Hasirukranti
leadingnews ಉದ್ಯೋಗ ರಾಜ್ಯ ವಾಣಿಜ್ಯ

ಕೊರೋನಾ ಎಫೆಕ್ಟ್ ದಿಂದ ಮಾವಿಗೆ ಬರ

 ಮಾರುಕಟ್ಟೆಯಲ್ಲಿ ಹಣ್ಣು ದುಬಾರಿ – ಗ್ರಾಹಕರ ಆಸೆಗೆ ನಿರಾಸೆ 

ಬೆಳಗಾವಿ : ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ಭಾರತ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಮಾವಿನ ಹಣ್ಣಿನ ಸುಗ್ಗಿ ಕಾಲಕ್ಕೆ ಬಿಸಿ ತಟ್ಟಿದೆ. ಹಣ್ಣು ಸರಕು ಸಾಗಣೆಗೆ ಒದಗಿದ ಅಡ್ಡಿಯಿಂದ ಮಾವಿನಹಣ್ಣು ಬೆಳಗಾವಿ ಮಾರುಕಟ್ಟೆ ತಲುಪುತ್ತಿಲ್ಲ. ತಲುಪಿದ ಹಣ್ಣುಗಳು ದುಬಾರಿ ಬೆಲೆಯ ಕಾರಣದಿಂದ ಗ್ರಾಹಕರ ಕೈಗೆ ಎಟುಕುತ್ತಿಲ್ಲ, ಗ್ರಾಹಕರ ಆಸೆಗೆ ನಿರಾಸೆಯಾಗಿದೆ.

ಪ್ರತಿ ವರ್ಷ ಬಸವ ಜಯಂತಿ ವೇಳೆಗೆ ಮನೆ ಮನೆಗೆ ಬರುತ್ತಿದ್ದ ಮಾವು ಈ ಸಲ ದುಬಾರಿ ಬೆಲೆಯಿಂದ ದೂರವೇ ಉಳಿದಿದೆ. ಬಸವ ಜಯಂತಿ ಹತ್ತಿರ ಬಂದರೂ ಮಾವಿನಹಣ್ಣು ತೋಟದಿಂದ ಕಟಾವಾಗಿ ಸಾಗಣೆಗೆ ಸಿದ್ಧವಾಗುತ್ತಿಲ್ಲ. ಕೊರೋನಾ ಸೋಂಕು ತಡೆ ಹಿನ್ನೆಲೆಯಲ್ಲಿ ಘೋಷಣೆಯಾಗಿರುವ ಭಾರತ ಬಂದ್‍ನಿಂದ ಮಾವಿನಹಣ್ಣು ಮಾರುಕಟ್ಟೆಗೆ ಬರುವುದು ನಿಂತಿದೆ. ಸ್ಥಳೀಯವಾಗಿ ಸಿಗುವ ಮಾವಿನಹಣ್ಣುಗಳೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ಈ ಹಣ್ಣುಗಳು ಕೂಡ ಗ್ರಾಹಕರ ಕೈಗೆ ದುಬಾರಿ ಬೆಲೆಯಾಗಿ ಸಿಗುತ್ತಿದ್ದಾವೆ.

ಪ್ರತಿ ವರ್ಷದಂತೆ ಬೆಳಗಾವಿ ಮಾರುಕಟ್ಟೆಗೆ ಆಗಮಿಸುತ್ತಿರುವ ದೇವಗಡ, ರತ್ನಾಗಿರಿ, ಆಫೂಸು, ಅಲ್ಫಾನ್ಸೋ ಎಂದು ವಿಧ ವಿಧ ಜಾತಿಯ ಹಣ್ಣುಗಳ ಬರ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಸ್ಥಳೀಯವಾಗಿ ಲಭ್ಯ ಮಾವಿನಹಣ್ಣುಗಳೇ ಗ್ರಾಹಕರ ಪಾಲಿಗೆ ಎಂಬಂತಾಗಿದೆ. ಬಂದ್ ಪರಿಣಾಮ ಮಾವಿನಹಣ್ಣುಗಳ ಮಾರುಕಟ್ಟೆಗೆ ಲಗ್ಗೆ ಇಡುವುದು ಅನುಮಾನ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಒಂದು ಡಜನ್ ಮಾವಿನಹಣ್ಣಿಗೆ 1000 ರೂ. ದಿಂದ 1200 ರೂ.ವರೆಗೂ ಬೆಲೆ ಕಂಡುಬರುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಚ್ಚಿ ಬೀಳಿಸಿದೆ.

ಲಾಕ್ ಡೌನ್ ದಿಂದ ಮಾವಿನಹಣ್ಣಿಗೆ ಬರ ಬಂದಂತಾಗಿದ್ದು, ಪ್ರತಿ ವರ್ಷ ಬಸವ ಜಯಂತಿ ವೇಳೆ ಮನೆ ಮನೆಗೆ ಬರುತ್ತಿದ್ದ ಮಾವು ಈ ಸಲ ದುಬಾರಿ ಬೆಲೆಯಿಂದ ದೂರವೇ ಉಳಿದಿದೆ. ಒಟ್ಟಿನಲ್ಲಿ ದುಬಾರಿ ಮಾವು ಬೆಲೆ ಕಡಿಮೆಯಾಗಿ ಗ್ರಾಹಕರ ಕೈಗೆ ಸಿಗುತ್ತದೆ ಎಂಬುದು ಕಾದು ನೋಡಬೇಕಾಗಿದೆ. 

ಮಾವು ಸಾಗಣೆಗೆ ಗಾಡಿ ಬಿಡುತ್ತಿಲ್ಲ. ಹಾಗಾಗಿ ಮಾವು ಕಟಾವು ಸ್ಥಗಿತಗೊಂಡಿದೆ. ಸ್ಥಳೀಯವಾಗಿ ಲಭ್ಯ ಇರುವ ಮಾವಿನಹಣ್ಣುಗಳೇ ಈಗ ಮಾರುಕಟ್ಟೆಗೆ ಸರಕುವಾಗಿವೆ. ಮಾರುಕಟ್ಟೆ ಬಂದ್ ಇದ್ದು, ವ್ಯಾಪಾರಕ್ಕೂ ಅಡಚಣೆಯಾಗಿದೆ, ಜತೆಗೆ ಬೆಲೆಯೂ ದುಬಾರಿಯಾಗಿದೆ. 
        –> ವ್ಯಾಪಾರಸ್ಥ 

ಸಾಗಣೆಗೆ ತೊಂದರೆ ಇರುವುದರಿಂದ ಮಾವು ಬರುತ್ತಿಲ್ಲ, ಹೋಗುತ್ತಿಲ್ಲ. ಮಾರುಕಟ್ಟೆ ಕಠಿಣವಾಗಿದೆ, ಮಾವು ಕೈಗೆ ಸಿಗುತ್ತಿಲ್ಲ. 
        –> ಗ್ರಾಹಕ

Related posts

ಕೊರೊನಾ ಸಂಕಷ್ಟ : ತೆಲಂಗಾಣ ಮತ್ತು ಆಂದ್ರದಿಂದ ಬಳ್ಳಾರಿಗೆ ಸಾರ್ವಜನಿಕರ ಓಡಾಟ ನಿರ್ಬಂಧಿಸಿದ ಜಿಲ್ಲಾಡಳಿತ

Hasiru Kranti

ಬೆಳಗಾವಿಯಲ್ಲಿ 22 ಸೇರಿ ರಾಜ್ಯದಲ್ಲಿ ಇಂದು ಮತ್ತೆ 53 ಹೊಸ ಸೋಂಕು ಪತ್ತೆ

Hasiru Kranti

ನೇಸಲ್ ಕೆನೂಲಾ ಆಕ್ಸಿಜನ್ ಉಪಕರಣ ಬಿಮ್ಸ್ ಗೆ ಸಮರ್ಪಿಸಿದ ಸಿಎಂ ಯಡಿಯೂರಪ್ಪ

Siddu Naduvinmani

Leave a Comment