Hasirukranti
leadingnews ಕ್ರೀಡೆ

ಐಪಿಎಲ್; ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಆರ್ ಸಿಬಿ

 

ಬೆಂಗಳೂರು, ಸೆ.22 : ನಿನ್ನೆ ಸೋಮವಾರ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ರನ್‍ಗಳ ರೋಚಕ ಜಯ ಸಾಧಿಸಿತು. ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗು ಬಡಿದ ಕೊಹ್ಲಿ ಪಡೆ ಮೊದಲ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಆರ್‍ಸಿಬಿ, ಸಿಎಸ್‍ಕೆ, ಡೆಲ್ಲಿ ತಲಾ ಒಂದು ಮ್ಯಾಚ್ ಗೆಲ್ಲುವ ಮೂಲಕ ಪಟ್ಟಿಯಲ್ಲಿ ಅನುಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಎಲ್ಲರಿಗೂ ಪಾಯಿಂಟ್ಸ್ ಎರಡೇ ಬಂದರೂ ರನ್ ರೇಟ್ ಆಧಾರದ ಮೇಲೆ ಆರ್‍ಸಿಬಿ ಸಿಎಸ್‍ಕೆಗಿಂತ ಮುಂದಿದೆ. ಆರ್‍ಸಿಬಿಯ ರನ್ ರೇಟ್ +0.500 ಇದ್ದರೆ, ಸಿಎಸ್‍ಕೆಯದ್ದು, + 0486 ಇದೆ. ಡೆಲ್ಲಿಯದ್ದು + 0.000 ಇದೆ.

ಸಾಕಷ್ಟು ಅಡೆತಡೆಗಳನ್ನು ಎದುರಿಸಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಭಾರತದಲ್ಲಿ ಐಪಿಎಲ್ ನಡೆಯುತ್ತಿತ್ತು. ಆದರೆ, ಈ ಬಾರಿ ಐಪಿಎಲ್ ಯುಎಇಗೆ ಶಿಫ್ಟ್ ಆಗಿದೆ. ಸೆಪ್ಟೆಂಬರ್ 19ರಿಂದ ಹೊಡಿಬಡಿ ಆಟ ಅಭಿಮಾನಿಗಳನ್ನು ರಂಜಿಸುತ್ತಿದೆ. ಈಗಾಗಲೇ ಮೂರು ಪಂದ್ಯ ಮುಗಿದಿದ್ದು, ಈ ಪಂದ್ಯಗಳ ಫಲಿತಾಂಶದಲ್ಲಿ ಆರ್‍ಸಿಬಿ ಮೊದಲ ಸ್ಥಾನದಲ್ಲಿದೆ. ಈ ಮೂಲಕ ಸಿಎಸ್‍ಕೆ ಎರಡನೇ ಸ್ಥಾನಕ್ಕೆ ಇಳಿದಿದೆ.

ಅತಿ ಹೆಚ್ಚು ರನ್ ಹೊಡೆದವರಿಗೆ ನೀಡುವ ಆರೆಂಜ್ ಕ್ಯಾಪ್ ಮಯಾಂಕ್ ಅಗರ್‍ವಾಲ್ (89 ರನ್?) ಹಾಗೂ ಅತಿ ಹೆಚ್ಚು ವಿಕೆಟ್ ಪಡೆದವರಿಗೆ ನೀಡುವ ಪರ್ಪಲ್ ಕ್ಯಾಪ್ ಮಹ್ಮದ್ ಶಮಿ (3 ವಿಕೆಟ್ಸ್) ಬಳಿ ಇದೆ.

Related posts

ಹೊಸಪೇಟೆಗೆ ಕಂದಾಯ ಸಚಿವ ಆರ್.ಅಶೋಕ ಪ್ರವಾಸ

Siddu Naduvinmani

ಬೆಳಗಾವಿ 3 ಸೇರಿ ರಾಜ್ಯಾದ್ಯಂತ 71 ಬಲಿ

Hasiru Kranti

ಇಂದಿನಿಂದ ಎಲ್ ಇಡಿ, ಎಲ್ ಸಿಡಿ ಟಿವಿ ಬೆಲೆಯಲ್ಲಿ ಹೆಚ್ಚಳ

Siddu Naduvinmani

Leave a Comment