ನೌಕಾದಳಕ್ಕೆ ಆಯ್ಕೆ ಆಗಿರುವ ಯೋಧರಿಗೆ ಸತ್ಕಾರ: ಸೈನಿಕರ ಸೇವೆಯ ಶ್ಲಾಘನೆ

Ravi Talawar
WhatsApp Group Join Now
Telegram Group Join Now

ಜಮಖಂಡಿ,ಎಪ್ರಿಲ್ 02: ಸಮೀಪದ ಮದರಂಖಂಡಿ ಗ್ರಾಮಸ್ಥರಿಂದ ನೌಕದಳಕ್ಕೆ ಆಯ್ಕೆಯಾದ ಇಬ್ಬರು  ಯೋಧರಿಗೆ  ಆತ್ಮೀಯವಾಗಿ  ಸನ್ಮಾಸಿ ಸ್ವಾಗತಿಸಲಾಯಿತು. ಮದರಖಂಡಿ ಗ್ರಾಮದ ಯೋಧ  ಅಭಿಷೇಕ ನಿಜಗುಣಿ ಖಿಳೆಗಾಂವ ಆಸಂಗಿ ಗ್ರಾಮದ ಯೋಧ ಮಂಜುನಾಥ ತೇಲಿ  ಓಡಿಶಾ ರಾಜ್ಯದ ಚಿಲಾಕದಲ್ಲಿ  ಐದು ತಿಂಗಳು ತರಬೇತಿ ಪಡೆದುಕೊಂಡು ಸ್ವಗ್ರಾಮಕ್ಕೆ ಆಗಮಿಸಿದ ಸಂಧರ್ಭದಲ್ಲಿ ಮದರಖಂಡಿಯಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಅಭಿಷೇಕ ಖಿಳೆಗಾಂವ ಕಾರವಾರ ನೌಕಾ ನೆಲೆಗೆ ಆಯ್ಕೆ ಆಗಿದ್ದು ಗುಜರಾತ ನೌಕಾನೆಲೆಗೆ ಆಸಂಗಿಯ ಮಂಜುನಾಥ ತೇಲಿ ಆಯ್ಕೆಯಾಗಿದ್ದಾರೆ. ಅಂಬಿ ಆರ್ಮಿ ಟೀಮ್ ಮದರಖಂಡಿ ಇವರು ಇಬ್ಬರು ಯೋಧರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸಿಹಿ ತಿನ್ನಿಸಿ ಶಾಲು ಹೊದಿಸಿ ಸನ್ಮಾನಿದರು.

 ಈ ಸಂಧರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ಹಣಮಂತ ಹೊಂಬಳ. ಅಂಬಿ ಆರ್ಮಿ ಟಿಮಿನ ಅಧ್ಯಕ್ಷ ಅಂಬರೀಷ್ ಜಂಗಪ್ಪನವರ. ದೇವರಾಯ ಮಾಳಿ. ಕೃಷ್ಣಾ ಬೆಳಗಲಿ ರಾಮಚಂದ್ರ ಪೂಜಾರಿ
ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article