ವಿವಿಧ ರಾಷ್ಟ್ರಗಳಿಂದ ‘ಕೋವಿಶೀಲ್ಡ್ ಲಸಿಕೆ’ ವಾಪಸ್: ‘ಆ್ಯಸ್ಟ್ರಾಜೆನಿಕಾ’ ಘೋಷಣೆ

Ravi Talawar
WhatsApp Group Join Now
Telegram Group Join Now

ಲಂಡನ್ 08: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಬಳಸಲಾಗಿದ್ದ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸಿದ್ದ ಬ್ರಿಟನ್ – ಸ್ವೀಡನ್ ಮೂಲದ ಬಹುರಾಷ್ಟ್ರೀಯ ಕಂಪನಿಯಾದ ಆಸ್ಟ್ರಾಜೆನಿಕಾ, ಜಗತ್ತಿನಾದ್ಯಂತ ತಾನು ಬಿಡುಗಡೆ ಮಾಡಿದ್ದ ಕೋವಿಶೀಲ್ಡ್ ಲಸಿಕೆಯನ್ನು ಹಿಂಪಡೆಯುತ್ತಿರುವುದಾಗಿ ಪ್ರಕಟಿಸಿದೆ.

ಇತ್ತಿಚೆಗೆ, ಬ್ರಿಟನ್ ನ ನ್ಯಾಯಾಲಯದಲ್ಲಿ ತೀರಾ ಅಪರೂಪದ ಪ್ರಕರಣಗಳಲ್ಲಿ ಈ ಲಸಿಕೆಯು ಅಡ್ಡಪರಿಣಾಮ ಉಂಟು ಮಾಡುತ್ತದೆ ಎಂದು ತಪ್ಪೊಪ್ಪಿಗೆ ವಿವರಣೆಯನ್ನು ಈ ಕಂಪನಿ ನೀಡಿತ್ತು. ಅದಾಗಿ, ಒಂದೇ ವಾರದಲ್ಲಿ ಜಗತ್ತಿನಲ್ಲೆಡೆಯಿಂದ ಕೋವಿಶೀಲ್ಡ್ ಲಸಿಕೆಯನ್ನು ಹಿಂಪಡೆಯುವುದಾಗಿ ಪ್ರಕಟಿಸಿದೆ. 2021ರ ನ. 16ರಂದು ಆ್ಯಸ್ಟ್ರಾಜೆನಿಕಾ ಸಂಸ್ಥೆ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ, ಜಗತ್ತಿನ ಮಧ್ಯಮ ಅಥವಾ ಕಡಿಮೆ ಆದಾಯವಿರುವ 130 ದೇಶಗಳಿಗೆ ತನ್ನ 17.5 ಕೋಟಿ ಡೋಸ್ ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿತ್ತು.

ಐರೋಪ್ಯ ರಾಷ್ಟ್ರಗಳಲ್ಲಿ ಈ ಲಸಿಕೆಯು ವ್ಯಾಕ್ಸ್ ಝೆವ್ರಿಯಾ ಎಂಬ ಹೆಸರಿನಲ್ಲಿ ವಿತರಣೆ ಮಾಡಲಾಗಿದ್ದು, ಭಾರತ ಹಾಗೂ ಇನ್ನೂ ಕೆಲವು ರಾಷ್ಟ್ರಗಳಲ್ಲಿ ಕೋವಿಶೀಲ್ಡ್ ಎಂಬ ಹೆಸರಲ್ಲಿ ವಿತರಿಸಲಾಗಿತ್ತು. ಬ್ರಿಟನ್ ನ ಪ್ರತಿಷ್ಠಿತ ಆಕ್ಸ್ ಫರ್ಡ್ ವಿದ್ಯಾಲಯ ಹಾಗೂ ಆ್ಯಸ್ಟ್ರಾಜೆನಿಕಾ ಕಂಪನಿಯು ಜಂಟಿಯಾಗಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದವು. 2020ರಲ್ಲಿ ಬಿಡುಗಡೆಯಾಗಿದ್ದ ಈ ಲಸಿಕೆಯನ್ನು ಎರಡು ಬಾರಿ ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು. ಮೊದಲ ಡೋಸ್ ಪಡೆದ ನಂತರ ಈ ಲಸಿಕೆಯು ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಶೇ. 77ರಷ್ಟು ಪರಿಣಾಮಕಾರಿಯಾಗಿರುತ್ತದೆ. ಆನಂತರ, ಎರಡನೇ ಡೋಸ್ ಪಡೆದಾದ ನಂತರ ಕೊರೊನಾವನ್ನು ತಡೆಗಟ್ಟಲು ಶೇ. 88ರಷ್ಟು ಪರಿಣಾಮಕಾರಿಯಾಗಿರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದರು.

ಐರೋಪ್ಯ ರಾಷ್ಟ್ರಗಳಲ್ಲಿ ಈ ಲಸಿಕೆಯನ್ನು ಪಡೆದವರಲ್ಲಿ ಕೆಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದರಿಂದಾಗಿ ಹಲವಾರು ಮಂದಿ ಲಸಿಕೆಯ ಮೇಲೆ ಅನುಮಾನಪಟ್ಟು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದರ ವಿಚಾರಣೆ ಇತ್ತೀಚಿನ ಕೆಲವು ವರ್ಷಗಳಿಂದ ನಡೆಯುತ್ತಿತ್ತು. ಕಳೆದ ವಾರ, ಬ್ರಿಟನ್ ನ್ಯಾಯಾಲಯದಲ್ಲಿ ಹೇಳಿಕೆಯನ್ನು ನೀಡಿರುವ ಕಂಪನಿಯ ಪ್ರತಿನಿಧಿಗಳು, ಈ ಲಸಿಕೆಯು ತೀರಾ ಅಪರೂಪದ ಪ್ರಕರಣಗಳಲ್ಲಿ ಟಿಟಿಎಸ್ (ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್) ಎಂಬ ಸಮಸ್ಯೆಯನ್ನು ಉಂಟು ಮಾಡುತ್ತದೆ. ಈ ಸಮಸ್ಯೆಯಿಂದ ಬಳಲುವವರಲ್ಲಿ ರಕ್ತದ ಪ್ಲೇಟ್ ಗಳ ಸಂಖ್ಯೆ ಇಳಿಮುಖವಾಗುತ್ತದೆ ಹಾಗೂ ರಕ್ತ ಹೆಪ್ಪುಗಟ್ಟುತ್ತದೆ ಎಂದು ಕಂಪನಿ, ನ್ಯಾಯಾಲಯಕ್ಕೆ ವಿವರಣೆ ನೀಡಿತ್ತು.

WhatsApp Group Join Now
Telegram Group Join Now
Share This Article