Hasirukranti
leadingnews ಅಂತಾರಾಷ್ಟ್ರೀಯ

ಕೊರೊನಾ ಸೋಂಕಿಗೆ ರಷ್ಯಾದಿಂದ ಮೊದಲ ಲಸಿಕೆ ಸಿದ್ದ : ಪುಟಿನ್ ಮಗಳಿಗೆ ಲಸಿಕೆ ನೀಡಲಾಗಿದೆ

ಮಾಸ್ಕೊ ಆ., 11- ಕೊರೊನಾ ಸೋಂಕಿಗೆ ಸುಸ್ಥಿರ ರೋಗ ನಿರೋಧಕ ಶಕ್ತಿ ನೀಡುವ ವಿಶ್ವದ ಮೊದಲ ಲಸಿಕೆಯನ್ನು ರಷ್ಯಾ ಅಭಿವೃದ್ದಿಪಡಿಸಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಣೆ ಮಾಡಿದ್ದಾರೆ.
ವಿಶ್ವದಲ್ಲಿಯೇ ಮೊದಲ ಕೋವಿಡ್ -19 ಗೆ ಲಸಿಕೆಯನ್ನು ನೋಂದಾಯಿಸಲಾಗಿದೆ ಮತ್ತು ತಮ್ಮ ಮಗಳಿಗೆ ಈಗಾಗಲೇ ಈ ಲಸಿಕೆಯನ್ನು ನೀಡಲಾಗಿದೆ ಎಂದು ಪುಟಿನ್ ತಮ್ಮ ಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಪರೆನ್ಸನಲ್ಲಿ ಹೇಳಿದ್ದಾರೆ.
ರಷ್ಯಾದಲ್ಲಿ ಅಭಿವೃದ್ದಿ ಪಡಿಸಲಾಗಿರುವ ಕೊರೊನಾ ಲಸಿಕೆ ಜನರ ಬಳಕೆಗೆ ಬಿಡುಗಡೆಯಾಗಲಿದೆ. ರಷ್ಯಾದ ಆರೋಗ್ಯ ಇಲಾಖೆ ಲಸಿಕೆ ಮಾರುಕಟ್ಟೆಗೆ ಬಿಡುಗಡೆಗೆ ಮಾಡಲು ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ನೀಡಿದ್ದು, ಈ ಮೂಲಕೆ ಕೋವಿಡ್ 19 ಲಸಿಕೆ ಮಂಗಳವಾರ ಅಧಿಕೃತವಾಗಿ ನೋಂದಣಿಯಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಮಾಸ್ಕೊದ ಗಮೆಲಿಯಾ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ಲಸಿಕೆ ಅಭಿವೃದ್ದಿಪಡಿಸಿವೆ ಎನ್ನಲಾಗಿದೆ. ಜೂನ್ 18 ರಿಂದ ಕ್ಲಿನಿಕಲ್ ಪ್ರಯೋಗಗಳನ್ನು ಮನುಷ್ಯನ ಮೇಲೆ ಆರಂಭಿಸಲಾಗಿತ್ತು. ಈ ಪ್ರಯೋಗಕ್ಕೆ ಒಳಗಾಗಿದ್ದವರ ಪೈಕಿ ಮೊದಲ ಗುಂಪು ಜುಲೈ 15 ರಂದು ಮತ್ತು ಎರಡನೇ ಗುಂಪು ಜುಲೈ 20 ರಂದು ಗುಣಮುಖರಾಗಿ ಸಂಶೋಧನಾ ಕೇಂದ್ರಗಳಿಂದ ಬಿಡುಗಡೆಯಾಗಿದ್ದು, ಮನೆಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಮುಂದಿನ ದಿನಗಳಲ್ಲಿ ಈ ಲಸಿಕೆಯ ತಯಾರಿಕಾ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿ ಕೆಲವೇ ದಿನಗಳಲ್ಲಿ ಲಕ್ಷಗಟ್ಟಲೇ ಲಸಿಕೆಯನ್ನು ತಯಾರಿಸಲಾಗುತ್ತದೆ ಎಂದು ರಷ್ಯಾ ಹೇಳಿಕೊಂಡಿದೆ.

Related posts

ಕೊರೋನಾ ಭೀತಿಯ ನಡುವೆ ಡೆಂಘೀ ಪ್ರಕರಣದಲ್ಲೂ ಹೆಚ್ಚಳ!

admins

SBI ನ ನೂತನ ಅಧ್ಯಕ್ಷರಾಗಿ ದಿನೇಶ್​ ಕುಮಾರ್ ಖರಾ ನೇಮಕ

Siddu Naduvinmani

ಲಾಕ್ಡೌನ್ ವೇಳೆ : ಶ್ರಮಿಕ್ ರೈಲಿನಲ್ಲಿ ಈವರೆಗೆ 97 ಜನ ಕಾರ್ಮಿಕರು ಮೃತಪಟ್ಟಿದ್ದಾರೆ – ಸಚಿವ ಗೋಯಲ್

Siddu Naduvinmani

Leave a Comment