ಇಂದು ಕರುನಾಡಿಗೆ ಅಮಿತ್ ಶಾ ಎಂಟ್ರಿ: ನಾಳೆ ಡಿಕೆ ಬ್ರದರ್ಸ್ ಭದ್ರಕೋಟೆಯಿಂದಲೇ ರಣಕಹಳೆ!

Ravi Talawar
WhatsApp Group Join Now
Telegram Group Join Now

ಬೆಂಗಳೂರು,ಏ.01: ಕರ್ನಾಟಕದಲ್ಲಿ ಲೋಕಸಭಾ ಅಖಾಡ ರಂಗೇರಿದೆ. ಕದನಕಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಶಕ್ತಿ ತುಂಬಲು ಕರುನಾಡಿಗೆ ಅಮಿತ್ ಶಾ ಎಂಟ್ರಿ ನೀಡಲಿದ್ದಾರೆ. ಇಂದು ರಾತ್ರಿಯೇ ಬೆಂಗಳೂರಿಗೆ ಚುನಾವಣಾ ಚಾಣಕ್ಯ ಆಗಮಿಸಲಿದ್ದಾರೆ.

ನಾಳೆ ಡಿಕೆ ಬ್ರದರ್ಸ್ ಭದ್ರಕೋಟೆಯಿಂದಲೇ ರಣಕಹಳೆ ಮೊಳಗಿಸಲಿದ್ದಾರೆ. ಚನ್ನಪಟ್ಟಣದಲ್ಲಿ ಬೃಹತ್ ಸಮಾವೇಶ ನಡೆಸಿ ಡಾ.ಸಿ.ಎನ್ ಮಂಜುನಾಥ್ ಪರ ಮತಬೇಟೆ ನಡೆಸಲಿದ್ದಾರೆ. ಹಾಗೆ ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಬಿಜೆಪಿ ಗೆಲುವಿಗೆ ರೂಟ್‌ಮ್ಯಾಪ್ ಸಿದ್ಧಪಡಿಸಲಿದ್ದಾರೆ.

ಇಂದು ರಾತ್ರಿ 11 ಗಂಟೆಗೆ ಅಮಿತ್ ಶಾ ಬೆಂಗಳೂರಿಗೆ ಆಗಮಿಸಲಿದ್ದು, ಹೊಟೇಲ್ ತಾಜ್ ವೆಸ್ಟ್ ಆ್ಯಂಡ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ದಿನಪೂರ್ತಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

 

 

WhatsApp Group Join Now
Telegram Group Join Now
Share This Article