ. ವ್ಯಾಟ್ಸ್ ಅಪ್‌ದಲ್ಲಿ ಕೊನೆ ಸಲ ನೋಡಿ, ಬೆಳಿಗ್ಗೆ ಆಗುವುದರ ಒಳಗೆ ದುಷ್ಟರಿಂದ ಅನ್ಯಾಯಕ್ಕೆ ಒಳಗಾಗಿರುತ್ತಾಳೆ. ಅವಳು ಮತ್ತೆ ಫೋನ್‌ ನಲ್ಲಿ ಉತ್ತರಿಸುತ್ತಾಳಾ? ಎಂಬುದಕ್ಕೆ ಕಾಯುತ್ರಿರುತ್ತಾನೆ. ಅದಕ್ಕಾಗಿಯೇ ಈ ಟೈಟಲ್ ಇಡಲಾಗಿದೆ ಎಂದು ಸಮಜಾಯಿಷಿ ನೀಡಿದರು.
      ಇಂದು ಐದು ಲಕ್ಷದಲ್ಲಿ ಸಿನಿಮಾ ಮಾಡುವವರಿದ್ದಾರೆ. ಇವರು ಅದೇ ಮೊತ್ತದಲ್ಲಿ ಹಾಡಿಗೆ ಖರ್ಚು ಮಾಡಿರುವುದು ನೋಡಿದಾಗ ಖುಷಿಯಾಗುತ್ತದೆ. ಎನ್ ವಿನಾಯಕ ಮುಂದೆ ಹಿರಿತೆರೆಗೆ ನಿರ್ದೇಶಕರಾಗಿ ಬರಲಿ ಎಂದು  ನಿರ್ದೇಶಕ ಮರಡಿಹಳ್ಳಿನಾಗಚಂದ್ರ ಶುಭಹಾರೈಸಿದರು. ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಶಿವು, ಶ್ರೀಧರ್‌ಕಶ್ಯಪ್  ಮುಂತಾದವರು ಭಾಗವಹಿಸಿದ್ದರು.
      ಟೆಂಟ್ ವಿದ್ಯಾರ್ಥಿಯಾಗಿರುವ ವಾಗೀಶ್‌ಆಯುಷ್ ನಾಯಕ ಮತ್ತು ಟೆಕ್ಕಿ ಸಂಗೀತ ನಾಯಕಿ. ಇಬ್ಬರು ಅನುಭವಗಳನ್ನು ಹಂಚಿಕೊಂಡು ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಿದರು. ಸಂಕಲನ ಕೃಷ್ಣಸುಜಾನ್, ನೃತ್ಯ ಮೋಹನ್‌ಜಾಕ್ಸನ್.  ಛಾಯಾಗ್ರಹಣ ಮನು.ಬಿ.ಕೆ., ಸಂಗೀತ ಜುಬೇರ್‌ಮೊಹಮದ್, ಸಾಹಿತ್ಯ ಪ್ರಮೋದ್‌ಆಚಾರ್ಯ ಹಾಗು ಗಾಯನ ವಾಸುಕಿವೈಭವ್ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ.  ವಿನು ಐಡಿಯಾ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣಗೊಂಡಿರುವ ಹಾಡು ಆನಂದ್ ಆಡಿಯೋ ಯೂ ಟ್ಯೂಬ್‌ ನಲ್ಲಿ  ಬಿಡುಗಡೆಗೊಂಡಿದೆ.

Related posts

ಉಪ್ಪಿ ಹುಟ್ಟುಹಬ್ಬಕ್ಕೆ ಕಬ್ಜ ಥೀಮ್ ಪೋಸ್ಟರ್ ಬಿಡುಗಡೆ

Hasiru Kranti

ಲಂಕೇಶ್ ಆಡಿಯೋಬುಕ್ಸ್-ಆ್ಯಪ್ ಬಿಡುಗಡೆ  

Siddu Naduvinmani

ನೈಂಟಿ ಹೊಡಿ ಮನೀಗ್ ನಡಿ ; ಟೈಟಲ್  ಸಾಂಗ್ ಚಿತ್ರೀಕರಣ 

Siddu Naduvinmani

Leave a Comment