Hasirukranti
leadingnews ತಂತ್ರಜ್ಞಾನ ರಾಜ್ಯ ರಾಷ್ಟ್ರೀಯ

ವಾಟ್ಸಾಪ್ ಬಳಕೆದಾರರಿಗೆ ಶುಭ ಸುದ್ದಿ : ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಯಾರ್ಕ, ಆ.23 ; ಈ ವಾರ ವಾಟ್ಸಾಪ್ ನಲ್ಲಿ ಹೊಸ ಹೊಸ ಅಪ್ ಡೇಟ್ ಗಳು ಬರಲಿದ್ದು ಚಿತ್ತಾಕರ್ಷಕ ಫೀಚರ್ ಗಳು ಸೇರ್ಪಡೆಗೊಳ್ಳುತ್ತಿದೆ. ಮಾತ್ರವಲ್ಲದೆ ತನ್ನ ಅಪ್ಲಿಕೇಶನ್ ನನ್ನು ಇನ್ನಷ್ಟು ಆಕರ್ಷವಾಗಿಸುತ್ತಿದೆ. ಇದು ವಾಟ್ಸಾಪ್ ಬಳಕೆದಾರರಿಗೆ ಶುಭ ಸುದ್ದಿ ನೀಡಲಿದೆ.

ಕರೆ ಸುಧಾರಣೆಗಳು (Call UI improvements): ವಾಟ್ಸಾಪ್ ಕಾಲ್ ನ ಫೀಚರ್ ಗಳಲ್ಲಿ ಕೂಡ ಕೆಲವೊಂದು ಬದಲಾವಣೆ ಮಾಡಲಾಗಿದೆ. ಇಲ್ಲಿ ಕಂಡುಬರುವ ಮೂವಿಂಗ್ ಬಟನ್ ಗಳನ್ನು ಸ್ಕ್ರೀನ್ ನ ತಳಭಾಗದಲ್ಲಿ ಕಾಣಿಸುವಂತೆ ಪರಿವರ್ತಿಸಲಾಗಿದೆ. ಈ ಫೀಚರ್ ಇನ್ನೂ ಕೂಡ ಅಭಿವೃದ್ಧಿ ಹಂತದಲ್ಲಿದೆ.

ಹೊಸ ಐಕಾನ್: ಕ್ಯಾಮಾರ ಸೇರಿದಂತೆ ವಿವಿಧ ಹೊಸ ಐಕಾನ್ ಗಳು ಜಾರಿಗೆ ಬರಲಿದ್ದು ಶಾರ್ಟ್ ಕಟ್ ಗಳು ಕೂಡ ಲಭ್ಯವಿರುತ್ತದೆ. ಈಗಾಗಲೇ ಮೆಸೆಂಜರ್ ರೂಂ ಅನ್ನು ಶಾರ್ಟ್ ಕಟ್ ಆಗಿ ನೀಡಲಾಗಿದೆ. ಈ ಫೀಚರ್ ಕೂಡ ವಾಟ್ಸಾಪ್ ಸಂಸ್ಥೆಯ ಬೇಟಾ ಆವೃತ್ತಿಯಲ್ಲಿ ಲಭ್ಯವಿದೆ.

ಸ್ಟಿಕ್ಕರ್ ಆ್ಯನಿಮೇಷನ್: ವಾಟ್ಸಾಪ್ ಇದೀಗ ಹೊಸ ಮಾದರಿಯ ಆ್ಯನಿಮೇಟೆಡ್ ಸ್ಟಿಕ್ಕರ್ ಅನ್ನು ಅಳವಡಿಸಿದೆ. ಮಾತ್ರವಲ್ಲದೆ ಈ ಸ್ಟಿಕ್ಕರ್ ಗಳು ಹಲವಾರು ಫ್ರೇಮ್ ಗಳನ್ನು ಕೂಡ ಒಳಗೊಂಡಿದೆ.

ಅಡ್ವಾನ್ಸ್ ಸರ್ಚ್ ಮೋಡ್ (Advanced Search mode): ಫೀಚರ್ ಪ್ರಕಾರ ವಾಟ್ಸಾಪ್ ನಲ್ಲಿ ಸರ್ಚ್ ಬಟನ್ ಇನ್ನಷ್ಟು ಸುಧಾರಿತವಾಗುತ್ತಿದೆ. ಅಂದರೇ ವಿಡಿಯೋ, ಫೆÇೀಟೋ, ಡಾಕ್ಯುಮೆಂಟ್ ಸೇರಿದಂತೆ ಇತರ ಬಟನ್ ಗಳನ್ನು ಸರ್ಚ್ ಆಯ್ಕೆಯಲ್ಲಿ ಸೇರಿಸಲಾಗಿದ್ದು, ನಿರ್ದಿಷ್ಟ ಮೆಸೇಜ್ ಹುಡುಕಾಡಲು ಸುಲಭ ಸಾಧ್ಯವಾಗುತ್ತದೆ. ಈ ಆಯ್ಕೆ ಈಗಾಗಲೇ ವಾಟ್ಸಾಪ್ ಬೇಟಾ ಆವೃತ್ತಿಯಲ್ಲಿ ಬಂದಿದೆ.

ಗ್ರೂಪ್ ಕಾಲ್ ಗಳಿಗೆ ರಿಂಗ್ ಟೂನ್: ವಾಟ್ಸಾಪ್ ಇದೀಗ ರಿಂಗ್ ಟೂನ್ ಗಳಲ್ಲೂ ಆಯ್ಕೆಯನ್ನು ನೀಡಿದೆ. ಬಳಕೆದಾರರು ತಮಗಿಷ್ಟವಾದ ರಿಂಗ್ ಟೂನ್ ಗಳನ್ನು ಪ್ರತೀ ವಾಟ್ಸಾಪ್ ಕಾಲ್ ಗಳಿಗೆ ಇರಿಸಿಕೊಳ್ಳಬಹುದು. ಈ ಫೀಚರ್ ಕೂಡ ಈಗಾಗಲೇ ಬೇಟಾ ಆವೃತ್ತಿಯಲ್ಲಿ ಲಭ್ಯವಿದೆ.

Related posts

ಬಿ.ಜೆ.ಪಿ ಸರಕಾರಕ್ಕೆ ಉಪ್ಪಾರ ಸಮಾಜದಿಂದ ಎಚ್ಚರಿಕೆ ಗಂಟೆ-ಚನ್ನಪ್ಪ ವಗ್ಗನ್ನವರ

Siddu Naduvinmani

ಒಂಟಿಯಾಗಿ ವಾಹನ ಚಲಾಯಿಸುತ್ತಿದ್ದರೆ ಆತ ಮಾಸ್ಕ್ ಧರಿಸುವ ಅಗತ್ಯವಿಲ್ಲ, ದಂಡವೂ ಹಾಕುವಂತಿಲ್ಲ ; ಕೇಂದ್ರ

Siddu Naduvinmani

ರಾಜ್ಯದಲ್ಲಿ ಕೊರೊನಾ ನಿಯಂತ್ರಣದತ್ತ

Hasiru Kranti

Leave a Comment