Hasirukranti
ಅಂಕಣಗಳು ಜೀವನಶೈಲಿ ವಿಶೇಷ

ಪ್ರತಿದಿನ ಗೆಲ್ಲುತ್ತೇನೆ ಎಂದು ಹೊರಟವನು ಸೋಲಲು ಸಹ ಸಿದ್ಧನಾಗಿರಬೇಕು

 

ಸೋಲು ಎಂಬುದು ಪ್ರತಿಯೊಬ್ಬರ ಜೀವನದಲ್ಲಿ  ಹುಟ್ಟಿನಿಂದ ಸಾಯುವವರೆಗೂ ಸದಾ ಬೆನ್ ಬಿಡದೆ ಹಿಂಬಾಲಿಸಿ ಬರುವಂತಹದ್ದು, ಇದೂಂತರ ನೆರಳಿನ ರೀತಿ ಕರ್ಮನುಸಾರ ಮನುಷ್ಯನನ್ನು ಸದಾ ಹಿಂಬಾಲಿಸುತ್ತಲೇ ಇರುತ್ತದೆ , ಆಧುನಿಕ ಕಾಲದಲ್ಲಿ ತಂದೆ ತಾಯಿ , ನೆಂಟರಿಷ್ಟರು ಸಮಾಜದೊಳಗಣ ಜನರು ಗೆಲ್ಲಲೇ ಬೇಕೆಂದು ಒತ್ತಡ ಹೇರುವುದರಿಂದ ಇಂದಿನ ಮಕ್ಕಳಲ್ಲಿ, ಯುವಕರಲ್ಲಿ ಸೋಲು ತುಂಬಾ ಪರಿಣಾಮ ವನ್ನುಂಟುಮಾಡಿ  ಅವರ ಮನಸ್ಸನ್ನು ವಾಸಿಯಾಗದಷ್ಟು ಘಾಸಿಗೊಳಿಸಿ ಕೀಳಿರಿಮೆ, ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ.

ಭೂ ಮಂಡಲದಲ್ಲಿ ಮನುಷ್ಯನನ್ನು ಹೊರತು ಪಡಿಸಿ ಬೇರೆ ಯಾವ ಪ್ರಾಣಿಯು ಕೂಡ ಸೋಲಿಗೆ ಅಂಜಿ ಆತ್ಮಹತ್ಯೆ ಮಾಡಿಕೂಳ್ಳುವುದಿಲ್ಲ ಮನುಷ್ಯ ಮಾತ್ರ ಅಂತ ದುಸ್ಸಾಹಕ್ಕೆ ಕೈ ಹಾಕುತ್ತಾನೆ. ಸೋಲಿನಿಂದಾಗುವ ಆಘಾತದಿಂದ ತಪ್ಪಿಸಿಕೊಳ್ಳಲು ಕೆಲ ಮಕ್ಕಳು ತಮ್ಮ ಅಮೂಲ್ಯವಾದ ಜೀವನವನ್ನೇ ಕೊನೆಗೊಳಿಸಿ ಕೊಳ್ಳುತ್ತಿದ್ದಾರೆ.

ಪ್ರತಿದಿನವೂ ಗೆಲ್ಲುವೆನೆಂದು ಹೊರಟವನು ಸೋಲಲು ಕೂಡ ಸಿದ್ಧನಾಗಿರಬೇಕೆಂಬ ಮಾತಿನಂತೆ , ಸೋಲು ನಮ್ಮನ್ನು ಒಂದಲ್ಲಾ ಒಂದು ಬಗೆಯಲ್ಲಿ ಭೇಟಿ ಮಾಡುತ್ತಲೇ ಇರುತ್ತದೆ. ಅದು ಬೇಟಿಯಾಗುವುದೇ ನಮ್ಮ ನಿರ್ಲಕ್ಷ್ಯದ ಒಟ್ಟಾರೆ ಪ್ರತಿಫಲವೆಂದು ನಾವು ಭಾವಿಸುವುದಿಲ್ಲ. ಸೋಲು ಒಂದು ರೀತಿಯಲ್ಲಿ ಒಳ್ಳೆಯದೇ ಅದು ನಮ್ಮನ್ನು ಸದಾ ಎಚ್ಚರಿಕೆಯಿಂದ ಮುನ್ನುಗ್ಗುವಂತೆ ಮಾಡುತ್ತದೆ. ನಮ್ಮ ಸಾಮರ್ಥ್ಯವನ್ನು ಪರೀಕ್ಷಿಸುವುದರ ಜೊತೆಗೆ ಸಮಾಜದೊಳಗಣ ಜನರ ವಿವಿಧ ಮುಖವಾಡಗಳನ್ನು ಪರಿಚಯಿಸುತ್ತದೆ ,

ಸೋಲಿನಿಂದ ಇಷ್ಟೆಲ್ಲಾ ಪ್ರಯೋಜನವಿದ್ದರು ಸೋಲನ್ನೆದುರಿಸಲು ಮಾನಸಿಕವಾಗಿ ತುಂಬಾ ಗಟ್ಟಿಗರಾಗಿರಬೇಕು ಅದಕ್ಕೆ ದೃಢವಾದ ಮನಸ್ಸು , ನಿಖರವಾದ ಆಲೋಚನಾ ಲಹರಿ ಅತ್ಯವಶ್ಯ ಅದಕ್ಕೆ ಗುರು – ಹಿರಿಯರ ಮಾರ್ಗದರ್ಶನ, ಸ್ನೇಹಿತರ ಸಹಕಾರ ತುಂಬಾ ಅತ್ಯಗತ್ಯ ಆದ್ದರಿಂದ ಮಕ್ಕಳನ್ನಾಗಲಿ ಯುವಕರನ್ನೇ ಆಗಲಿ ಸದಾ ಓದು ಬರಹಕ್ಕೆ ಸಿಮೀತಗೊಳಿಸದೇ ಮಾನಸಿಕ ಸಾಮರ್ಥ್ಯ ಹೆಚ್ಚಿಸುವಂತಹ ಯೋಗ, ದೈಹಿಕವಾಗಿ ಸದೃಡರಾಗಲು ಕರಾಟೆ , ನೃತ್ಯ ಜೊತೆಗೆ ಕಲೆ ಸಾಹಿತ್ಯ , ಸಂಗೀತ, ಕ್ರೀಡೆ ಹೀಗೆ ವಿವಿಧ ಕ್ಷೇತ್ರದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಇದರಿಂದ ಅವರ ಮನಸ್ಸು ಸದೃಢವಾಗುತ್ತದೆ.

ಕ್ರೀಡೆಯು ಸಮಾನ ವಯಸ್ಕರ ಜೊತೆ ಸ್ಪರ್ಧಾ ಮನೋಭಾವವನ್ನು ಬೆಳೆಸುವುದಲ್ಲದೆ ಸೋಲು ಗೆಲುವುಗಳನ್ನು ಸಮಾನವಾಗಿ ತೆಗೆದುಕೊಳ್ಳಬೇಕೆಂಬ ಪಾಠ ಕಲಿಸುತ್ತದೆ , ಇದನ್ನು ಮುಂದೆಯೂ ತಮ್ಮ ವೈಯಕ್ತಿಕ  ಜೀವನದಲ್ಲಿ ಅಳವಡಿಸಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ. ಕಥೆ, ಕವನ ಇನ್ನೂ ಮುಂತಾದ ಪ್ರಚಲಿತ ವಿದ್ಯಮಾನಗಳಿಗೆ ಒಂದುವಂತಹ ಲೇಖನಗಳನ್ನು ಬರೆಯುವುದರಿಂದ ಸಮಾಜದ ಏರಿಳಿತಗಳನ್ನು ಅರಿತುಕೊಳ್ಳಬಹುದು.

ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಅವರಿಗೆ  ಸಮಾಜದೊಂದಿಗಿದ್ದು ಸಾಧನೆ ಗೈದ ಸಾಧಕರ ಪರಿಚಯವಾಗುತ್ತದೆ ಜೊತೆಗೆ ಸೋಲು ಗೆಲವುಗಳನ್ನು ಮೆಟ್ಟಿನಿಂತು ಸಾಧನೆಗೈದ ಅವರ ಸಹಾಸಗಾದೆ ಅರಿವಾಗುತ್ತದೆ. ಮುಂದೆ ಅವರ ಜೀವನದಲ್ಲಿಯೂ ಒಂದೊಮ್ಮೆ ಆಕಸ್ಮಾತಾಗಿ  ಅಂತಹ ಕ್ಲಿಷ್ಟಕರ ಸಂಧರ್ಭಗಳೇ ಎದುರಾದರೂ ಅವುಗಳನ್ನು ಚಾಕಚಕ್ಕೆತೆ ನಿಭಾಯಿಸಿ ಹೊರಬರಲು   ಸಹಕಾರಿಯಾಗುತ್ತದೆ.

ಮನುಷ್ಯ  ತಾನು ಮಾಡೊ ಯಾವುದೇ ಕೆಲಸದಲ್ಲಿ ಅದೃಷ್ಟವನ್ನು ನಂಬಿ ಕೈಕಟ್ಪಿ ಕುಳಿತುಕೊಳ್ಳದೆ, ಗೆದ್ದೆ  ಗೆಲ್ಲುತ್ತೇನೆಂಬ ದೃಢವಾದ ವಿಶ್ವಾಸ ನಂಬಿಕೆಯಿಂದ ಹಿಡಿದ ಕೆಲಸವನ್ನು ಎಡ ಬಿಡದೇ ತಾಳ್ಮೆ, ಶ್ರದ್ಧೆಯಿಂದ, ನಿರಂತರವಾಗಿ ಪರಿಶ್ರಮ ಪಟ್ಟರೆ ಸೋಲನ್ನೂ ಕೂಡ ಒಂದು ದಿನ  ಮೆಟ್ಪಿನಿಂತು ಗೆಲುವಿನ ದಡ ಮುಟ್ಪಬಹುದು. ಜಯಶೀಲರಾಗಬಹುದು.

ಬಾದಾಮಿ ರಾಧಾಕೃಷ್ಣ ನಾಯಕ
ವಾರ್ತಾ ಇಲಾಖೆ ಪ್ರಶಿಕ್ಷಣಾರ್ತಿ
ಬಳ್ಳಾರಿ, – ಫೋನ್ ನಂ:8095370824

Related posts

“ಆರೋಗ್ಯ ರಕ್ಷಣೆಯಲ್ಲಿ ‘ಉಪವಾಸ ವ್ರತಾಚರಣೆ ಒಂದು ಅಸ್ತ್ರವಿದ್ದಂತೆ” – ದೇಹಕ್ಕೆ ನಿಜವಾಗಲೂ ಪ್ರಯೋಜನಗಳಿವೆಯಾ..,?

Siddu Naduvinmani

ಜಗತ್ತಿನ ಎಲ್ಲ ಅವ್ವಂದಿರಿಗೆ…

Hasiru Kranti

ಅಸಹನೆ, ಅಭರವಸೆಯ ಸ್ವಾತಂತ್ರ್ಯ

Hasiru Kranti

Leave a Comment