Hasirukranti
leadingnews ಬೆಳಗಾವಿ

ಬೆಳಗಾವಿಯಲ್ಲಿಂದು ಐವರು ಕೊರೋನಾಗೆ ಬಲಿ : 319 ಜನರಿಗೆ ಪಾಸಿಟಿವ್

 

ಬೆಳಗಾವಿ, ಆ.24 : ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾರ್ಭಟ ಮುಂದುವರೆದಿದ್ದು, ಇಂದು ಮತ್ತೆ 319 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಜೊತೆಗೆ ಐವರು ಸೋಂಕಿನಿಂದ ಮೃತಪಟ್ಟಿದ್ದಾರೆ‌. 250 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಹೌದು ಸೋಮವಾರ ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ ಕಿಲ್ಲರ್ ಕೊರೊನಾ ತನ್ನ ಅಟ್ಟಹಾಸ ಮೆರೆದಿದೆ. ಇಂದು ಕೊರೋನಾಗೆ ಮೃತಪಟ್ಟಿದವರಲ್ಲಿ ಬೆಳಗಾವಿಯ 72 ವರ್ಷದ ವೃದ್ಧೆ ಮತ್ತು 58 ವರ್ಷದ ಮಹಿಳೆ, ಹುಕ್ಕೇರಿ ತಾಲೂಕಿನ 65 ವರ್ಷದ ವೃದ್ಧ, ರಾಯಬಾಗ ತಾಲೂಕಿನ 65 ವರ್ಷದ ವೃದ್ಧೆ ಮತ್ತು 40 ವರ್ಷದ ಮಹಿಳೆ ಸೇರಿದಂತೆ ಒಟ್ಟು ಐದು ಸೋಂಕಿತರು ಕೋವಿಡ್ 19 ನಿಂದ ಬಲಿಯಾಗಿದ್ದಾರೆ.

ಇಂದು 319 ಜನರಿಗೆ ಸೋಂಕು ಹರಡುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10,262ಕ್ಕೆ ಏರಿಕೆಯಾಗಿದೆ. ಇಂದು ಐವರನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾದಿಂದ ಬಲಿಯಾದವರ ಸಂಖ್ಯೆ 161ಕ್ಕೆ ಏರಿಕೆಯಾಗಿದೆ. ಜೊತೆಗೆ ಇಂದು 250 ಸೋಂಕಿತರು ಸೇರಿ ಇಲ್ಲಿಯವರೆಗೆ 6001 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 4100 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 1463 ಜನರ ಶಂಕೀತರ ವರದಿ ಬರಬೇಕಿದೆ ಎಂದು ಹೆಲ್ತ್ ಬುಲೆಟಿನ್ ತಿಳಿಸಲಾಗಿದೆ.

 

Related posts

ಐಪಿಎಲ್; ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಆರ್ ಸಿಬಿ

Siddu Naduvinmani

ಕೋರೋನ ಸೈನಿಕರಿಗೆ ಶ್ರೀಗಳಿಂದ ಅನ್ನ ಪ್ರಸಾದ

Hasiru Kranti

ಅಗರಖೇಡ ಪ್ರವಾಹ ಸಂತ್ರಸ್ತರಲ್ಲಿ ಆತ್ಮಸ್ತೈರ್ಯ ತುಂಬಿದ ಸಚಿವರು

Siddu Naduvinmani

Leave a Comment