Hasirukranti
leadingnews ಉದ್ಯೋಗ ರಾಜ್ಯ

ಎಲ್ಲೆಲ್ಲೂ ಹರಕೆಯ ಭಂಡಾರ: ಹಳದಿ ಬಣ್ಣದ ಚಿತ್ತಾರ; ಚಿಕ್ಕೋಡಿಯ ಜಾತ್ರೆಯಲ್ಲಿ ಭಕ್ತರ ದಂಡು

ಚಿಕ್ಕೋಡಿ; ಜಾತ್ರೆಗಳಂದರೇ ಏನೋ ಒಂಥರ ವಿಶಿಷ್ಟ ಅಚರಣೆಗಳೇ ಇರುತ್ತವೆ. ಒಂದೊಂದು ಜಾತ್ರೆಯಲ್ಲಿ ಒಂದೊಂದು ತೆರನಾದ ಆಚರಣೆ.. ಈ ಆಚರಣೆಗೆ ಅದರದೇ ಆದ ಹಿನ್ನೆಲೆ ಇರುತ್ತೆ…ಇಲ್ಲೊಂದು ಜಾತ್ರೆ ನಡೆಯುತ್ತೆ. ಈ ಜಾತ್ರೆಯಲ್ಲಿ ಭಂಡಾರ ತೂರಿ ಹರಕೆ ತೀರಿಸೋದು ನಡೆದು ಬಂದ ಸಂಪ್ರದಾಯ. 

ಹೌದು, ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ಅರಣ್ಯ ಸಿದ್ದೇಶ್ವರ ಹಾಗೂ ಮಲಕಾರಿ ಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಪ್ರತಿ ವರ್ಷವೂ ಕೂಡ ಭಂಡಾರವನ್ನು ಹಾರಿಸಿ ದೇವರಿಗೆ ನಮಿಸೋದು ಇಲ್ಲಿನ ಸಂಪ್ರದಾಯ. ಭಂಡಾರ ಹಾರಿಸುವುದಾಗಿ ಈ ದೇವರಿಗೆ ಬೇಡಿಕೆ ಹೊತ್ತರೆ ತಮ್ಮ ಬೇಡಿಕೆ ಈಡೇರುತ್ತೇ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ. 

ಕಳೆದ ಹಲವು ವರ್ಷಗಳಿಂದ ಜಾತ್ರೆಯಲ್ಲಿ ಭಂಡಾರ ಹಾರಿಸುವ ರೂಢಿ ಬೆಳೆದುಕೊಂಡು ಬಂದಿದೆ. ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯು ಇಂದು ಸಮಾರೋಪಗೊಂಡಿದ್ದು , ಜಾತ್ರೆಯ ಕೊನೆಯ ದಿನವಾದ ಇಂದು ದೇವರ ಪಲ್ಲಕ್ಕಿಯ ಮೇಲೆ ಜನರು ಭಂಡಾರ ತೂರುವ ಮೂಲಕ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು. ಕೆಲವರು ಭಂಡಾರ ಹಾರಿಸಿ ವರವ ಕೊಡು ದೇವರೇ ಎಂದು ತಮ್ಮ ನಿವೇದನೆಯನ್ನು ದೇವರ ಮುಂದೆ ಇಟ್ಟರೆ, ಇನ್ನು ಕೆಲವರು ಬೇಡಿಕೆ ಈಡೇರಿದ ಮೇಲೆ ಹರಕೆ ತೀರಿಸುವ ಡಿಮ್ಯಾಂಡ್ ದೇವರ ಮುಂದಿಟ್ಟಿದ್ದಾರೆ.

ಇದೊಂದು ಜಾತ್ರೆಯಲ್ಲಿ ಅಷ್ಟೇ ಅಲ್ಲ, ಸವದತ್ತಿಯ ಯಲ್ಲಮ್ಮ, ಯಲ್ಪಾರಟ್ಟಿಯ ಅರಣ್ಯ ಸಿದ್ದೇಶ್ವರ, ನವಲಿಹಾಳದ ಬೀರೇಶ್ವರ ಸೇರಿದಂತೆ ನೂರಾರು ಕಡೆಗೆ ಈ ಭಾಗದಲ್ಲಿ ದೇವರ ಪಲ್ಲಕ್ಕಿಯ ಮೇಲೆ ಭಂಡಾರವನ್ನು ತೂರುವುದು ಸಂಪ್ರದಾಯವಾಗಿದೆ.

Related posts

ತೆಲುಗಿನ ಕಿರುತೆರೆ ನಟಿ ನೇಣುಬಿಗಿದು ಆತ್ಮಹತ್ಯೆ

Siddu Naduvinmani

ರಾಜ್ಯಾದ್ಯಂತ ಬಾರೀ ಮಳೆ – ಹೀಗಿದೆ ಇಂದಿನ ಜಲಾಶಯಗಳ ನೀರಿನಮಟ್ಟ

Siddu Naduvinmani

ಭಾರತ-ಚೀನಾ ಗಡಿ ಸಂಘರ್ಷ : ಜೂ. 19ರಂದು ಸರ್ವಪಕ್ಷಗಳ ಸಭೆ ಕರೆದ ಮೋದಿ

Hasiru Kranti

Leave a Comment