Hasirukranti
leadingnews ಅಂತಾರಾಷ್ಟ್ರೀಯ

ಒಂದೇ ದಿನದಲ್ಲಿ 1 ಲಕ್ಷ ಜನರಿಗೆ ಸೋಂಕು

ನವದೆಹಲಿ ಮೇ., 21 – ಜಗತ್ತಿನಾದ್ಯಂತ ಮಾಹಾಮಾರಿ ಕೊರೊನಾ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಲೇ ಸಾಗಿದೆ. ನಿನ್ನೆ ಬುಧವಾರ ಒಂದೇ ದಿನದಲ್ಲಿ ಜಗತ್ತಿನಾದ್ಯಂತ 100474 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 50,83,411ಕ್ಕೆ ಏರಿಕೆಯಾಗಿದೆ.
ಕೊರೊನಾ ಸೋಂಕಿನಿಂದ ಜಗತ್ತಿನಾದ್ಯಂತ 50 ಲಕ್ಷಕ್ಕು ಅಧಿಕ ಜನರಿಗೆ ಸೋಂಕು ತಗುಲಿದ್ದು, ಸುಮಾರು 3,29,239ಜನ ನಿಧನರಾಗಿದ್ದಾರೆ. ನಿನ್ನೆ ಬುಧವಾರ ಒಂದೇ ದಿನದಲ್ಲಿ ಜಗತ್ತಿನಾದ್ಯಂತ 4685 ಜನ ಮೃತಪಟ್ಟಿದ್ದಾರೆ.
ಒಟ್ಟು 50,83,411 ಸೋಂಕಿತರಲ್ಲಿ 20,20,879ಜನ ಗುಣಮುಖರಾಗಿದ್ದಾರೆ. ಇನ್ನು 27,33,293 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದೇ ದಿನ ಅತೀ ಹೆಚ್ಚು ಸೋಂಕು ಪತ್ತೆಯಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ ಸಹ ಪ್ರಥಮ ಐದು ದೇಶಗಳಲ್ಲಿ ಬರುತ್ತದೆ.
ನಿನ್ನೆ ಬುಧವಾರ ಒಂದೇ ದಿನ ಅತೀ ಹೆಚ್ಚು ಸೋಂಕು ಪತ್ತೆಯಾದ 5 ದೇಶಗಳ ಪಟ್ಟಿ ಇಂತಿದೆ : ಅಮೇರಿಕಾದಲ್ಲಿ 22140, ಬ್ರೇಜಿಲ್ 21472, ರಷ್ಯಾ 8764, ಭಾರತ 5553, ಪೇರು 4537 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

Related posts

ಶೇರು ಸದಸ್ಯರ ಹಕ್ಕನ್ನು ಕಸಿದುಕೊಂಡು ಶಾಸಕ ಮಹಾದೇವಪ್ಪ ಯಾದವಾಡ : ಮಾಜಿ ಶಾಸಕ ಅಶೋಕ ಪಟ್ಟಣ ಆರೋಪ

Siddu Naduvinmani

ಕೊರೋನಾ ಎಫೆಕ್ಟ್ ದಿಂದ ಮಾವಿಗೆ ಬರ

Hasiru Kranti

ಕರ್ನಾಟಕದ ಮಳೆ ನಕ್ಷೆ ; ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಹೆಚ್ಚಳ

Siddu Naduvinmani

Leave a Comment